ಬೆಂಗಳೂರು: ಗಣೇಶ ಹಬ್ಬವನ್ನು ನಾಗರಿಕರು ಅತ್ಯಂತ ಪರಿಸರ ಸ್ನೇಹಿಯಾಗಿ ಆಚರಿಸಬೇಕೆಂದು ಗದಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಪುರಿಯ ಕಡಲ ತೀರದಲ್ಲಿ ಮೂಡಿದ Go Green ಗಣಪ! 


ಪ್ರತಿ ವರ್ಷ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಈ ಬಾರಿ ಕೊರೋನಾ ಸನ್ನಿವೇಶಕ್ಕೆ ಸಿಲುಕಿದ್ದು ಅರಿಶಿನದಿಂದ ಗಣೇಶನ ಮೂರ್ತಿ ಮಾಡುವ ಕುರಿತು ಮಂಡಳಿಯು ಜಾಗೃತಿ ಮೂಡಿಸುತ್ತಿದೆ. ಕೊರೋನಾ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪರಿಸರ ಸ್ನೇಹಿ ಜತೆಗೆ ಆರೋಗ್ಯ ಸ್ನೇಹಿ ಗಣೇಶೋತ್ಸವಕ್ಕೆ ಸಿದ್ಧತೆ ನಡೆಯುತ್ತಿದ್ದು ಹಬ್ಬದ ದಿನ ಜನ ದಟ್ಟಣೆ ಹಾಗೂ ಸಾಮಾಜಿಕ ಅಂತರ ಕಾಪಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ. 


ಇದನ್ನು ಓದಿ: ಸ್ತ್ರೀರೂಪದ ಗಣೇಶನ ಬಗ್ಗೆ ನಿಮಗೆಷ್ಟು ಗೊತ್ತು?


ಅಗಸ್ಟ 22 ರಂದು ಗಣೇಶ ಚತುರ್ಥಿ ಇದ್ದು, ಈ ಬಾರಿ ಕೊರೋನಾ ಪ್ರಕರಣ ಹೆಚ್ಚುತ್ತಿರುವುದರಿಂದ ವೈರಾಣು ನಿರೋಧಕ ಶಕ್ತಿ ಹೊಂದಿರುವ ಅರಿಶಿನ ಗಣೇಶ ಮೂರ್ತಿಯನ್ನು ಮನೆಯಲ್ಲೇ ತಯಾರಿಸಿ ಪೂಜಿಸಲು ಹಾಗೂ ಅದನ್ನು ಮನೆಯಲ್ಲೇ ವಿಸರ್ಜಿಸುವಂತೆ ಮಂಡಳಿಯು ಜಾಗೃತಿ ಮೂಡಿಸುತ್ತಿದೆ.


ಅರಿಶಿನ ಗಣಪತಿ ಮಾಡುವ ವಿಧಾನ : ಮೊದಲು ಅರಿಶಿನ ಹಾಗೂ ಮೈದಾಹಿಟ್ಟಿಗೆ ನೀರು ಮಿಶ್ರಣ ಮಾಡಿ ಹದವಾಗಿ ಮಾಡಿಕೊಂಡು ಗಣೇಶನ ಆಕಾರ ನೀಡಬೇಕು. ಸೊಂಡಿಲನ್ನು ಮಾಡಿದ ಬಳಿಕ ಮೆಣಸಿನ ಕಾಳನ್ನು ಬಳಸಿ ಮೂರ್ತಿಗೆ ಕಣ್ಣು ಮಾಡಬಹುದು. ಬಳಿಕ ಹೂವಿನ ಅಲಂಕಾರ ಮಾಡಿದರೆ ಪ್ರತಿಷ್ಟಾಪಿಸಿ ಗಣೇಶ ಮೂರ್ತಿ ಸಿದ್ಧವಾಗುತ್ತದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಫೇಸ್ ಬುಕ್ ಪೇಜ್ ಗೆ ಭೇಟಿ ನೀಡಿದರೆ ಅರಿಶಿನದಿಂದ ಗಣೇಶ ಮೂರ್ತಿ ಮಾಡುವ ವಿಧಾನ ತಿಳಿದುಕೊಳ್ಳಬಹುದು. ಇಂತಹ ಪುಟ್ಟ ಪುಟ್ಟ ಪ್ರತಿಮೆಗಳನ್ನು ತಯಾರಿಸಿ ಮನೆಯ ಆವರಣದಲ್ಲಿ ವಿಸರ್ಜನೆ ಮಾಡುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಬಿ. ರುದ್ರೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.