Derogatory post : ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುವ ಯಂತ್ರ ಎಂಬಂತೆ ಬಿಂಬಿಸಿ ಪೋಸ್ಟ್‌ ಶೇರ್‌ ಮಾಡಲಾಗಿದ್ದು, ಈ ಘಟನೆ ರಾಯಚೂರು ಜಿಲ್ಲೆ ಲಿಂಗಸೂರು ಪಟ್ಟಣದಲ್ಲಿ ನಡೆದಿದೆ. ಇದೀಗ ಈ ಘಟನೆ ಬೆಳಕಿಗೆ ಬಂದಿದ್ದು, ಸೋಷಿಯಲ್‌ ಮಿಡಿಯಾದಲ್ಲಿ ಈ ಪೋಸ್ಟ್‌ ವೈರಲ್ ಆಗುತ್ತಿದ್ದಂತೆ ಮುಸ್ಲಿಂ ಸಮುದಾಯದ ಜನ ಆಕ್ರೋಶಗೊಂಡು ಲಿಂಗಸೂರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟಿಸಿ, ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮೂವರು ಮುಸ್ಲಿಂ ಮಹಿಳೆಯರು ಮಕ್ಕಳನ್ನು ಹೆರುತ್ತಿರುವಂತೆ ಮತ್ತು ಒಬ್ಬ ಪುರುಷ ಆ ಯಂತ್ರವನ್ನು ಆಪರೇಟ್‌ ಮಾಡುತ್ತಿರುವಂತೆ ಒಂದು ಪೋಟೋವನ್ನು ಪೋಸ್ಟ್‌ ಮಾಡಿ, ಇಸ್ಲಾಮಿಕ್‌ ಬೇಬಿ ಫ್ಯಾಕ್ಟರಿ ಎಂದು ಬರೆದುಕೊಂಡಿದ್ದರು. ಅವರ ಸ್ಟೇಟಸ್‌ ವೈರಲ್‌ ಆಗುತ್ತಿದ್ದಂತೆ ಅವರ ಮುಸ್ಲಿಂ ಸಮುದಾಯದ ಜನ ತಮ್ಮ ಧಾರ್ಮಿಕ ಭಾವನೆಗೆ ದಕ್ಕೆಯಂಟಾಗಿದೆ ಎಂದು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ್ದರು. 


ಇದನ್ನೂ ಓದಿ-ಪಾಲಿಕೆಯಲ್ಲಿಲ್ಲ ವಾರ್ಡ್ ಸಮಿತಿ: ಸ್ಥಳೀಯರ ಅಹವಾಲು ಆಲಿಸುವವರೇ ಇಲ್ಲ...!


ಬಳಿಕ ಪ್ರಕರಣ ದಾಖಲಿಸಿಕೊಂಡ ಲಿಂಗಸೂರು ಪೊಲೀಸರು ಆರೋಪಿ ರಾಜು ಅವರನ್ನು ಎಫ್‌ಐಆರ್‌ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಲಿಂಗಸೂರಿನಲ್ಲಿ ಪ್ರಸ್ತುತ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿದ್ದು ಪೊಲೀಸ್‌ ಬಿಗಿ ಬಂದೋಬಸ್ತ್‌ನ್ನು ಒದಗಿಸಲಾಗಿದೆ. 


ಇದನ್ನೂ ಓದಿ-ಮರ್ಯಾದೆ ಕೊಡುತ್ತಿಲ್ಲವೆಂದು ಚಿಕ್ಕಪ್ಪನಿಂದಲೇ ಮಗನ ಕೊಲೆ..!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.