ಸೈಟ ಕೊಡದ ಡೆವಲಪರ್ ಗೆ 8.10 ಲಕ್ಷ ರೂ ದಂಡ ಮತ್ತು ಪರಿಹಾರ ನೀಡಲು ಗ್ರಾಹಕರ ಆದೇಶ
ಮಾಳಾಪುರದ ಆಜಾದ ನಗರವಾಸಿ ಸಲೀಮ್ ಬೇಗ್ ಅನ್ನುವವರು ದಿ:13/11/2018 ರಂದು ಗುಲಗಂಜಿಕೊಪ್ಪದ ಸರ್ವೆನಂ.46ರಲ್ಲಿ 2702 ಚ.ಅ. ಪ್ಲಾಟಗಳನ್ನು ಅಲ್ಲಿಯ ಡೆವಲಪರ್ ನಿಜಾಮುದ್ಧಿನ ತಂಬೋಲಿ ಅವರಿಂದ 16 ಲಕ್ಷ 87 ಸಾವಿರ ರೂ. ಗೆ ಖರೀದಿಸಿದ್ದರು.
ಧಾರವಾಡ: ಮಾಳಾಪುರದ ಆಜಾದ ನಗರವಾಸಿ ಸಲೀಮ್ ಬೇಗ್ ಅನ್ನುವವರು ದಿ:13/11/2018 ರಂದು ಗುಲಗಂಜಿಕೊಪ್ಪದ ಸರ್ವೆನಂ.46ರಲ್ಲಿ 2702 ಚ.ಅ. ಪ್ಲಾಟಗಳನ್ನು ಅಲ್ಲಿಯ ಡೆವಲಪರ್ ನಿಜಾಮುದ್ಧಿನ ತಂಬೋಲಿ ಅವರಿಂದ 16 ಲಕ್ಷ 87 ಸಾವಿರ ರೂ. ಗೆ ಖರೀದಿಸಿದ್ದರು.
ಅಂದೇ ಅವರು ರೂ.7 ಲಕ್ಷ 50 ಸಾವಿರ ರೂ. ಮುಂಗಡವಾಗಿ ಕೊಟ್ಟು ಖರೀದಿ ಕರಾರು ಪತ್ರ ಮಾಡಿಕೊಂಡಿದ್ದರು. ವರ್ಷಗಳು ಕಳೆದರೂ ಎದುರುದಾರರು ಲೇಔಟ ಡೆವಲಪ್ ಮಾಡಿರಲಿಲ್ಲ. ದೂರುದಾರರಿಗೆ ಖರೀದಿ ಪತ್ರವನ್ನು ಮಾಡಿಕೊಡಲಿಲ್ಲ. ಅದರಿಂದ ತನಗೆ ಎದುರುದಾರ ಮೋಸ ಮಾಡಿ, ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಹೇಳಿ ಅವರ ವಿರುದ್ಧ ಗ್ರಾಹಕರ ಹಿತರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಭಜರಂಗದಳ ನಿಷೇಧ: ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸುತ್ತೇವೆಂದ ಶ್ರೀರಾಮಸೇನೆ
ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಹಾಗೂ ಪ್ರಬು .ಸಿ ಹಿರೇಮಠ ಅವರು ಕೂಲಂಕುಷವಾಗಿ ವಿಚಾರಣೆ ನಡೆಸಿ, 2018 ರಲ್ಲಿ ದೂರುದಾರರು ರೂ.7 ಲಕ್ಷ 50 ಸಾವಿರ ರೂ. ಮುಂಗಡ ಹಣಕೊಟ್ಟು ಸೈಟುಗಳನ್ನು ಖರೀದಿಸಿ ಕರಾರು ಪತ್ರ ಮಾಡಿಕೊಂಡಿದ್ದರೂ ನಿಗದಿತ ಅವಧಿಯಲ್ಲಿ ಎದುರುದಾರರು ಲೇಔಟ ಡೆವಲಪ್ ಮಾಡದೇ ಮತ್ತು ಸೈಟನ್ನು ಖರೀದಿ ಮಾಡಿಕೊಡದೇ ದೂರುದಾರರ ಹಣವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡು ಅವರಿಗೆ ಮೋಸ ಮಾಡಿದ್ದಾನೆ ಅಂತಾ ಆಯೋಗ ಅಭಿಪ್ರಾಯಪಟ್ಟು, ತೀರ್ಪು ನೀಡಿದೆ.
ದೂರುದಾರರಿಂದ ಮುಂಗಡ ಹಣ ಪಡೆದು ಲೇಔಟ ಡೆವಲಪ್ ಮಾಡದೇ ದೂರುದಾರರಿಗೆ ಮೋಸ ಮಾಡಿದ ಕುರಿತು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಸಗಿರುವುದು ರುಜುವಾತು ಆಗಿದೆ. ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ.7 ಲಕ್ಷ 50 ಸಾವಿರರೂ. ಹಿಂದಿರುಗಿಸುವಂತೆ ಆಯೋಗ ಎದುರುದಾರ ಡೆವಲಪರ್‍ಗೆ ನಿರ್ದೇಶನ ನೀಡಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಮತ್ತು ಅನಾನುಕೂಲಕ್ಕಾಗಿ ರೂ. 50 ಸಾವಿರ ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ ಸಲುವಾಗಿ ರೂ.10 ಸಾವಿರ ದೂರುದಾರರಿಗೆ ಕೊಡುವಂತೆ ಆಯೋಗ ಎದುರುದಾರರ ವಿರುದ್ಧ ಆದೇಶಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.