ಮಂಡ್ಯ: ಸೆಲ್ಫಿ ವಿಚಾರಕ್ಕೆ ಪದೇಪದೆ ಸುದ್ದಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಈಗ ಮತ್ತೆ ಇದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ‌. ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಬಳಿ‌ ಸೆಲ್ಫಿಗೆ ಮುಗಿಬಿದ್ದ ವ್ಯಕ್ತಿಗೆ ಡಿಕೆಶಿ ವಾರ್ನ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಮಂಗಳವಾರ(ಡಿ.28)137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ(Congress Foundation Day) ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಲು ಡಿ.ಕೆ.ಶಿವಕುಮಾರ್ ಅವರು ಮದ್ದೂರಿಗೆ ತೆರಳಿದ್ದರು‌. ಆದರೆ ಇನ್ನೇನು ಧ್ವಜಾರೋಹಣ ನೆರವೇರಿಸಬೇಕು ಅನ್ನುವಷ್ಟರಲ್ಲಿ ಅಭಿಮಾನಿಯೊಬ್ಬ ಡಿಕೆಶಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದ. ಇದಕ್ಕೆ ಕೋಪಿಸಿಕೊಂಡ ಕೆಪಿಸಿಸಿ ಅಧ್ಯಕ್ಷ(KPCC President)ರು, ‘ಧ್ವಜಾರೋಹಣ ಮಾಡೋ ಬದಲು ನಿನ್ನ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲಾ..?’ ಅಂತಾ ಗರಂ ಆಗಿದ್ದಾರೆ.   


ಇದನ್ನೂ ಓದಿ: ಸೋನಿಯಾ & ರಾಹುಲ್ ಗಾಂಧಿ ನಾಯಕತ್ವದಲ್ಲಿ ನವಭಾರತ ನಿರ್ಮಾಣಕ್ಕೆ ಕೈಜೋಡಿಸಿ: ಸಿದ್ದರಾಮಯ್ಯ


ಡಿಕೆಶಿ ಜೊತೆಗೆ ಅಭಿಮಾನಿಗಳ ಸೆಲ್ಫಿ ಕ್ರೇಜ್


ಸಾಮಾಜಿಕ ಜಾಲತಾಣದಲ್ಲಿ ಡಿ.ಕೆ.ಶಿವಕುಮಾರ್(DK Shivakumar) ಗರಂ ಆಗಿರುವ ವಿಡಿಯೋ ವೈರಲ್(Video Viral) ಆಗುತ್ತಿದೆ. ಈ ಹಿಂದೆ ಕೂಡ ಹಲವು ಬಾರಿ ತಮ್ಮ ಜೊತೆ ಸೆಲ್ಫಿಗೆ ಮುಗಿಬಿದ್ದವರನ್ನು ಗದರಿದ್ದರು ಡಿ.ಕೆ.ಶಿವಕುಮಾರ್. ಇದೀಗ ಮತ್ತೆ ಅಂತಹದ್ದೇ ಘಟನೆ ರಿಪೀಟ್ ಆಗಿದೆ. ಬೇಡ ಬೇಡ ಅಂದರೂ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಡಿಕೆಶಿ ಜೊತೆಗೆ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಇದರಿಂದ ‘ಕನಕಪುರ ಬಂಡೆ’ ಖ್ಯಾತಿಯ ಡಿಕೆಶಿಗೆ ಇರಿಸುಮುರಿಸು ಉಂಟಾಗುತ್ತಿದೆ.


ಮಂಡ್ಯದಲ್ಲಿಯೇ ಮತ್ತೊಂದು ಘಟನೆ..!


ಕೆಲ ತಿಂಗಳ ಹಿಂದೆ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಸೆಲ್ಫಿಗೆ ಫೋಸ್(Selfie Craze) ಕೊಡಲು ಬಂದು ಹೆಗಲ ಮೇಲೆ ಕೈಹಾಕಲು ಪ್ರಯತ್ನಿಸಿದ್ದ ವ್ಯಕ್ತಿಗೆ ಡಿ.ಕೆ.ಶಿವಕುಮಾರ್ ಕಪಾಳಕ್ಕೆ ಭಾರಿಸಿ ‘ಬಿಸಿ’ ಮುಟ್ಟಿಸಿದ್ದರು‌. ಈಗ ಮತ್ತೆ ಮಂಡ್ಯ ಜಿಲ್ಲೆಯಲ್ಲೇ ಇಂತಹದ್ದೇ ಘಟನೆ ರಿಪೀಟ್ ಆಗಿದೆ.   


ಇದನ್ನೂ ಓದಿ: ಮೇಕೆದಾಟು ವಿಚಾರದಲ್ಲಿ ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಆರಂಭಿಸಿದ್ದಾರೆ: ಬಿಜೆಪಿ     


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.