ಡಿಕೆಗೆ ಚುನಾವಣೆಯಲ್ಲಿ ಮಿಸ್ ಆದ ಟಾರ್ಗೆಟ್ ಯಾರು?
ನನ್ನ ಲಿಸ್ಟ್ ನಲ್ಲಿ ಅನೇಕರು ಇದ್ದರೂ, ಆ ಪೈಕಿ ಮೂರು ನಾಯಕರು ಚುನಾವಣೆಯಲ್ಲಿ ಗೆದ್ದರು ಎಂದು ಡಿಸಿಎಂ ಡಿಕೆ ಹೇಳಿದರು. ಡಿಕೆ ಆಪ್ತ ವಲಯದ ಪ್ರಕಾರ ಆ ಮೂರು ಜನ ನಾಯಕರು ಯಾರು?
ಬೆಂಗಳೂರು : ಚುನಾವಣೆ ಸಂದರ್ಭದಲ್ಲಿ ನನ್ನ ಲಿಸ್ಟ್ ನಲ್ಲಿ ಮೂರು ನಾಯಕರು ಇದ್ದರು ಅವರೂ ಮಿಸ್ ಆಗಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೆಲಮಂಗಲದಲ್ಲಿ ಹೇಳಿಕೆ ನೀಡಿದ್ದರು. ಆ ನಾಯಕರು ಯಾರು ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆಗ್ತಿದೆ. ಹಾಗಾದರೆ ಆ ಮೂರು ನಾಯಕರು ಯಾರು?
ಚುನಾವಣಾ ಸಂದರ್ಭದಲ್ಲಿ ಟಾರ್ಗೆಟ್ ಪಾಲಿಟಿಕ್ಸ್:
ನಿನ್ನೆ ನೆಲಮಂಗಲ ಕ್ಷೇಮವನದಲ್ಲಿ ನೂತನ ಶಾಸಕರ ತರಬೇತಿಯ ವೇದಿಕೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ನನ್ನ ಲಿಸ್ಟ್ ನಲ್ಲಿ ಅನೇಕರು ಇದ್ದರೂ, ಆ ಪೈಕಿ ಮೂರು ನಾಯಕರು ಚುನಾವಣೆಯಲ್ಲಿ ಗೆದ್ದರು ಎಂದು ಡಿಸಿಎಂ ಡಿಕೆ ಹೇಳಿದರು.
ಇದನ್ನೂ ಓದಿ- ಕಂಪ್ಲಿ ಪಟ್ಟಣದಲ್ಲಿ ವಿವಿಧಡೆ ದಾಳಿ: ನಾಲ್ಕು ಕಿಶೋರ ಕಾರ್ಮಿಕರ ರಕ್ಷಣೆ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ರೀತಿಯ ಒಂದು ಹೇಳಿಕೆ ನೀಡುತ್ತಿದ್ದಂತೆ ಆ ಮೂರು ನಾಯಕರು ಯಾರು ಎಂಬ ಬಗ್ಗೆ ರಾಜಕೀಕಿಯ ವಲಯದ್ಲಲಿ ಭಾರೀ ಚರ್ಚೆ ಆಗಿತ್ತು. ಡಿಕೆ ಆಪ್ತ ವಲಯದ ಪ್ರಕಾರ ಆ ಮೂರು ಜನ ನಾಯಕರು ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಡಾ.ಸಿ ಎನ್ ಅಶ್ವಥ್ ನಾರಾಯಣ್, ಮುನಿರತ್ನ ಎಂದು ತಿಳಿದುಬಂದಿದೆ.
ಇದನ್ನೂ ಓದಿ- "ಕೆಂಪೇಗೌಡರು ಒಂದು ಜಾತಿ, ಸಮುದಾಯಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ"
ಈ ಮೂರು ಜನರನ್ನು ಎಲೆಕ್ಷನ್ ನಲ್ಲಿ ಹಣೆಯಲು ಟಾರ್ಗೆಟ್ ಮಾಡಿದ್ದ ಡಿಕೆಶಿ, ನಿನ್ನೆ ಈ ಬಗ್ಗೆ ಸುಳಿವು ಬಿಟ್ಟು ಕೊಟ್ಟರು. ನಾನು ಟಾರ್ಗೆಟ್ ಶೂಟ್ ಮಾಡಿದೆ ಅದು ಉತ್ತಮವಾಗಿತ್ತು ನಮಗೆ ಜಯ ಸಿಕ್ಕಿತ್ತು. ಇನ್ನೂ ಬಿಜೆಪಿಯ ಮೂರು ಜನ ಶಾಸಕರ ಟಾರ್ಗೆಟ್ ಇತ್ತು ಅದು ಮಿಸ್ ಆಯಿತು. ಪರವಾಗಿಲ್ಲ, ಮುಂದೆ ನೋಡುವ ಎನ್ನುವ ಮೂಲಕ ಬಿಜೆಪಿ ಪಕ್ಷದ ಪ್ರಭಾವಿ ನಾಯಕರನ್ನ ಸೋಲಿಸಿದ್ದು ನಾನು ಎಂದು ಹೇಳಿದ್ದಾರೆ. ಬಿಜೆಪಿ ಪ್ರಭಾವಿ ನಾಯಕರ ಪೈಕಿ ಡಾ. ಕೆ. ಸುಧಾಕರ್, ಸಿಟಿ ರವಿ , ಮುರುಗೇಶ್ ನಿರಾಣಿ, ಶ್ರೀರಾಮುಲು, ಬಿ.ಸಿ. ಪಾಟೀಲ್, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಸೇರಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.