ಬೆಂಗಳೂರು : ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಕಲಬುರಗಿ ವತಿಯಿಂದ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿಯ ಪ್ರವೇಶಕ್ಕಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕ (Karnataka) ರಾಜ್ಯ ಸಹಕಾರ ಮಹಾಮಂಡಳವು ಬೆಂಗಳೂರು, ಇದರ ಅಂಗ ಸಂಸ್ಥೆಯಾದ ಕಲಬುರಗಿಯ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ತರಬೇತಿ ಸಂಸ್ಥೆಯಲ್ಲಿ 2021ರ ಜನವರಿ ತಿಂಗಳಲ್ಲಿ ಆರು ತಿಂಗಳ ದೂರ ಶಿಕ್ಷಣ ``ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್'' ತರಬೇತಿ ಪ್ರಾರಂಭವಾಗುತ್ತಿದ್ದು, ಸಂಘ ಸಂಸ್ಥೆಗಳು, ಸಹಕಾರ ಬ್ಯಾಂಕ್ ಮತ್ತು ಇತರ ಸಹಕಾರ ಸಂಘಗಳ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ: JOB News: BEL ಮ್ಯಾನೇಜ್ಮೆಂಟ್ ಟ್ರೈನಿ ಪೋಸ್ಟ್ ಗೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾಗಿದ್ದಿಷ್ಟು...!


ಸಿಬ್ಬಂದಿಗಳಿಗೆ ಪದೋನ್ಯತ್ತಿ, ವೇತನ ಬಡ್ತಿ ಮತ್ತು ಸಂಘದಿಂದ ಇತರೆ ಸೌಲಭ್ಯ ಪಡೆಯಲು ಸಹಕಾರ ಕಾನೂನುನಲ್ಲಿ ತರಬೇತಿ ಪಡೆಯುವುದು ಕಡ್ಡಾಯವಾಗಿ ಮಾಡಿರುವುದರಿಂದ ತರಬೇತಿಯನ್ನು ಪಡೆಯಲಿಚ್ಛೀಸುವ ಸಿಬ್ಬಂದಿಗಳು ಪ್ರವೇಶ ಪಡೆಯಬಹುದು.


ಇದನ್ನೂ ಓದಿ: Sarkari Naukri 2020: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RPSC


ಅರ್ಜಿಯನ್ನು ಪ್ರಾಶುಂಪಾಲರು, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಆದರ್ಶನಗರ, ಪ್ರಗತಿ ಕಾಲೋನಿ, ಸೇಡಂ ರಸ್ತೆ ಕಲಬುರಗಿ-585105, ಅಥವಾ ಆಯಾ ಜಿಲ್ಲೆಯ ಜಿಲ್ಲಾ ಸಹಕಾರ ಯುನಿಯನ್‌ಗಳಾದ ಬೀದರ, ಹೊಸಪೇಟೆ, ಕೊಪ್ಪಳ, ಇಲ್ಲಿ ಪಡೆದು ಹಾಗೂ ವೆಬ್‌ಸೈಟ್  www.kscfdcm.co.in ನಲ್ಲಿ ಆನ್‌ಲೈನ್ ಮೂಲಕ ಪಡೆದು ತರಬೇತಿಗೆ ಪ್ರವೇಶ ಪಡೆಯಬುದು. 


ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08472-245340, ಮೊ.ಸಂ. 9742307153, 9113916753 ಕ್ಕೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಾಶುಂಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.