ಡಿಕೆಶಿ ಸ್ಪೀಕರ್ ಕಚೇರಿಯಲ್ಲಿ ಶಾಸಕರ ರಾಜೀನಾಮೆ ಪತ್ರಗಳನ್ನು ಹರಿದು ಹಾಕಿದ್ದಾರೆ- ಯಡಿಯೂರಪ್ಪ
ಡಿ.ಕೆ.ಶಿವಕುಮಾರ್ ಸ್ಪೀಕರ್ ಕಚೇರಿಯಲ್ಲಿ ಶಾಸಕರು ನೀಡಿರುವ ರಾಜೀನಾಮೆ ಪತ್ರಗಳನ್ನು ಹರಿದು ಹಾಕಿದ್ದಾರೆ ಇದು ಖಂಡನೀಯ ಎಂದು ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. `ಜನರು ಡಿ.ಕೆ.ಶಿವಕುಮಾರ್ ವರ್ತಿಸುತ್ತಿರುವ ರೀತಿ ನೋಡುತ್ತಿದ್ದಾರೆ. ಅವರು ರಾಜೀನಾಮೆ ನೀಡಲು ಹೋಗಿದ್ದ ಸ್ಪೀಕರ್ ಕಚೇರಿಯೊಳಗಿನ ಕೆಲವು ಶಾಸಕರ ರಾಜೀನಾಮೆ ಪತ್ರಗಳನ್ನು ಹರಿದು ಹಾಕಿದರು. ಇದು ಖಂಡನೀಯ` ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ಹೇಳಿದರು.
ಬೆಂಗಳೂರು: ಡಿ.ಕೆ.ಶಿವಕುಮಾರ್ ಸ್ಪೀಕರ್ ಕಚೇರಿಯಲ್ಲಿ ಶಾಸಕರು ನೀಡಿರುವ ರಾಜೀನಾಮೆ ಪತ್ರಗಳನ್ನು ಹರಿದು ಹಾಕಿದ್ದಾರೆ ಇದು ಖಂಡನೀಯ ಎಂದು ಬಿ.ಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. "ಜನರು ಡಿ.ಕೆ.ಶಿವಕುಮಾರ್ ವರ್ತಿಸುತ್ತಿರುವ ರೀತಿ ನೋಡುತ್ತಿದ್ದಾರೆ. ಅವರು ರಾಜೀನಾಮೆ ನೀಡಲು ಹೋಗಿದ್ದ ಸ್ಪೀಕರ್ ಕಚೇರಿಯೊಳಗಿನ ಕೆಲವು ಶಾಸಕರ ರಾಜೀನಾಮೆ ಪತ್ರಗಳನ್ನು ಹರಿದು ಹಾಕಿದರು. ಇದು ಖಂಡನೀಯ" ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ಹೇಳಿದರು.
ರಾಜೀನಾಮೆ ನೀಡಿದ ಶಾಸಕರನ್ನು ಭೇಟಿ ಮಾಡಲು ಬಂದ ಡಿಕೆ .ಶಿವಕುಮಾರ್ "ಯಾರೂ ರಾಜೀನಾಮೆ ನೀಡುವುದಿಲ್ಲ. ನಾನು ಶಾಸಕರನ್ನು ಭೇಟಿ ಮಾಡಲು ಬಂದಿದ್ದೇನೆ" ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.ರಾಮಲಿಂಗ ರೆಡ್ಡಿ ಸೇರಿದಂತೆ ಮೂವರು ಕಾಂಗ್ರೆಸ್ ಶಾಸಕರ ಮನವೊಲಿಸಲು ಪ್ರಯತ್ನಿಸಿದರು.
ಈಗಾಗಲೇ ಸ್ಪೀಕರ್ ಅನುಪಸ್ಥಿತಿಯಲ್ಲಿ ಎಂಟು ಕಾಂಗ್ರೆಸ್ ಮತ್ತು ಮೂವರು ಜೆಡಿಎಸ್ ಶಾಸಕರು ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಕಚೇರಿಗೆ ಸಲ್ಲಿಸಿದ್ದಾರೆ. ಆಡಳಿತಾರೂಡ ಸರ್ಕಾರದ14 ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಸಮ್ಮಿಶ್ರ ಸರ್ಕಾರ ಆಗಾಗ ಬಂಡಾಯದ ಬಿಸಿಯನ್ನು ಎದುರಿಸುತ್ತಲೇ ಇದೆ. ಈಗ ಸಿಎಂ ವಿದೇಶಿ ಪ್ರವಾಸದಲ್ಲಿರುವ ಹಿನ್ನಲೆಯಲ್ಲಿ ಈಗ ಶಾಸಕರು ರಾಜೀನಾಮೆ ನೀಡಿರುವುದು ಕೂತೂಹಲಕ್ಕೆ ಕಾರಣವಾಗಿದೆ.
224 ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ 116 ಸ್ಥಾನಗಳನ್ನು ಹೊಂದಿದ್ದು, 113 ಬಹುಮತಕ್ಕೆ ಇರುವ ಮ್ಯಾಜಿಕ್ ನಂಬರ್ ಆಗಿದೆ. ಒಂದು ವೇಳೆ 14 ಶಾಸಕರು ತ್ಯಜಿಸಿದರೆ ಸರ್ಕಾರ ಬಿಳಲಿದೆ.