ಬೆಂಗಳೂರು: ರೈತರ ಹೆಸರಿನಲ್ಲಿ ಹಸಿರು ಶಾಲು ಹೊದ್ದು  ಪ್ರಮಾಣ ವಚನ ಸ್ವೀಕರಿಸಿ, ತಮ್ಮನ್ನು ತಾವೇ ರೈತಪರವೆಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪನವರು,ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ರೈತರ ಕಡೆ ಕಣ್ಣೆತ್ತಿಯೂ ನೋಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.


COMMERCIAL BREAK
SCROLL TO CONTINUE READING

ಲಾಕ್‌ಡೌನ್ ಕಾರಣದಿಂದ ರೈತರು ತಾವು ಬೆಳೆದ ಹಣ್ಣು - ಹೂವು - ತರಕಾರಿ ಉತ್ಪನ್ನಗಳನ್ನು ಮಾರುಕಟ್ಟೆ ಸಾಗಿಸಲಾಗದೇ ಒದ್ದಾಡುತ್ತಿದ್ದಾಗ ಸರ್ಕಾರ ಅವರಿಗೆ ನೆರವಿಗೆ ಧಾವಿಸಲಿಲ್ಲ.ಅವರಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಒದಗಿಸಲಿಲ್ಲ.ಆ ಸಂದರ್ಭದಲ್ಲಿ ನಾನೇ ಖುದ್ದು ರೈತರ ಜಮೀನುಗಳಿಗೆ ತೆರಳಿ ಅವರ ಸಂಕಷ್ಟ ಅರಿತಿದ್ದೇನೆ. ನಮ್ಮ ಪಕ್ಷದ ಅನೇಕ ನಾಯಕರು ಹಾಗೂ ಕಾರ್ಯಕರ್ತರು ರೈತರ ಉತ್ಪನ್ನಗಳನ್ನು ಖರೀದಿಸಿ, ಸಂತ್ರಸ್ತರಿಗೆ ವಿತರಿಸುವ ಮೂಲಕ ಅವರ ನೆರವಿಗೆ ನಿಂತರು.ಆದರೆ, ಆಡಳಿತದಲ್ಲಿದ್ದ ಬಿಜೆಪಿ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಅವರು ಕಿಡಿಕಾರಿದರು.


ಹೆಚ್ಚು ಯುವಕರನ್ನು ಪಕ್ಷದ ಸದಸ್ಯರನ್ನಾಗಿ ಮಾಡಲು ಯೂತ್ ಕಾಂಗ್ರೆಸ್ ನಾಯಕರಿಗೆ ಡಿ.ಕೆ. ಶಿವಕುಮಾರ್


ಇದೇ ವೇಳೆ ರಾಜ್ಯದಲ್ಲಿ ಕೊರೊನಾ ನಿರ್ವಹಿಸಲು ವಿಫಲವಾಗಿರುವ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಡಿ.ಕೆ ಶಿವಕುಮಾರ್ 'ಕೊರೋನಾ ರಾಜ್ಯಕ್ಕೆ ಕಾಲಿಟ್ಟ ಮೊದಲ ದಿನದಿಂದಲೂ ರಾಜ್ಯ ಸರ್ಕಾರ, ಜನರ ಹೆಣದ ಮೇಲೆ ಹಣ ಮಾಡಲು ಹಾತೊರೆಯುತ್ತಿದೆ. ಅಲ್ಲದೇ, ಕೊರೋನಾದಿಂದ ಮೃತಪಟ್ಟವರನ್ನು ಗುಂಡಿಗೆ ಎಸೆದು ಸರ್ಕಾರ ಕೈ ತೊಳೆದುಕೊಂಡಿತ್ತು. ಅವರಿಗೆ, ಮರ್ಯಾದೆಯುತ ಅಂತ್ಯಸಂಸ್ಕಾರ ನೆರವೇರಿಸಲೂ ಸರ್ಕಾರದಿಂದ ಆಗಲ್ವಾ? ಇದೇನಾ ನಮ್ಮ ಸಂಸ್ಕೃತಿ? ಎಂದು ತರಾಟೆಗೆ ತೆಗೆದುಕೊಂಡರು.


ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳಿಗೆ ಯಾವೊಬ್ಬ ಸಚಿವರೂ ಭೇಟಿ ನೀಡಲಿಲ್ಲ. ಅವರೆಲ್ಲಾ ಕೇವಲ ಹಣ ಮಾಡುವುದರಲ್ಲೇ ನಿರತರಾಗಿದ್ದರು. ರಾಜ್ಯದ ಆರೋಗ್ಯ ಇಲಾಖೆಯೇ ಅನಾರೋಗ್ಯಕ್ಕೀಡಾಗಿತ್ತು.ಬೆಡ್, ವೆಂಟಿಲೇಟರ್, ಪಿಪಿಇ ಕಿಟ್ ಸೇರಿದಂತೆ ಮಾಸ್ಕ್‌ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಿದ ದೇಶದ ಮೊಟ್ಟ ಮೊದಲ ಹಾಗೂ ಏಕೈಕ ಸರ್ಕಾರವೆಂದರೆ ಅದು ಯಡಿಯೂರಪ್ಪನವರ ಸರ್ಕಾರ. ಇದು ಸೋಂಕಿತ ಸರ್ಕಾರ! ಎಂದು ಛೀಮಾರಿ ಹಾಕಿದರು.