ಉತ್ತರಕನ್ನಡ : ಅರಣ್ಯದಲ್ಲಿ ಟ್ರಂಚ್‌(ಕಾಲುವೆ) ತೆಗೆಯುವಾಗ ಯಾವುದೇ ಒಂದು ಗಿಡ ಅಥವಾ ಕಾಡಿನ ವಾಸಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಏಕಾಎಕಿ ಕಾಡಿನೊಳಗೆ ಜೆಸಿಬಿಗಳನ್ನು ನುಗ್ಗಿಸಿ ಹಾನಿ ಮಾಡುವಂತ್ತಿಲ್ಲ ಎಂಬ ನಿಯಮವಿದೆ.


COMMERCIAL BREAK
SCROLL TO CONTINUE READING

ಆದರೆ ಈ ನಿಯಮವನ್ನು ಎಷ್ಟು ಅರಣ್ಯ  ಅಧಿಕಾರಿಗಳು  ಪಾಲಿಸುತ್ತಿದ್ದಾರೆ ಎಂಬುವುದನ್ನು ಯೋಚಿಸ ಬೇಕಾಗಿದೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೇಗೆ ಹೊನ್ನಾವರ ವಿಭಾಗದ ಹಿರೇಗುತ್ತಿ ಅರಣ್ಯದೊಳಗೆ  ಏಕಾಎಕಿ  ಜೆಸಿಬಿಗಳಿಂದ ಸುಮಾರು 5 ರಿಂದ 7 ಕಿಲೋಮೀಟರ್ ವ್ಯಾಪ್ತಿಯಲ್ಲಿ  ಟ್ರಂಚ್‌ ತೆಗೆಯಲಾಗಿದೆ. ಕಾಲುವೆ ಭರದಲ್ಲಿ ಅಪರೂಪದ ಬೆತ್ತ, ಸಾಗವಾನಿ, ಹೊನಗಲು ಸೇರಿ ಬೆಲೆಬಾಳುವ ಮರಗಳು ಬುಡ ಸಮೇತ ನಾಶಗೊಂಡಿವೆ. 


ಇದನ್ನೂ ಓದಿ: Muniratna : ಉರಿಗೌಡ ದೊಡ್ಡನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದ ಮುನಿರತ್ನ!  


ಸರ್ವೆ ನಂಬರ್ 111ರಲ್ಲಿ  ಹೊನ್ನಾವರದ ನಾಗೂರು ಬಳಿ  ಸಾವಿರಾರೂ ಕೋಟಿ ಬೆಲೆಗಳ ಮರಗಳು ನೂರಾರು ಜಾತಿಯ ಔಷಧಿ ಸಸ್ಯಗಳು ಮಾರಣ ಹೋಮ ಹೊಂದಿವೆ. ಅರಣ್ಯಾಧಿಕಾರಿಗಳ ಪರಿಸರವಾದಿಗಳು , ಔಷಧಿ ಮರಗಳನ್ನು ಪೋಷಿಸಿಲ್ಲ ಎಂದ ಮೇಲೆ ಕೀಳುವ ಹಕ್ಕು ಇಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 


ಹೈವೆ,ರಸ್ತೆ ಅಗಲೀಕರಣ ಹಾಗೂ ಅರಣ್ಯದಲ್ಲಿ ಟ್ರಂಚ್‌ ತೆಗೆಯುವ ನೆಪದಲ್ಲಿ  ಅಲ್ಲಿರುವ ಪ್ರಾಣಿ ಪಕ್ಷಿ  ಹೊರತಾಗಿ, ಮಣ್ಣಿನ ಸವೇತ, ಇದರ ಜೊತೆಯಲ್ಲಿ ಪ್ರಾಚೀನ ಕಾಲದ ಔಷಧಿ ಸಸ್ಯಗಳು ನಶಿಸುತ್ತಿವೆ.ಕಾಲುವೆ ಭರದಲ್ಲಿ ಅಪರೂಪದ ಬೆತ್ತ, ಸಾಗವಾನಿ, ಹೊನಗಲು ಸೇರಿ ಬೆಲೆಬಾಳುವ ಮರಗಳು ಬುಡ ಸಮೇತ ನಾಶಗೊಂಡಿವೆ. 


ಇದನ್ನೂ ಓದಿ: ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಆಜಾನ್‌ ಕೂಗಿದ ಯುವಕ ...!


ಕಾಡಿನನಿವಾಸಿಗಳಿಂದ ಕಾಡು ನಶಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು ಆದರೆ ಇತ್ತೀಚೀನ ದಿನಗಳಲ್ಲಿ  ಅರಣ್ಯ ಅಧಿಕಾರಿಗಳ ನಿರ್ಲಕ್ಷದಿಂದ ಕಾಡು ಅಭಿವೃದ್ಧಿ ನೆಪ ಹೇಳಿ ಕಳೆದ ಮೂರುನಾಲಕು ವರ್ಷಗಳಿಂದ ಲಕ್ಷಾಂತಾರ ಮರಗಳು ತಮ್ಮ ಅಂತ್ಯ ಕಂಡಿವೆ, ಇಂಗುಗುಂಡಿ, ಕಾಲುವೆ ನೆಪದಲ್ಲಿ ಕಾಡುಗಳು ಕಾಲಕ್ರಮೇಣ ನಶಿಸಿವೆ ಎನ್ನಲಾಗುತ್ತಿದೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ