ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಆರೋಗ್ಯ ವಿಚಾರಿಸಿದ ದೇವೇಗೌಡ
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿಯವರನ್ನು ಮಾಜಿ ಪ್ರಧಾನಿ ದೇವೇಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಚೆನ್ನೈ: ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಪಕ್ಷದ ನಾಯಕ ಕರುಣಾನಿಧಿಯವರನ್ನು ಮಾಜಿ ಪ್ರಧಾನಿ ದೇವೇಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಚೆನ್ನೈನಲ್ಲಿನ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿದ ದೇವೇಗೌಡ ಕರುಣಾನಿಧಿ ಆರೋಗ್ಯವನ್ನು ವಿಚಾರಿಸಿದರು ಈ ವೇಳೆ ಕರುಣಾನಿಧಿ ಮಗಳು ಕನಿಮೋಳಿ ಹಾಗೂ ಪುತ್ರ ಸ್ಟ್ಯಾಲಿನ್ ಅವರು ಭೇಟಿಯ ವೇಳೆ ಉಪಸ್ಥಿತರಿದ್ದರು.
ಕರುಣಾನಿಧಿ ಆಸ್ಪತ್ರೆಗೆ ದಾಖಲಾದ ನಂತರ ಪ್ರಧಾನಿ ಮೋದಿ, ರಾಷ್ಟ್ರಪತಿ ,ಉಪರಾಷ್ಟ್ರಪತಿ ಮತ್ತು ಕಾಂಗ್ರೇಸ್ ಮುಖ್ಯಸ್ಥ ರಾಹುಲ್ ಗಾಂಧಿಯಿಂದ ಹಿಡಿದು ಎಲ್ಲರು ಆರೋಗ್ಯವನ್ನು ವಿಚಾರಿಸಿದ್ದರು ಅಲ್ಲದೆ ಬೇಗನೆ ಗುಣಮುಖರಾಗಲಿ ಎಂದು ಅವರು ಹಾರೈಸಿದ್ದರು.
ತಮಿಳುನಾಡಿನಲ್ಲಿ ದ್ರಾವಿಡ್ ಅಸ್ಮಿತೆ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿರುವ ಕರುಣಾನಿಧಿ ದಕ್ಷಿಣ ಭಾರತದ ಗಟ್ಟಿ ಧ್ವನಿ ಎಂದು ಹೇಳಬಹುದು.