ಬೆಂಗಳೂರು:  ಶ್ರೀರಾಮಲು ಈ ಹಿಂದೆ ಮಾಡಿದ್ದ ಟೀಕೆಗೆ ವ್ಯಂಗವಾಡಿರುವ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ ಶಿವಕುಮಾರ್‌ " ರಾಮಲು ಅವರು ನನಗೆ ಜೈಲಿಗೆ ಕಲಿಸಲು ದಿನಾಂಕ ಫಿಕ್ಸ್ ಮಾಡಿದ್ದರು ಈಗ ಹೊಸ ಡೆಟ್ ಯಾವಾಗ ಕೊಡುತ್ತಾರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಶಾಂತಕ್ಕ ದಿಲ್ಲಿಗೆ ಡಿಕೆ ಶಿವಕುಮಾರ್ ಎಂದು ಹೇಳಿದ್ದ ಶ್ರೀರಾಮಲು ಹೇಳಿಕೆಯನ್ನು ಪುನಃ ನೆನಪಿಸಿದ ಡಿಕೆಶಿ "ಅವರು ನವಂಬರ್ 6ಕ್ಕೆ  ಜೈಲಿಗೆ ಸೇರುತ್ತೇನೆ ಎಂದು ದಿನಾಂಕ ನಿಗದಿ ಮಾಡಿದ್ದರು ಈಗ ಹೊಸ ಡೆಟ್ ಯಾವಾಗ ಕೊಡುತ್ತಾರೋ ಗೊತ್ತಿಲ್ಲ ಅವರು ಜಡ್ಜ್ ಸಾಹೇಬರು ಅಂತಾ ರಾಮಲು ಅವರನ್ನು ಡಿಕೆಶಿ ಕಾಲೆಳೆದಿದ್ದಾರೆ. ಇನ್ನು ಮುಂದುವರೆದು ಬಳ್ಳಾರಿಯ ಚುನಾವಣೆ ವೇಳೆ ನನ್ನ ಪಾಡಿಕೆ ನಾನು ಶಾಂತಕ್ಕ ರಾಮಲು ಅಣ್ಣಾ ಅಂದುಕೊಂಡಿದ್ದೆ ಎಂದು ಅವರು ವ್ಯಂಗವಾಡಿದ್ದಾರೆ.


ಇನ್ನು ಜನಾರ್ಧನ್  ರೆಡ್ಡಿಯವರ ಬಗ್ಗೆ ಪ್ರತಿಕ್ರಿಯಿಸಿದ ಅವರು " ದೊಡ್ಡವರ ಕತೆ ನಮಗೆ ಬೇಡ ದೊಡ್ಡ ಜನ ದೊಡ್ಡ ಶಕ್ತಿಗಳಿಗೆ ದೇವರು ಒಳ್ಳೆಯದು ಮಾಡಲಿ ಎಂದು ಡಿಕೆಶಿ  ತಿಳಿಸಿದರು