ಧಾರವಾಡ: ಒಂದು ನಿಮಿಷದ ಅವಧಿಯಲ್ಲಿ 98 ಬಾರಿ ಹಸ್ತ ಮುದ್ರಿಕೆ ಕಲೆಯನ್ನು ನಿರ್ಮಿಸಿದ ಧಾರವಾಡದ ಯುವ ಕಲಾವಿದ ಅಮರ್ ರಾಜು ಕಾಳೆ ಅವರ ಸಾಧನೆ ಗಿನ್ನೆಸ್ ವಿಶ್ವದಾಖಲೆ (Guinness Book Of World Record)ಗೆ ಸೇರ್ಪಡೆಯಾಗಿದೆ.


COMMERCIAL BREAK
SCROLL TO CONTINUE READING

ಆಸಕ್ತಿಯ ಮೂಲಕ ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿರುವ ಯುವಕನ ಸಾಧನೆಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಪ್ರಶಂಸಿಸಿ ಅಭಿನಂದಿಸಿದರು.NEET-UG ಪರೀಕ್ಷೆಯ ಆಕಾಂಕ್ಷಿಗಳಿಗೊಂದು ಸಿಹಿಸುದ್ದಿ...!


Ministry of Labour : ಸರ್ಕಾರದ ಈ ಯೋಜನೆ ಮೂಲಕ ಕಾರ್ಮಿಕರಿಗೆ ಸಿಗಲಿದೆ ₹3000 : ಅದಕ್ಕೆ ಈ ಕೆಲಸ ಮಾಡಿ


ಅಮರ್ ಕಾಳೆ ಅವರು ರಚಿಸಿರುವ ನಟ ಪುನೀತ್ ರಾಜಕುಮಾರ, ಗಂಗೂಬಾಯಿ ಹಾನಗಲ್, ಕೃಷ್ಣ ಹಾಗೂ ರಾಧೆ,ನಟರಾಜ,ಮೂಲರಾಮನನ್ನು ಪೂಜಿಸುತ್ತಿರುವ ರಾಘವೇಂದ್ರರು,ಸಿದ್ಧಾರೂಢರು ಸೇರಿದಂತೆ ಅನೇಕ ಆಕರ್ಷಕ ಕಲಾಕೃತಿಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿ, ಧಾರವಾಡದಲ್ಲಿ ಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಕಲಾವಿದನ ತಂದೆ ರಾಜು ಕಾಳೆ ಮತ್ತಿತರರು ಇದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.