ಕರ್ನಾಟಕ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ದಿನೇಶ್ ಮಹೇಶ್ವರಿ
ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ದಿನೇಶ್ ಮಹೇಶ್ವರಿ ನೇಮಕವಾಗಿದ್ದಾರೆ .ಇದೆ ಫೆಬ್ರುವರಿ 20 ರ ಒಳಗೆ ಅಥವಾ ನಂತರ ಅಧಿಕಾರ ಸ್ವೀಕರಿಸಲು ಕೋರಲಾಗಿದೆ. ಪ್ರಸ್ತುತವಾಗಿ ಮೇಘಾಲಯ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿನೇಶ್ ಮಹೇಶ್ವರ್ 15 ಮೇ 1958 ರಂದು ಜನಿಸಿದರು. ಅವರ ತಂದೆ ದಿ.ರಮೇಶ್ ಚಂದ್ರ ಮಹೇಶ್ವರಿ ಅವರು ರಾಜಸ್ಥಾನ್ ಹೈಕೋರ್ಟ್ ಪ್ರಮುಖ ವಕೀಲರಾಗಿದ್ದರು. ಜೈಪುರದ ಮಹಾರಾಜ ಕಾಲೇಜಿನಲ್ಲಿ ಬಿ.ಎಸ್.ಸಿ.ಯಲ್ಲಿ ಪದವಿಯನ್ನು ಪಡೆದರು. ನಂತರ 1980 ರಲ್ಲಿ ಜೋಧಪುರ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದು ಮಾರ್ಚ್ 8, 1981 ರಂದು ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು.
ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಪ್ರಮುಖವಾಗಿ ಸಿವಿಲ್ ಮತ್ತು ಸಾಂವಿಧಾನಿಕ ವಿಷಯದಲ್ಲಿ ಅಧ್ಯಯನ ಮಾಡಿದವರು.ರಾಜಸ್ಥಾನ ಸರ್ಕಾರದ ಆದಾಯ ಮತ್ತು ಸುಂಕದ ಇಲಾಖೆಗಳ ಸಂಬಂಧಿಸಿದಂತೆ ರಾಜಸ್ಥಾನ್ ಹೈಕೋರ್ಟ್ನಲ್ಲಿ ವಕೀಲರಾಗಿದ್ದರು.