ಬೆಂಗಳೂರು: ಕಳೆದ ಕೆಲವು ದಿನಗಳಿಂದ ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ  ಮಾಜಿ ಮುಖ್ಯಮಂತ್ರಿ ಹಾಗೂ ಸಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯ ನವರನ್ನು  ಭೇಟಿ ಮಾಡಲು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು  ಉಜಿರೆಗೆ ಆಗಮಿಸಿದ್ದಾರೆ.


COMMERCIAL BREAK
SCROLL TO CONTINUE READING

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಜಿ ಪರಮೇಶ್ವರ್"  ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು  ನಮ್ಮ ನಾಯಕ. ಹಾಗಾಗಿ ಅವರ ಭೇಟಿಗೆ ಬಂದಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಇದೆ ವೇಳೆ ತಮ್ಮ ವಿರುದ್ದ ಸಿದ್ದರಾಮಯ್ಯನವರು ಸಿಟ್ಟಾಗಿದ್ದಾರೆ ಎನ್ನುವುದು ಸುಳ್ಳು" ಎಂದು  ತಿಳಿಸಿದರು.


ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಬಜೆಟ್ ಹಾಗೂ ಖಾಲಿ ಇರುವ ಸಚಿವ ಖಾತೆಗಳ ಹಂಚಿಕೆ ಮತ್ತು ನಿಗಮ ಮತ್ತು ಮಂಡಳಿಗಳ ಭರ್ತಿ ವಿಚಾರವಾಗಿ ಚರ್ಚಿಸಲಿದ್ದಾರೆ ಎಂದು ಬಂದಿದೆ.


ಇತ್ತೀಚಿಗೆ ಸಿದ್ದರಾಮಯ್ಯನವರು ಹೊಸ ಬಜೆಟ್ ಬೇಡ ಈ ಹಿಂದೆ ಮಂಡಿಸಿರುವ ಬಜೆಟ್ ಗೆ ಹೊಸ ಯೋಜನೆಗಳನ್ನು ಸೇರಿಸಿ ಎಂದು ಸಲಹೆ ನೀಡಿದ್ದರು. ಈ ಹಿನ್ನಲೆಯಲ್ಲಿ ಈಗ  ಈ ವಿಚಾರವಾಗಿ ಚರ್ಚಿಸಲು  ಪರಮೇಶ್ವರ್ ಅವರು  ಉಜಿರೆಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.