ನಾಳೆ 17 ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆ- ಡಿಸಿಎಂ ಅಶ್ವತ್ ನಾರಾಯಣ್
ಅನರ್ಹಗೊಂಡ 17 ಕಾಂಗ್ರೆಸ್- ಜೆಡಿ (ಎಸ್) ಶಾಸಕರು ಡಿಸೆಂಬರ್ 5 ರ ಉಪ ಚುನಾವಣೆಯಲ್ಲಿ ರಾಜ್ಯದ 15 ಸ್ಥಾನಗಳಿಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್ ಬುಧವಾರ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಈಗ ಅವು ನಾಳೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಹೇಳಿದರು.
ನವದೆಹಲಿ: ಅನರ್ಹಗೊಂಡ 17 ಕಾಂಗ್ರೆಸ್- ಜೆಡಿ (ಎಸ್) ಶಾಸಕರು ಡಿಸೆಂಬರ್ 5 ರ ಉಪ ಚುನಾವಣೆಯಲ್ಲಿ ರಾಜ್ಯದ 15 ಸ್ಥಾನಗಳಿಗೆ ಸ್ಪರ್ಧಿಸಲು ಸುಪ್ರೀಂಕೋರ್ಟ್ ಬುಧವಾರ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ಈಗ ಅವು ನಾಳೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಡಿಸಿಎಂ ಅಶ್ವತ್ ನಾರಾಯಣ್ ಹೇಳಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಲಿದ್ದಾರೆ ಎಂದು ಹೇಳಿದರು. ಕೆಲವು ಅನರ್ಹ ಶಾಸಕರು ಅಶ್ವತ್ ನಾರಾಯಣ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನಾ ) ಬಿ ಎಲ್ ಸಂತೋಷ್ ಅವರನ್ನು ನವದೆಹಲಿಯಲ್ಲಿ ತೀರ್ಪು ನೀಡಿದ ಕೆಲವೇ ಗಂಟೆಗಳಲ್ಲಿ ಭೇಟಿಯಾದರು.
ಅನರ್ಹ ಶಾಸಕರ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಡಿಸಿಎಂ ಅಶ್ವತ್ ನಾರಾಯಣ್ "ಯಾವುದೇ ತೊಂದರೆ ಅಥವಾ ಏನೂ ಇಲ್ಲ, ಅವರು ಪಕ್ಷಕ್ಕೆ ಸೇರಲು ಬಯಸಿದ್ದಾರೆ ಮತ್ತು ಸೇರಲಿದ್ದಾರೆ...ಉಪಚುನಾವಣೆಗಳು ಮತ್ತು ಇತರ ವಿಷಯಗಳು ನಂತರ ಬರುತ್ತವೆ" ಎಂದು ಅವರು ಹೇಳಿದರು.
ಆಗಿನ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು 17 ಕಾಂಗ್ರೆಸ್-ಜೆಡಿ (ಎಸ್) ಶಾಸಕರನ್ನು ಅನರ್ಹಗೊಳಿಸಿದ್ದನ್ನು ಸುಪ್ರೀಂಕೋರ್ಟ್ ಬುಧವಾರ ಎತ್ತಿಹಿಡಿದಿದೆ. ಈಗ ಡಿಸೆಂಬರ್ 5 ರಂದು ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅವಕಾಶ ನೀಡಿದೆ. 2023 ರವೆರೆಗೆ ಅಂದರೆ 15 ನೇ ಕರ್ನಾಟಕ ವಿಧಾನಸಭೆಯ ಅಂತ್ಯದವರೆಗೆ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎನ್ನುವ ಅಂದಿನ ಸ್ಪೀಕರ್ ಆದೇಶದ ಭಾಗವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.