ಧಾರವಾಡ: ಡಿಸೆಂಬರ್ 16, 2023 ರಂದು ಬ್ಯಾಂಕ್ ಆಫ್ ಇಂಡಿಯಾದ ಶಹಾಪುರ ಬೆಳಗಾವಿ ಶಾಖೆಗೆ 2001 ನೇ ವರ್ಷದಲ್ಲಿ 90 ಲಕ್ಷ ವಂಚನೆ ನಡೆಸಿದ ಪ್ರಕರಣದಲ್ಲಿ ಬ್ಯಾಂಕನ ಆಗಿನ ಮ್ಯಾನೇಜರ್ ಡಿ.ವಿ. ನಾರ್ವೇಕರ, ಪೂನಂ ಟ್ರೇಡಿಂಗ್ ಕಂಪನಿಯ ನಿರ್ದೇಶಕ ಆನಂದ್ ಶೇಷು, ಕಂಪನಿಯ ಚಾರ್ಟರ್ಡ್ ಅಕೌಂಟೆಂಟ್ ಎನ್.ಆದಿನಾರಾಯಣ ಮತ್ತು ದೇವರಾಜ್ ಹಾಗೂ ಹೇಮಲತಾ ದಂಪತಿಗಳಿಗೆ ಧಾರವಾಡದ ಸಿಬಿಐ ವಿಶೇಷ ನ್ಯಾಯಾಲಯವು 1 ವರ್ಷದ ಕಠಿಣ ಸಜೆ ಹಾಗೂ 1,60,000/- ರೂ.ಗಳ ದಂಡ ವಿಧಿಸಿ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಧಾರವಾಡ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಸುಬ್ರಹ್ಮಣ್ಯ ರವರು ಘಟನೆ ನಡೆದ 22 ವರ್ಷಗಳ ಬಳಿಕ ತೀರ್ಪು ಪ್ರಕಟಿಸಿದ್ದಾರೆ. ಬಿಜೋಯ್ ಕೇತನ್ ಹಾಗೂ ಆತನ ಪತ್ನಿ ಪೂನಲಾ ಕೇತನ್ ಅಪರಾಧ ನಡೆಸಿ ವಿದೇಶಕ್ಕೆ ಪರಾರಿಯಾದದ್ದರಿಂದ ಪ್ರಕರಣದ ತನಿಖೆ ವಿಳಂಬವಾಯಿತು. ಅವರ ಮೇಲೆ ಸಿಬಿಐ ಲುಕ್ ಔಟ್ ನೋಟೀಸ್ ಮತ್ತು ರೆಡ್ ಕಾರ್ನರ್ ನೋಟೀಸು ಜಾರಿ ಮಾಡಿದೆ. ಇದರ ಮೇಲೆ 2002 ರಲ್ಲಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು.ಸದನದಲ್ಲಿ ವಿರೋಧ ಪಕ್ಷದ ನಾಯಕನ ಕೊರತೆ ಕಾಣುತ್ತಿತ್ತು : ಸಲೀಂ ಅಹಮದ್


ಬ್ಯಾಂಕ್ ಆಫ್ ಇಂಡಿಯಾದ ಶಹಾಪುರ ಬೆಳಗಾವಿ ಶಾಖೆಯ ಮ್ಯಾನೇಜರ್ ಡಿ.ವಿ. ನಾರ್ವೇಕರ್, ಬಿಜೋಯ್ ಕೇತನ್, ಪೂನಲಾ ಕೇತನ್ ಮತ್ತಿತರರೊಂದಿಗೆ ಪಿತೂರಿ ನಡೆಸಿ ಪೂನಂ ಟ್ರೇಡಿಂಗ್ ಕಂಪನಿ ಹಾಗೂ ತೇಜ್ ಎಕ್ಸ್‍ಪೆÇೀಟ್ರ್ಸ್ ಬೆಂಗಳೂರು ಇದರ ಹೆಸರಿನಲ್ಲಿ ಬಟ್ಟೆ ವ್ಯಾಪಾರಕ್ಕಾಗಿ 2001 ರಲ್ಲಿ 75 ಲಕ್ಷ ಸಾಲ ತೆಗೆದುಕೊಂಡು ಯಾವುದೇ ವ್ಯಾಪಾರ ನಡೆಸದೆ ತಕ್ಷಣವೇ ವಿದೇಶಕ್ಕೆ ಪರಾರಿಯಾದರೆಂದು ಸಿಬಿಐ ಆರೋಪವಿತ್ತು.


ಕಂಪನಿ ಲೆಕ್ಕಪರಿಶೋಧಕರಾದ ಆದಿನಾರಾಯಣ ಹಾಗೂ ನಿರ್ದೇಶಕರ ಆನಂದ ಶೇಷು ಅವರು ಸುಳ್ಳು ಲೆಕ್ಕಪತ್ರಗಳನ್ನು ಬ್ಯಾಂಕಿಗೆ ಸಲ್ಲಿಸಿದ್ದರು. ಈ ಸಾಲಕ್ಕೆ ಬೆಂಗಳೂರು ನಿವಾಸಿಗಳಾದ ದೇವರಾಜ ಹಾಗೂ ಹೇಮಲತ ದಂಪತಿಗಳು ಖೊಟ್ಟಿ ಭೂದಾಖಲೆಗಳನ್ನು ಬ್ಯಾಂಕಿಗೆ ನೀಡಿ ಮೋಸಗೊಳಿಸಿದ್ದರು.


ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ!


ಇದರಿಂದಾಗಿ ಬ್ಯಾಂಕಿಗೆ ಒಟ್ಟು 90 ಲಕ್ಷದಷ್ಟು ನಷ್ಟ ಮಾಡಲಾಗಿದೆ ಎಂದು ಸಿಬಿಐ ಆರೋಪಿಸಿದೆ. ಪ್ರಮುಖ ಆರೋಪಿಗಳಾದ ಬಿಜೋಯ್ ಕೇತನ್ ಹಾಗೂ ಪೂನಲಾ ಕೇತನ್ ಜಾಂಬಿಯಾ ದೇಶಕ್ಕೆ ಪರಾರಿಯಾಗಿದ್ದು, ಅವರ ಬಂಧನಕ್ಕೆ ಸಿಬಿಐ ಬಲೆ ಬೀಸಿದೆ. ಸುಧೀರ್ಘ ವಿಚಾರಣೆ ನಡೆಸಿದ ಧಾರವಾಡ ವಿಶೇಷ ಸಿಬಿಐ ನ್ಯಾಯಾಲಯ ಐವರು ಆರೋಪಿಗಳನ್ನು ವಂಚನೆ, ಮೋಸ ಮತ್ತು ನಕಲಿ ದಾಖಲೆ ಸೃಷ್ಟಿಸಿದ್ದಕ್ಕೆ ಹಾಗೂ ಬ್ಯಾಂಕಿನ ದುಡ್ಡನ್ನು ದುರುಪಯೋಗಪಡಿಸಿದ್ದಕ್ಕೆ ಶಿಕ್ಷಿಸಿದೆ. ಸಿಬಿಐ ಪರವಾಗಿ ಹಿರಿಯ ಸರ್ಕಾರಿ ಅಭಿಯೋಜಕ ಶಿವಾನಂದ ಪೆರ್ಲಾ ವಾದಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.