ಬೆಂಗಳೂರು : ಮೇ 10 ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಮೂರು ಪಕ್ಷಗಳು ಜೊತೆಗೆ ಇತರೆ ಪ್ರಾದೇಶಿಕ ಪಕ್ಷಗಳು ಸಹ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಸಿದ್ಧತೆ ನಡೆಸುತ್ತಿವೆ. ಇದರ ಬೆನ್ನಲ್ಲೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಕೋಲಾಹಲ ಎಬ್ಬಿಸಿದೆ. ಅಲ್ಲದೆ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್‌ ಸವದಿಗೆ ಸೇರಿದಂತೆ ಹಲವು ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಟಿಕೆಟ್‌ ಸಿಕ್ಕಿಲ್ಲ, ಇದರಿಂದ ಬಿಜೆಪಿ ಗೆಲುವು ಕಷ್ಟಕರವಾಗುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಹೌದು.. ಉತ್ತರ ಕರ್ನಾಟದ ಭಾಗದಲ್ಲಿ ಕಮಲ ಅರಳಲು ಜಗದೀಶ್‌ ಶೆಟ್ಟರ್‌, ಲಕ್ಷ್ಮಣ್‌ ಸವದಿ, ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಶ್ರಮವಹಿಸಿದ್ದಾರೆ. ಇದೀಗ ಈ ಮೂವರ ಮುಂದೆ ನಿವೃತ್ತಿ, ಪಕ್ಷಾಂತರ, ಪಕ್ಷೇತರ ಎನ್ನುವ ಆಯ್ಕೆಗಳಿವೆ. ಈಗಾಗಲೇ ಈಶ್ವರಪ್ಪ ಅವರು ನಿವೃತ್ತಿ ಹೊಂದುವುದಾಗಿ ಘೋಷಣೆ ಮಾಡಿದ್ದಾರೆ, ಅದ್ರೆ, ಲಕ್ಷ್ಮಣ್‌ ಸವದಿ ಮತ್ತು ಜಗದೀಶ್‌ ಶೆಟ್ಟರ್‌ ಟಿಕೆಟ್‌ಗಾಗಿ ಹೊರಾಟ ನಡೆಸುವ ಸಂದೇಶ ನೀಡಿದ್ದಾರೆ. 


ಇದನ್ನೂ ಓದಿ: ಸವದಿ, ಶೆಟ್ಟರ್, ಈಶ್ವರಪ್ಪ..! ಘಟಾನುಘಟಿ ನಾಯಕರ ಸಿಟ್ಟಿಗೆ ಬಲಿಯಾಗುತ್ತಾ ʼಬಿಜೆಪಿʼ..?


ಈಗಾಗಲೇ ಜಗದೀಶ್‌ ಶೆಟ್ಟರ್‌ ಅವರು, ದೆಹಲಿಗೆ ಪ್ರಯಾಣ ಬೆಳಸಿದ್ದು, ಹೈಕಮಾಂಡ್‌ ಭೇಟಿಯಾಗಿ ಟಿಕೆಟ್‌ಗಿಟ್ಟಿಸಿಕೊಳ್ಳುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆದ್ರೆ, ಲಕ್ಷ್ಮಣ್‌ ಸವದಿ ಮಾತ್ರ ಕಣ್ಣೀರು ಹಾಕುವ ಮೂಲಕ ತಮ್ಮದೇ ಪಕ್ಷದ ಮೇಲೆ ಹರಿಹಾಯ್ದಿದ್ದಾರೆ. ಇದರ ನಡುವೆ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದೇನಪ್ಪಾ ಅಂದ್ರೆ, ಒಂದು ವೇಳೆ ಗಾಲಿ ಜನಾರ್ಧನ ರೆಡ್ಡಿ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಈ ಮೂವರು ನಾಯಕರು ಸೇರಿದಂತೆ ಅಸಮಾಧಾನಿತ ಬಿಜೆಪಿ ನಾಯಕರು ಸಾಥ್‌ ನೀಡಿದ್ರೆ, ಈ ಭಾಗದಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ.


ಈ ನಡುವೆ ಕೊಪ್ಪಳ ಜಿಲ್ಲೆಯ ಐದು ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಫೈನಲ್ ಮಾಡಿದೆ. ಆದ್ರೆ, ಸಂಸದ ಕರಡಿ ಸಂಗಣ್ಣ ತಮದೆ ಟಿಕೆಟ್‌ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ, ಕಳೆದ ಬಾರಿ ಟಿಕೆಟ್‌ ವಂಚಿತರಾಗಿದ್ದ, ಸಿ.ವಿ. ಚಂದ್ರಶೇಖರ್‌ ಈ ಭಾರಿ ತಮಗೆ ಟಿಕೆಟ್‌ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ, ಮಾಜಿ ಶಾಸಕ ಈಶಣ್ಣ ಗುಳಗಣ್ಣನವರ ಮಗ ನವೀನ್‌ ಗುಳಗಣ್ಣನವರಿಗೆ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದ್ರೆ, ಹಾಲಪ್ಪ ಆಚಾರಿ ಅವರಿಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನೀಡಿದೆ. ಇದರಿಂದ ನವೀನ್‌, ರೆಡ್ಡಿ ಪಕ್ಷದಿಂದ ಸ್ಪರ್ಧೆ ಮಾಡುವ ಲಕ್ಷಣ ಕಾಣುತ್ತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.