ಅದೃಷ್ಟಕ್ಕಾಗಿ ಕಾಂಗ್ರೆಸ್ ಪಕ್ಷದ ಚಿಹ್ನೆಗೆ ನಾಲ್ಕನೇ ಗೆರೆ ಜೋಡಿಸಿದ ಡಿ ಕೆ ಶಿವಕುಮಾರ್!
ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತ ಎಂದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ 2023ರ ರಾಜ್ಯ ಚುನಾವಣೆಗೆ ಮತ್ತಷ್ಟು ಶಕ್ತಿ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಈ ಹಿಂದೆ ಹಸ್ತದ ರೇಖೆಗೆ 3 ಗೆರೆಗಳು ಇದ್ದವು ಆದರೆ ಈಗ ನಾಲ್ಕನೇ ರೇಖೆಯನ್ನ ಜೋಡಿಸಲಾಗಿದೆ.
ಬೆಂಗಳೂರು : ಕಾಂಗ್ರೆಸ್ ಪಕ್ಷದ ಚಿಹ್ನೆ ಹಸ್ತ ಎಂದು ಎಲ್ಲರಿಗೂ ಗೊತ್ತಿರುವ ವಿಷಯ, ಆದರೆ 2023ರ ರಾಜ್ಯ ಚುನಾವಣೆಗೆ ಮತ್ತಷ್ಟು ಶಕ್ತಿ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪಕ್ಷದ ಚಿಹ್ನೆಗೆ ಈ ಹಿಂದೆ ಇದ್ದ ಮೂರು ಗೆರೆಗಳ ಬದಲಾಗಿ ನಾಲ್ಕನೇ ಗೆರೆಯನ್ನು ಸೇರಿಸಿದ್ದಾರೆ.
ಹಾಗಾದರೆ ಹೊಸ ರೇಖೆ ಹಿಂದಿರುವ ನಂಬಿಕೆ ಏನು?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ಅದೃಷ್ಟದ ಕಾರಣಕ್ಕೆ ಕೈ ರೇಖೆಯನ್ನೇ ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಹಲವಾರು ರಾಜಕೀಯ ವಿದ್ಯಮಾನಗಳ ನಡುವೆ ಕಾಂಗ್ರೆಸ್ಗೆ 1980 ರಲ್ಲಿ ಹಸ್ತದ ಗುರುತು ಚಿಹ್ನೆಯಾಗಿ ನಿಗದಿ ಆಗಿತ್ತು.ಈ ಹಿಂದಿನ ಹಸ್ತದಲ್ಲಿ ಒಟ್ಟು ಮೂರು ಗೆರೆಗಳು ಇದ್ದವು,ಈಗ ಡಿಕೆಶಿ ಬದಲಾವಣೆ ಮಾಡಿರುವ ಹಸ್ತದಲ್ಲಿ ಮೂರು ಗೆರೆಯ ಜೊತೆಗೆ ಮಧ್ಯದಲ್ಲಿ ಒಂದು ಗೆರೆ ಎಳೆಯಲಾಗಿದೆ.ಈ ಗೆರೆ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯ ಭಾಗಕ್ಕೆ ತಲುಪುತ್ತದೆ.ಖ್ಯಾತ ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಹಸ್ತದಲ್ಲಿ ರೇಖೆ ಬದಲಾವಣೆ ಮಾಡಿಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹುಬ್ಬಳ್ಳಿ–ಪುಣೆಗೆ ನೇರ ವಿಮಾನ ಸೇವೆ ಆರಂಭ
ಹಸ್ತಕ್ಕೆ ನಾಲ್ಕನೆ ಗೆರೆಯು ಅದೃಷ್ಟ ಮತ್ತು ಲಕ್ಷ್ಮೀ ,ಲಕ್ಕಿ ಎಂಬುದನ್ನು ಸೂಚನೆ ನೀಡಲಿದೆ. ಸದ್ಯ ಡಿಕೆಶಿ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತ್ರ ಈ ಚಿನ್ಹೆ ಬಳಕೆಯಾಗುತ್ತಿದೆ.ಸಿದ್ದರಾಮಯ್ಯ ನಡೆಸುತ್ತಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಹಳೆಯ ಹಸ್ತದ ಗುರುತನ್ನೇ ಬಳಸಲಾಗುತ್ತಿದೆ.ಈ ಬದಲಿಸಿದ ಚಿನ್ಹೆ ಹಸ್ತಕ್ಕೆ ಲಕ್ಕಿ ಆಗಲಿದ್ಯಾ? ಅಥವಾ ಸ್ವಪಕ್ಷದಿಂದ ಇದಕ್ಕೆ ನಕಾರ ಕೇಳಿಬರುತ್ತಾ? ಮೌಢ್ಯ ವಿರುದ್ಧ ಮಾತನ್ನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಸುಮ್ಮನಿರುತ್ತಾರ? ಎನ್ನುವುದನ್ನು ನಾವು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.