Basavaraja Bommai : ಜನ ಮೆಚ್ಚುವ ರಾಜಕಾರಣ ಮಾಡಿ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಕಿಡಿ
Basavaraja Bommai: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊನ್ನೆ ಮೊದಲ ಸಚಿವ ಸಂಪುಟ ಸಭೆ ಅಯಿತು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲ ಗ್ಯಾರಂಟಿಗೆ ಆದೇಶ ಮಾಡುತ್ತೇವೆ ಎಂದಿದ್ದರು.
ಹಾವೇರಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊನ್ನೆ ಮೊದಲ ಸಚಿವ ಸಂಪುಟ ಸಭೆ ಅಯಿತು. ಮೊದಲ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ನೀಡಿದ್ದ ಎಲ್ಲ ಗ್ಯಾರಂಟಿಗೆ ಆದೇಶ ಮಾಡುತ್ತೇವೆ ಎಂದಿದ್ದರು. ಇವರಾದರೂ ಜನರಿಗೆ ಏನಾದರೂ ಮಾಡಲಿ ಎಂದು ನಾನು ಖುಷಿ ಆಗಿದ್ದೆ. ಆದರೆ ಸಂಪುಟ ಸಭೆಯ ಬಳಿಕ ಪತ್ರಕರ್ತರು ಪ್ರಶ್ನೆ ಕೇಳುವಾಗ ತಡಬಡಿಸಿ, ಪ್ರಶ್ನೆ ಕೇಳಿದರೆ ಹಿಂದಿನ ಇತಿಹಾಸ ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದರು.
ಹಳೆಯದ್ದು ಎಲ್ಲ ಬೇಡ, ಗ್ಯಾರಂಟಿಗಳನ್ನು ಯಾವಾಗ ಮಾಡುತ್ತಿರಿ ಅಂತ ಕೇಳಿದರೆ, ಮುಂದಿನ ಸಂಪುಟ ಸಭೆಯಲ್ಲಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇವರು ಮುಖ್ಯಮಂತ್ರಿ ಆಗುವುದಕ್ಕೆ, ಮಂತ್ರಿ ಆಗುವುದಕ್ಕೆ ಬಡಿದಾಡುತ್ತಿದ್ದಾರೆ. ಹೊಸದಾಗಿ ಮದುವೆಯಾದ ಸೊಸೆ ಕೈಯಲ್ಲಿ ಕೀಲಿ ಇರಲ್ಲವಂತೆ, ಸೊಸೆ ಕೈಯಲ್ಲಿ ಕೀಲಿನು ಇಲ್ಲ, ಜವಾಬ್ದಾರಿನೂ ಇಲ್ಲ. ಇವರ ಸಂಪುಟದ ಸಚಿವರಿಗೆ ಯಾರಿಗೂ ಖಾತೆ ಕೊಟ್ಟಿಲ್ಲ. ಕೆಲವರಿಗೆ ಸಚಿವ ಸ್ಥಾನ ಇಲ್ಲ. ಸಚಿವ ಸ್ಥಾನ ಇಲ್ಲದವರಿಗೆ ಖಾತೆ ಇಲ್ಲ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: Bangalore Marathon: ಅಕ್ಟೋಬರ್ 8ರಂದು ʼಬೆಂಗಳೂರು ಮ್ಯಾರಥಾನ್ ʼ: ಇಲ್ಲಿದೆ ನೋಡಿ ವಿವರ...
ಮೊನ್ನೆ ನಡೆದ ಅಸೆಂಬ್ಲಿಯಲ್ಲಿ ನಾನು ಸಿದ್ದರಾಮಯ್ಯನವರಿಗೆ ಮಂತ್ರಿಗಳಿಗೆ ಖಾತೆ ನೀಡಿ ಕೇಳಿದೆ. ನೀವು ಚಿಂತೆ ಮಾಡಬೇಡಿ ಅಂತ ಹೇಳಿದರು. ನನಗೆ ಚಿಂತೆ ಇಲ್ಲ. ನಿಮ್ಮ ಸಚಿವರು ಮಾತನಾಡಿ ಅಂದರು, ಅದಕ್ಕೆ ಕೇಳಿದೆ ಎಂದಿದ್ದೆ. ಸಚಿವರನ್ನಾಗಿ ಸುಮ್ಮನೆ ಕೂರಿಸಿದ್ದಾರೆ. ಮುಖ್ಯಮಂತ್ರಿ ಆದವರು ಈ ರಾಜ್ಯದ ಮಾಲಿಕರಲ್ಲ. ಕೊಟ್ಟಿರುವ ಜವಾಬ್ದಾರಿಯನ್ನು ಈ ರಾಜ್ಯದ ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎಂದರು.
ನಾವು ಮಂಜೂರು ಮಾಡಿರುವ ಕೆಲಸಗಳನ್ನು ಬಡ ಜನರಿಗೆ ಮಾಡಲಾಗಿದೆ. ಅವುಗಳನ್ನು ಮಾಡಲೇಬೇಕು. ಶ್ರೀ ಸಾಮಾನ್ಯ ಜನರ ಒಳಿತಿಗಾಗಿ ಮಾಡಿದ ಕೆಲಸಗಳನ್ನು ನಿಲ್ಲಿಸಲು ಸಾಧ್ಯವೇ? ಕಾಲೇಜ್, ರಸ್ತೆ, ಕೈಗಾರಿಕೆಗಳ ಕಾಮಗಾರಿಗಳನ್ನು ನಿಲ್ಲಿಸಲು ಸಾಧ್ಯವೇ? ಯಾರೋ ಒಬ್ಬರು ಇದು ನಮ್ಮ ಸರ್ಕಾರ ಅಂತ ಹೇಳಿದರೆ, ಅದು ಸಾಧ್ಯ ವಿಲ್ಲ. ಇದು ಇಡೀ ರಾಜ್ಯದ ಜನರ ಸರ್ಕಾರ ಎಂದರು.
ಇದನ್ನೂ ಓದಿ: ದ್ವೇಷ ರಾಜಕಾರಣ ಬಿಟ್ಟು ಒಳ್ಳೆ ಕೆಲಸಕ್ಕೆ ಸಮಯ ಮೀಸಲಿಡಿ: ಡಾ.ಸಿ.ಎನ್.ಅಶ್ವತ್ಥ್ ನಾರಾಯಣ
ಸರ್ಕಾರವನ್ನು ಯಾರದ್ದೋ ಒಂದು ಸಮುದಾಯದ ಸರ್ಕಾರ ಆಗಲು ಬಿಡುವುದಿಲ್ಲ. ಇದು ಯಾವುದೋ ಒಂದು ಪಕ್ಷ ಹಾಗೂ ವ್ಯಕ್ತಿಯ ಸರ್ಕಾರ ಅಲ್ಲ. ಕೇವಲ ಆಡಳಿತ ಪಕ್ಷದ ಶಾಸಕರು ಟ್ಯಾಕ್ಸ್ ಕಟ್ಟಲ್ಲ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ಟ್ಯಾಕ್ಸ್ ಕಟ್ಟುತ್ತಾನೆ ಎಂದರು.
ಅಕ್ಕಿ, ಕರೆಂಟು ನನಗೂ ನಿಮಗೂ ಸಿಗುತ್ತದೆ ಎಂದಿದ್ದರು. ಈಗ ಕಂಡಿಷನ್ ಇದ್ದಾವೆ. ಇವಾಗ ಅವರ ಬಣ್ಣ ಏನು ಎಂದು ಗೊತ್ತಾಗುತ್ತಿದೆ. ಅದಕ್ಕೆ ಅಂದೆ ನಾನು ಹೇಳಿದ್ದೆ. ಮೇ ಹತ್ತರ ವರೆಗೂ ಗ್ಯಾರಂಟಿ, ಆಮೇಲೆ ಗಳಗಂಟಿ ಅಂತ. ಇವಾಗ ಶುರುವಾಗಿದೆ. ಇನ್ನು ಸ್ವಲ್ಪ ದಿನ ಮಹಿಳೆಯರು ಕಾರ್ಡ್ ಹಿಡಿದುಕೊಂಡು ರಸ್ತೆಗೆ ಬರುತ್ತಾರೆ. ಆಮೇಲೆ ಗೊತ್ತಾಗುತ್ತದೆ. ಆಸ್ಪತ್ರೆ, ರಸ್ತೆ, ನೀರಿನ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಿದ್ದಾರೆ. ಯಾಕಂದರೆ ಕಾರ್ಡ್ ಗಳಿಗೆ ದುಡ್ಡು ಕೊಡಲು ಹಣ ಹೊಂದಿಸಬೇಕಾಗಿದೆ ಎಂದು ಬೊಮ್ಮಾಯಿ ಟಾಂಗ್ ಕೊಟ್ಟರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ