ನಂಜೇಗೌಡ-ಉರೀಗೌಡರ ವಿಚಾರ:ಸಮುದಾಯದ ಗೊಂದಲಕ್ಕೆ ಬ್ರೇಕ್ ಹಾಕಿದ ನಿರ್ಮಲಾನಂದನಾಥ ಶ್ರೀಗಳು!: 
ಟಿಪ್ಪು ಕೊಂದದ್ದು ನಂಜೇಗೌಡ ಹಾಗೂ ಉರಿಗೌಡ ಎಂಬ ಜೋರು ಚರ್ಚೆ ಬಿಜೆಪಿ ಪಾಳೆಯದಲ್ಲಿ ಇತ್ತು, ಹೀಗಾಗಿನಂಜೇಗೌಡ-ಉರೀಗೌಡರ ಕುರಿತು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ಸಚಿವ ಮುನಿರತ್ನ ಭಾರಿ ಹಿನ್ನಡೆ ಆಗಿದೆ. ಇಂದು ಸಚಿವ ಮುನಿರತ್ನರ ಜೊತೆಗೆ ಸಮುದಾಯದ ಸ್ವಾಮೀಜಿ ಮಾತುಕತೆ ನಡೆಸಿ ಚಿತ್ರ ನಿರ್ಮಾಣ ಮಾಡದಂತೆ ಸೂಚನೆ ನೀಡಿದರು.


COMMERCIAL BREAK
SCROLL TO CONTINUE READING

ಮುನಿರತ್ನ ಮೂಲಕ ನಿರ್ಮಲಾನಂದನಾಥ ಶ್ರೀಗಳು ಕೊಟ್ಟ ಸಂದೇಶ ಏನು? ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ವೈಭವೀಕರಣ ಬೇಡ ಎಂಬ ಸಂದೇಶ ಬೇಡ.ಪ್ರಬಲ ಸಮುದಾಯವಾದ ಒಕ್ಕಲಿಗರು ಟಿಪ್ಪು ಕೊಂದ ಅಪವಾದ ಬೇಡ ಎಂಬ ಶ್ರೀಗಳ ಅಭಿಲಾಷೆ ವ್ಯಕ್ತಪಡಿಸಿ,ನಂಜೇಗೌಡ-ಉರೀಗೌಡರ ವಿಚಾರದಲ್ಲಿ ಸಮುದಾಯದಲ್ಲಿ ಉಂಟಾದ ಗೊಂದಲಕ್ಕೆ ತೆರೆ ಎಳೆದರು.


ಇದರ ಜೊತೆಗೆ ನಂಜೇಗೌಡ-ಉರೀಗೌಡರ ವಿಚಾರದಲ್ಲಿ ಒಕ್ಕಲಿಗ ಸಚಿವರು, ನಾಯಕರ ನಡುವೆ ವಾಗ್ಯುದ್ದ ನಡೆದಿತ್ತು,ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ  ಸಮುದಾಯದ ಮತದಾರರ ಮೇಲೆ ಬೇರೆಯದ್ದೆ ಅಭಿಪ್ರಾಯ ಮೂಡಿತ್ತು.ಸಚಿವ ಮುನಿರತ್ನ ಜೊತೆ ‌ಶ್ರೀಗಳ‌ ಮಾತುಕತೆ ನಂತರ ಇತರ‌ ಒಕ್ಕಲಿಗ ಸಚಿವರು ಥಂಡಾ ಹೋದೆಡೆದಿದ್ದಾರೆ.ಪಕ್ಷದ ಓಟ್ ಬ್ಯಾಂಕ್ ಮೇಲೆ ಗಮನ ಹರಿಸಿದ್ದ ಸಚಿವರ ಮೇಲೆ ನಿರ್ಮಲಾನಂದನಾಥ ಶ್ರೀಗಳು ಚಾಟಿ ಬೀಸಿ,"ಉರಿ"ಯುವ ವಿಚಾರದಲ್ಲಿ  ಓಟ್ ಬ್ಯಾಂಕ್ ರಾಜಕಾರಣ ‌ಬೇಡ ಎಂಬ ಸಂದೇಶ ಈಗಾಗಲೇ ಸಮುದಾಯದ (ಬಿಜೆಪಿ ) ನಾಯಕರಿಗೆ ತಲುಪಿದೆ.


ಇದನ್ನೂ ಓದಿ-ಕಾಂಗ್ರೆಸ್ ಸೇರುವುದು, ಭಿನ್ನಮತ ಮುಗಿದ ಅಧ್ಯಾಯ-ಸಚಿವ ವಿ.ಸೋಮಣ್ಣ


ಬಿಜೆಪಿ ಸೈಲೆಂಟ್ ; ಕಾಂಗ್ರೆಸ್ ವೈಲೆಂಟ್!
ನಂಜೇ ಗೌಡ ಉರಿ ಗೌಡ ವಿಷಯವಾಗಿ ಬಿಜೆಪಿ ಈಗ ಸೈಲೆಂಟ್ ಆಗುವ ಹೊತ್ತಲೇ, ಕಾಂಗ್ರೆಸ್ ವೈಲೆಂಟ್ ಆಗಿದೆ. ಸಿದ್ದರಾಮಯ್ಯ ಆಪ್ತರಿಂದ ಉರಿಗೌಡ ನಂಜೇಗೌಡ ವಿಚಾರಕ್ಕೆ ವ್ಯಂಗ್ಯ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು,ಉರಿಗೌಡ ನಂಜೇಗೌಡರ ಹೆಸರಿನಲ್ಲಿ  ಆಧಾರ್ ಕಾರ್ಡ್ ಫೋಟೋ ಅನೇಕರ ಗಮನ ಸೆಳೆದಿದೆ.ಅನೇಕ ಸಂಶೋಧನೆ ಬಳಿಕ ಉರಿಗೌಡ ನಂಜೇಗೌಡರ ಆಧಾರ್ ಕಾರ್ಡ್ ಸಿಕ್ಕಿದೆ ಎಂದು ಟ್ವೀಟ್ ಮಾಡಿ,ನಂಜೇಗೌಡ, ಉರಿಗೌಡ ಆಧಾರ್ ಮಾಹಿತಿ ಹಂಚಿದ್ದಾರೆ.


ತಾಯಿ: ಅಶ್ವತ್ಥ ನಾರಾಯಣ
ತಂದೆ: ಸಿಟಿ ರವಿ
ಹುಟ್ಟಿದ್ದು: ಚುನಾವಣೆ ಹತ್ತಿರ ಬಂದಾಗ
ಜನ್ಮಸ್ಥಳ: ಬಿಜೆಪಿ ಕಚೇರಿ, ಮಲ್ಲೇಶ್ವರ
ಆಧಾರ್ ಸಂಖ್ಯೆ: 420 420 420 420
ಕೋಲಾರ ನಮ್ಮೂರು ಸಿದ್ದರಾಮಯ್ಯ ನಮ್ಮೋರು ಟೀಂ ನಿಂದ ಆಧಾರ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.


ಇದನ್ನೂ ಓದಿ-Sarcasm Aadhaar Card: ಉರಿಗೌಡ ನಂಜೇಗೌಡರ ಹೆಸರಿನಲ್ಲಿ ಸೃಷ್ಠಿಯಾಯಿತು ವ್ಯಂಗ್ಯ ಆಧಾರ್ ಕಾರ್ಡ್ 


 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ