ಬೆಂಗಳೂರು: ಅನರ್ಹಗೊಂಡಿರುವ 11 ಕಾಂಗ್ರೆಸ್ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಒಂದು ವೇಳೆ ನ್ಯಾಯಾಲಯದ ಮೆಟ್ಟಿಲೇರಿದರೆ, ಯಾವುದೇ ಮಧ್ಯಂತರ ಆದೇಶ ನೀಡುವ ಮೊದಲು ನಮ್ಮ ವಾದವನ್ನು ಪರಿಗಣಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ನೀಡಿದ ನಂತರ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಹೇಳಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸುಪ್ರೀಂ ಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಸ್ಪೀಕರ್ ಆದೇಶ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ನೀಡುವಂತೆ ಅನರ್ಹ ಶಾಸಕರು ಅರ್ಜಿ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ಅವರು ಅರ್ಜಿ ಸಲ್ಲಿಸಿ ಮನವಿ ಮಾಡಿದರೆ ಮೊದಲು ನಮಗೆ ನೋಟೀಸ್ ಕೊಟ್ಟು ವಾದ ಆಲಿಸಬೇಕು. ನಮ್ಮ ವಾದ ಆಲಿಸದೆ ಏಕ ಪಕ್ಷೀಯವಾಗಿ ಆದೇಶ ನೀಡಿದರೆ ನಮಗೆ ಅನಾನುಕುಲ ಆಗಲಿದೆ ಎಂಬ ಒಕ್ಕಣೆಯೊಂದಿಗೆ ಸುಪ್ರೀಂಕೋರ್ಟ್​ಗೆ ದಿನೇಶ್ ಗುಂಡೂರಾವ್ ಕೇವಿಯಟ್ ಸಲ್ಲಿಸಿದ್ದಾರೆ.


ನಮ್ಮ ಪಕ್ಷದ ಮುಲಕ್ ಶಾಸಕರಾಗಿ, ಜನ ಬೆಂಬಲ ಪಡೆದು ಈಗ ಬಿಜೆಪಿಗೆ ಬೆಂಬಲ ನೀಡಿ ರಾಜೀನಾಮೆ ಕೊಟ್ಟು ಅನರ್ಹ ಗೊಂಡಿರುವ ಶಾಸಕರಿಗೆ ತಕ್ಕ ಶಾಸ್ತಿ ಆಗಲೇಬೇಕು. ಸ್ಪೀಕರ್ ಈಗಾಗಲೇ ಸಂವಿಧಾನದ 10ನೇ ಶೆಡ್ಯೂಲ್ ನ ಅನ್ವಯ ತಕ್ಕ ತೀರ್ಪು ನೀಡಿದ್ದಾರೆ. ಅಲ್ಲದೆ, ಈಗಾಗಲೇ ಪಕ್ಷದ ಕಾರ್ಯಕರ್ತರಿಗೂ ಸಹ ಅತೃಪ್ತ ಶಾಸಕರೊಂದಿಗೆ ಸಂಪರ್ಕದಲ್ಲಿ ಇರದಂತೆ ಸೂಚನೆ ನೀಡಲಾಗಿದೆ. ಅನರ್ಹಗೊಂಡ ಶಾಸಕರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ಗುಂಡೂರಾವ್ ಹೇಳಿದರು. 


ಇದೇ ವೇಳೆ ಈಗಾಗಲೇ 17 ಶಾಸಕರು ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಯಿದ್ದು, ಈಗಾಗಲೇ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೂತ್ ಮಟ್ಟದಿಂದ ಪಕ್ಷ ಬಲವರ್ಧನೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಪಿಸೀಸ್ ಅಧ್ಯಕ್ಷರು ಹೇಳಿದರು.