ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಮೊದಲನೇ ಸ್ಥಾನ, ಉಡುಪಿ ಎರಡನೇ ಸ್ಥಾನ, ಕೊಡಗು ಮೂರನೇ ಸ್ಥಾನ ಪಡೆದಿದೆ. ಇನ್ನು ಚಿಕ್ಕೋಡಿ ಕೊನೆ ಸ್ಥಾನದಲ್ಲಿದೆ.


COMMERCIAL BREAK
SCROLL TO CONTINUE READING

ಒಟ್ಟು 68 ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಲಭ್ಯವಾಗಿದ್ದರೆ, 118 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ವಿಜ್ಞಾನ ವಿಭಾಗದಲ್ಲಿ ಶೇ.67, ವಾಣಿಜ್ಯ ಶೇ.63 ಹಾಗೂ ಕಲಾ ವಿಭಾಗದಲ್ಲಿ ಶೇ.45ರಷ್ಟು ಫಲಿತಾಂಶ ಲಭ್ಯವಾಗಿದೆ.


ಕಲಾ ವಿಭಾಗದಲ್ಲಿ ಬಳ್ಳಾರಿಯ ಬಿ. ಸ್ವಾತಿ(595), ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ವರ್ಷಿಣಿ ಎಂ. ಭಟ್(595) ಮತ್ತು ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಎಂ. ಕೃತಿ(597) ಪ್ರಥಮ ಸ್ಥಾನ ಗಳಿಸಿದ್ದಾರೆ.


ಬಳ್ಳಾರಿ ಜಿಲ್ಲೆಯ ಕೊಟ್ಟೂರು ಇಂದೂ ಕಾಲೇಜಿನ ಮೂವರು ವಿದ್ಯಾರ್ಥಿಗಳಾದ ಬಿ. ಸ್ವಾತಿ 595 ಅಂಕಗಳೊಂದಿಗೆ ಪ್ರಥಮ ಸ್ಥಾನ, ರಮೇಶ್ 593 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಹಾಗೂ  ಕಾವ್ಯಾಂಜಲಿ 588 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.


ದ್ವಿತೀಯ ಪಿಯು ಜಿಲ್ಲಾವಾರು ಫಲಿತಾಂಶ
ಕ್ರಮ ಸಂಖ್ಯೆ(ಸ್ಥಾನ) ಜಿಲ್ಲೆ ಶೇಕಡಾ 
1 ದಕ್ಷಿಣ ಕನ್ನಡ 91.49
2 ಉಡುಪಿ 90.67
3 ಕೊಡುಗು 83.94
4 ಉತ್ತರ ಕನ್ನಡ 76.75
5 ಶಿವಮೊಗ್ಗ 75.77
6 ಚಾಮರಾಜನಗರ 75.30
7 ಚಿಕ್ಕಮಗಳೂರು 74.39
8 ಹಾಸನ 73.87
9 ಬೆಂಗಳೂರು ದಕ್ಷಿಣ 73.67
10 ಬಳ್ಳಾರಿ 73.04
11 ಬೆಂಗಳೂರು ಉತ್ತರ 71.68
12 ಬಾಗಲಕೋಟೆ 70.49
13 ಬೆಂಗಳೂರು ಗ್ರಾಮಾಂತರ 68.82
14 ಚಿಕ್ಕಬಳ್ಳಾಪುರ 68.61
15 ಹಾವೇರಿ 67.30
16 ಗದಗ 66.83
17 ಮೈಸೂರು 66.77
18 ಕೋಲಾರ 66.51
19 ಮಂಡ್ಯ 65.36
20 ರಾಮನಗರ 64.64
21 ತುಮಕೂರು 64.29
22 ಧಾರವಾಡ 63.67
23 ದಾವಣಗೆರೆ 63.29
24 ವಿಜಯಪುರ 63.10
25 ಕೊಪ್ಪಳ 63.04
26 ರಾಯಚೂರು 56.22
27 ಚಿತ್ರದುರ್ಗ 56.06
28 ಯಾದಗಿರಿ 54.40
29 ಬೆಳಗಾವಿ 54.28
30 ಕಲಬುರಗಿ 53.61
31 ಬೀದರ್ 52.63
32 ಚಿಕ್ಕೋಡಿ 52.20