ಬೆಂಗಳೂರು: ಮಾರ್ಚ್ 2020ರ ವೇಳೆಗೆ ಬೆಂಗಳೂರು ಮತ್ತು ಟೋಕಿಯೋ ನಡುವೆ ನೇರ ವಿಮಾನಯಾನ ಸೇವೆ ಆರಂಭವಾಗಲಿದೆ ಎಂದು ಜಪಾನ್‍ನ ಕೌನ್ಸಲ್ ಜನರಲ್ ತಕಾಯೂಕಿ ಕಿತಗಾವ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರು-ಟೋಕಿಯೋ ನಡುವೆ ನೇರ ವಿಮಾನಯಾನದಿಂದಾಗಿ ಪ್ರಯಾಣದ ಅವಧಿ 5 ರಿಂದ 6 ಗಂಟೆ ಕಡಿಮೆಯಾಗಲಿದೆ. ಜಪಾನ್ ಏರ್‌ಲೈನ್ಸ್ ನಿಂದ ನೇರ ವಿಮಾನ ಸೌಲಭ್ಯ ದೊರೆಯಲಿದೆ. ಈ ವಿಮಾನ ಸಂಚಾರದಿಂದ ಉತ್ತರ ಅಮೇರಿಕಾದ ಸಿಯಾಟಲ್, ಸಾನ್‍ಫ್ರಾನ್ಸಿಸ್ಕೊಗೆ ಭೇಟಿ ನೀಡುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ ಹಾಗೂ ವಲಸೆ ಪ್ರಕ್ರಿಯೆಯು ಸರಳವಾಗಲಿದೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ಅಂತೆಯೇ ಉಭಯ ನಗರಗಳ ನಡುವಿನ ನೇರ ವಿಮಾನಯಾನದಿಂದ ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿಯಾಗಲಿದೆ. ಜಪಾನ್‌ನ ಕಲಾವಿದರು ಬೆಂಗಳೂರಿಗೂ ಹಾಗೂ ಭಾರತೀಯ ಕಲಾವಿದರಿಗೆ ಜಪಾನ್‌ಗೂ ಬಂದು ಹೋಗಲು ಇದು ನೆರವಾಗುತ್ತದೆ ಎಂದು ಅವರು ತಿಳಿಸಿದರು.


ರಾಜ್ಯ ಸರ್ಕಾರದ ಅನೇಕ ಪ್ರಗತಿ ಯೋಜನೆಗಳಲ್ಲಿ ಜಪಾನ್‍ನ ಸಹಭಾಗಿತ್ವವಿದೆ. ಬೆಂಗಳೂರು-ಟೋಕಿಯೋ ನಡುವೆ ನೇರ ವಿಮಾನಯಾನದಿಂದ ಕರ್ನಾಟಕ ಮತ್ತು ಜಪಾನ್‍ನ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎನ್ನಲಾಗಿದೆ.