ಬೆಂಗಳೂರು: ಹೆಸರು ಬೆಳೆಯ ಹಳದಿ ನಂಜಾಣು ರೋಗದ ನಿರ್ವಹಣೆ ಕುರಿತು ರೈತರಿಗೆ ಕೃಷಿ ಇಲಾಖೆ ವತಿಯಿಂದ ಸಲಹೆಗಳನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

ಹೆಸರು ಬೆಳೆಯ ಹಳದಿ ನಂಜಾಣು ರೋಗ ಕಂಡುಬಂದಿರುವುದರಿಂದ ಈ ರೋಗದ ನಿರ್ವಹಣೆಯ ಬಗ್ಗೆ ರೈತರಿಗೆ ಕೆಲವು ಸಲಹೆ ಸೂಚನೆಗಳನ್ನು ಈ ಮೂಲಕ ನೀಡಲಾಗಿದೆ.


ಪ್ರಸುತ್ತ ಪೂರ್ವ ಮುಂಗಾರು ಬೆಳೆಯಾಗಿ ಹೆಸರು ಬಿತ್ತನೆ ಮಾಡಲಾಗಿದ್ದು, ಈ ಬೆಳೆಯಲ್ಲಿ ಹಳದಿ ನಂಜಾಣು ರೋಗ ಕಾಣಿಸಿಕೊಳ್ಳುತ್ತಿದೆ. ಈ ರೋಗದಿಂದ ಎಲೆಗಳ ಮೇಲೆ ಹಸಿರು ಮಿಶ್ರಿತ ಹಳದಿ ಮಚ್ಚೆಗಳು ಮೊಸಾಯಿಕ್ ನಂತೆ ಕಂಡುಬಂದಿದ್ದು, ತದನಂತರ ಎಲೆಯ ಭಾಗವು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ರೋಗದ ಬಾಧೆ ಜಾಸ್ತಿಯಾದಾಗ ಎಲೆಗಳು ಕೆಳಮುಖವಾಗಿ ತಿರುಗಿ ಗಾತ್ರ ಮತ್ತು ಆಕಾರವನ್ನು ಕಳೆದುಕೊಂಡು ಸಂಪೂರ್ಣ ಚಿಕ್ಕವಾಗುತ್ತವೆ. ರೋಗದ ಉಲ್ಬಣ ಜಾಸ್ತಿಯಾದಲ್ಲಿ, ಗಿಡಗಳು ಭಾಗಶಃ ಕಾಯಿ ಬಿಡದೆ ಕಾಳು ಕಟ್ಟದೆ ಸಂಪೂರ್ಣ ಕುಂಠಿತವಾಗುತ್ತವೆ.


ಇದನ್ನೂ ಓದಿ: Naga Chaitanya: ವಿಚ್ಛೇದನದ ಬಳಿಕ ಈ ನಟಿಯ ಜತೆ ನಾಗ ಚೈತನ್ಯ ಡೇಟಿಂಗ್!?


ಈ ಸಂದರ್ಭದಲ್ಲಿ ರೈತಬಾಂಧವರು ಅನುಸಾರಬೇಕಾದ ಅಗತ್ಯ ಕ್ರಮಗಳು ಇಂತಿವೆ.


ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು. ನಂಜುರೋಗ ತಡೆದುಕೊಳ್ಳುವ ಶಕ್ತಿಯಿರುವ ಬಿ.ಜೆ.ಎಸ್9 ತಳಿಯನ್ನು ಬೆಳೆಯುವುದು.
 ಬೀಜವನ್ನು ಇಮಿಡಾಕ್ಲೋಪ್ರಿಡ್ 600ಎಫ್.ಎಸ್‌ನ 5 ಮೀ.ಲೀ ಪ್ರತಿ ಕೆಜಿಯಂತೆ ಬೀಜೋಪಚಾರ ಮಾಡಿ ಬಿತ್ತುವುದು ಸೂಕ್ತ. 


ಹೊಲದ ಸುತ್ತ ಹಾಗೂ ಬದುಗಳಲ್ಲಿ ಏಕದಳ ಬೆಳೆಗಳಾದ ಜೋಳ ಅಥವಾ ಸಜ್ಜೆಯನ್ನು ತಡೆ ಬೆಳೆಗಳಾಗಿ ಬೆಳೆಯುವುದು.


ಹಳದಿ ಬಣ್ಣದ ಅಂಟು ಬಲೆಗಳನ್ನು ಪ್ರತಿ ಎಕರೆಗೆ 8ರಂತೆ ಹೊಲದಲ್ಲಿ ಹಾಕುವುದರಿಂದ ಬಿಳಿನೋಣ ಹತೋಟಿ ಮಾಡಿ ರೋಗದ ಹರಡುವಿಕೆಯನ್ನು ತಡೆಗಟ್ಟುಬಹುದು.


ಇದನ್ನೂ ಓದಿ: ಗೊಂಬೆಯಂತಿದ್ದ ನಟಿ ಪಾಲಿಗೆ ವಿಲನ್ ಆದ ವೈದ್ಯರು! ದಂತ ಚಿಕಿತ್ಸೆ ಪಡೆದ ಯುವನಟಿಗೆ ಇಂದೆಂಥ ಸ್ಥಿತಿ?


ಮುಖ್ಯ ಹೊಲದಲ್ಲಿ ಆಸರೆ ಕಳೆಗಳಾದ ಕ್ರೋಟಾನ್ (ಸೀಮೆ ಎಣ್ಣೆ ಗಿಡ), ಯುಪೋರ್ಬಿಯಾ (ಬೀದಿ ಸೊಪ್ಪು), ಮ್ಯಾಲ್ವಾಸ್ಪಮ್ (ಸಣ್ಣ ಬಿಂದಿಗೆ ಗಿಡ), (ಪೈಲಾಂತಸ್ ಮದ್ರಾಸ್ ನೆಲ್ಲಿ), ಅಕ್ಯಾಲೀಸಾ (ಮುಳ್ಳು ಹೊನೆ ಗೊನೆ) ಮತ್ತು ರೋಗ ಪೀಡಿತ ಗಿಡಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ರೋಗದ ಸೋಂಕು ಕಡಿಮೆ ಮಾಡಬಹುದು.


ಬಿತ್ತಿದ 3 ರಿಂದ 4 ವಾರಗಳ ನಂತರ ಡೈಪೆಂಥ್ಯೂರಾನ್ 50ಡಬ್ಲೂಪಿ 1ಗ್ರಾಂ/ಲೀ ಅಥವಾ ಬೇವಿನ ಕಷಾಯ 5 ಮೀ.ಲೀ ನೀರಿನಲ್ಲಿ ಬೇರೆಸಿ 7 ದಿನಗಳ ಅಂತರದಲ್ಲಿ ಸಿಂಪಡಿಸುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.