ನವದೆಹಲಿ : ಮನಿ ಲಾಂಡರಿಂಗ್ ಪ್ರಕರಣದ ವಿಚಾರವಾಗಿ ಇಂದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರವಾಗಿ ಇತ್ಯರ್ಥ ಕಂಡುಕೊಳ್ಳುವಲ್ಲಿ ಸಾಧ್ಯವಾಗದ ಕಾರಣ ಈಗ ವಿಚಾರಣೆಯನ್ನು ಶನಿವಾರ ಬೆಳಗ್ಗೆ 11 ಗಂಟೆ ಮುಂದೂಡಿದೆ.


COMMERCIAL BREAK
SCROLL TO CONTINUE READING

ಇಂದು ವಿಶೇಷ ನ್ಯಾಯಾಲಯದಲ್ಲಿ ಡಿ.ಕೆ .ಶಿವಕುಮಾರ್ ಪರವಾಗಿ ಹಿರಿಯ ವಕೀಲ ಅಭಿಷೇಕ ಮನುಸಿಂಗ್ವಿ, ಮುಕುಲ್ ರೋಹಟಕಿ ಹಾಗೂ ದಯನ್ ಕೃಷ್ಣನ್ ವಾದಿಸಿದರು, ಇನ್ನೊಂದೆಡೆಗೆ ತನಿಖಾ ಸಂಸ್ಥೆ ಜಾರಿ ನಿರ್ದೆಶನಾಲಯದ ಪರವಾಗಿ ಕೆ.ಎಂ ನಟರಾಜ್ ವಾದಿಸಿದರು.  


ಡಿಕೆ ಶಿವಕುಮಾರ್ ಹೊಂದಿರುವ ಅಕ್ರಮ ಆಸ್ತಿ ಕುರಿತಾಗಿ ಪ್ರಸ್ತಾಪಿಸಿ ಇಡಿ ಪರವಾಗಿ ವಾದಿಸಿದ ಕೆ.ಎಂ ನಟರಾಜ್ ಡಿಕೆಶಿ ಇಷ್ಟೊಂದು ಪ್ರಮಾಣದ ಆಸ್ತಿಯನ್ನು ಗಳಿಸಿರುವುದು ಹೇಗೆ? ಅಕ್ರಮ ಹಣದಿಂದ ಸಂಪಾದಿಸಿದ ಅಸ್ತಿಯನ್ನು ಸಾಮಾನ್ಯವಾಗಿ ಅಪರಾಧದ ಆಸ್ತಿ ಎಂದು ಪರಿಗಣಿತವಾಗುತ್ತದೆ ಎಂದು ಹೇಳಿದರು.


ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರ ಜಾಮೀನು ಅರ್ಜಿ ನಿರಾಕರಿಸುವುದಕ್ಕೆ ಹಲವು ತೀರ್ಪುಗಳನ್ನು ಪ್ರಸ್ತಾಪಿಸಿದ ನಟರಾಜ್ ಅವರು ಸಿಬಿಐ ನ್ಯಾಯಾಲಯದ ಮುಂದೆ ಹಲವು ದಾಖಲೆಗಳನ್ನು ಸಲ್ಲಿಸಿದ್ದರು. ವಿಶೇಷವೆಂದರೆ ಈ ಪ್ರಕರಣದ ವಿಚಾರಣೆ ವೇಳೆ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚಿದಂಬರಂ ಅವರ ಪ್ರಕರಣವನ್ನು ಪ್ರಸ್ತಾಪಿಸಿದ್ದುಂಟು.


ಈ ಹಿನ್ನಲೆಯಲ್ಲಿ ನ್ಯಾಯಾಲಯ ಇಂದು ಒಮ್ಮತಕ್ಕೆ ಬರುವಲ್ಲಿ ವಿಫಲವಾದ್ದರಿಂದಾಗಿ ಈಗ ವಿಚಾರಣೆಯನ್ನು ಶನಿವಾರ ಬೆಳಗ್ಗೆ 11 ಗಂಟೆ ಮುಂದೂಡಲಾಗಿದೆ.