ಲೋನ್ ಕ್ಲೀಯರೆನ್ಸ ಸರ್ಟಿಫಿಕೆಟ್ ಕೊಡಲು ಹೋಮ್ ಕ್ರೇಡಿಟ್ ಫೈನಾನ್ಸಗೆ ಗ್ರಾಹಕ ಆಯೋಗದ ಆದೇಶ
ಹುಬ್ಬಳ್ಳಿಯ ಗೋಕುಲ ರಸ್ತೆಯ ನಿವಾಸಿ ಅಲ್ತಾಫ ಶೇಖ್ ಎಂಬುವವರು ಹೋಮ್ ಕ್ರೇಡಿಟ್ ಫೈನಾನ್ಸ ಬೆಂಗಳೂರು ಇವರಿಂದ 2018 ರಲ್ಲಿ ರೂ.1,46,000/-ಗಳ ಸಾಲ ತೆಗೆದುಕೊಂಡಿದ್ದರು. ಒಪ್ಪಂದದಂತೆ ಅವರು 48 ಕಂತುಗಳಲ್ಲಿ ಸಾಲ ಮರು ಪಾವತಿಸುವುದಾಗಿತ್ತು. 2020 ರಲ್ಲಿ ಕೋರೋನಾ ಬಂದಿದ್ದರಿಂದ ಮರುಪಾವತಿಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಸಾಲದ ಪೂರ್ತಿ ಹಣ ತುಂಬಿದರು.
ಧಾರವಾಡ: ಹುಬ್ಬಳ್ಳಿಯ ಗೋಕುಲ ರಸ್ತೆಯ ನಿವಾಸಿ ಅಲ್ತಾಫ ಶೇಖ್ ಎಂಬುವವರು ಹೋಮ್ ಕ್ರೇಡಿಟ್ ಫೈನಾನ್ಸ ಬೆಂಗಳೂರು ಇವರಿಂದ 2018 ರಲ್ಲಿ ರೂ.1,46,000/-ಗಳ ಸಾಲ ತೆಗೆದುಕೊಂಡಿದ್ದರು. ಒಪ್ಪಂದದಂತೆ ಅವರು 48 ಕಂತುಗಳಲ್ಲಿ ಸಾಲ ಮರು ಪಾವತಿಸುವುದಾಗಿತ್ತು. 2020 ರಲ್ಲಿ ಕೋರೋನಾ ಬಂದಿದ್ದರಿಂದ ಮರುಪಾವತಿಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಸಾಲದ ಪೂರ್ತಿ ಹಣ ತುಂಬಿದರು.
ತಮಗೆ ಎದುರುದಾರ ಫೈನಾನ್ಸರವರು ಲೋನ ಕ್ಲೀಯರನ್ಸ ಸರ್ಟಿಫಿಕೆಟಕೊಡುತ್ತಿಲ್ಲ. ಕಾರಣ ಅವರ ನಡಾವಳಿಕೆ ಗ್ರಾಹಕರ ಹಿತ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ ಫೈನಾನ್ಸ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ದಿ.22/02/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: ಬೆಂಗಳೂರಿನ ಹೆದ್ದಾರಿಯಲ್ಲಿ ಮತ್ತೊಂದು ಟೋಲ್ ಆರಂಭ
ಕೋರೋನಾ ಅವಧಿಯಲ್ಲಿ ಮರು ಪಾವತಿಗೆ ಮಾತ್ರ ರಿಸರ್ವ್ ಬ್ಯಾಂಕ್ ವಿನಾಯಿತಿ ನೀಡಿದೆ. ಆದರೆ ನಿಗಧಿತ ಅಸಲು ಹಾಗೂ ಬಡ್ಡಿಯನ್ನು ಕಟ್ಟುವ ಸಾಲಗಾರನ ಹೊಣೆಗಾರಿಕೆ ಮುಂದುವರೆಯುತ್ತದೆ. ಹಾಗಾಗಿ ಇನ್ನು 5 ಕಂತುಗಳ ಮೊತ್ತ ರೂ.36,615/- ದೂರುದಾರ ಕೊಡಬೇಕಾಗಿದೆ. ಕಾರಣ ತಾವು ಅವನಿಗೆ ಲೋನ್ ಕ್ಲೀಯರೆನ್ಸ್ ಸರ್ಟಿಫಿಕೆಟ ಕೊಟ್ಟಿಲ್ಲ ಅಂತಾ ಎದುರುದಾರ ಫೈನಾನ್ಸರವರು ಆಕ್ಷೇಪಣೆ ಎತ್ತಿದ್ದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮತ್ತು ಯತೀಂದ್ರ ಕಾಸಿಗಾಗಿ ಹುದ್ದೆ ವಿಡಿಯೋ ಲೀಕ್!
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಕೋರೋನಾ ಅವಧಿಯಲ್ಲಿ ಮರು ಪಾವತಿಗೆ ಮಾತ್ರ ವಿನಾಯಿತಿ ಸಿಕ್ಕಿದೆ. ಆದರೆ ಸಾಲದ ಬಾಕಿ ವಾಪಸ್ಸು ಕೊಡುವ ಸಾಲಗಾರನ ಹೊಣೆಗಾರಿಕೆ ಮುಂದುವರೆಯುತ್ತದೆ ಅನ್ನುವ ಎದುರುದಾರ ಫೈನಾನ್ಸರವರ ಆಕ್ಷೇಪಣೆ ಆಯೋಗ ಎತ್ತಿ ಹಿಡಿದು ತೀರ್ಪು ನೀಡಿದೆ. ಸಾಲದ ಹಣ ರೂ.1,46,000/- ಇದ್ದು ದೂರುದಾರ ಇವರೆಗೆ ಅದರ ದುಪ್ಪಟ್ಟಿಗಿಂತ ಹೆಚ್ಚು ಹಣ ರೂ.3,22,000/- ಕಟ್ಟಿದ್ದಾರೆ. ದಾಮ್ ದುಪ್ಪಟ್ಟ ನಿಯಮದಲ್ಲಿ ಅಸಲಿಗಿಂತ ಬಡ್ಡಿ ಹೆಚ್ಚಾಗಬಾರದು ಅನ್ನುವ ನಿಯಮ ಇದೆ. ಆ ನಿಯಮವನ್ನು ಗಮನದಲ್ಲಿಟ್ಟುಕೊಂಡು ರೂ. 36,615/- ಪೈಕಿ ಕೇವಲ ರೂ.15,000/- ಗಳನ್ನು ತುಂಬುವಂತೆ ದೂರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ಆ ಹಣ ತುಂಬಿದ 1 ತಿಂಗಳೊಳಗಾಗಿ ಲೋನ್ ಕ್ಲೀಯರೆನ್ಸ ಸರ್ಟಿಫಿಕೆಟ್ ನೀಡುವಂತೆ ಎದುರುದಾರ ಫೈನಾನ್ಸರವರಿಗೆ ಆಯೋಗ ನಿರ್ದೇಶಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.