ಶಿವಮೊಗ್ಗ : ಮನೆಯಲ್ಲಿ ಪುಟ್ಟ ಮಕ್ಕಳಿದ್ದಾಗ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಹೇಳುತ್ತಾರೆ. ಯಾಕೆಂದರೆ ಆ ಕಂದಮ್ಮಗಳಿಗೆ ಸರಿ ತಪ್ಪಿನ ಅರಿವಿರುವುದಿಲ್ಲ. ಏನು ಮಾಡಬೇಕು ಏನು ಮಾಡಬಾರದು ಎನ್ನುವುದು ತಿಳಿದಿರುವುದಿಲ್ಲ. ಕೆಲವು ಮಕ್ಕಳಿಗೆ ಕೈಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಾಯಿಗೆ ಹಾಕುವ ಹವ್ಯಾಸ ಇರುತ್ತದೆ. ಹೀಗೆ ಮಾಡಿಕೊಂಡಾಗ ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡರೆ ಮಕ್ಕಳ ಪ್ರಾಣಕ್ಕೆ ಎರವಾಗಬಹುದು. ಹೊನ್ನಾಳಿ ತಾಲೂಕು  ನ್ಯಾಮತಿ ಹತ್ತಿರದ ಗಂಜೇನಹಳ್ಳಿಯಳಿ ಇನ್ಥಹುದ್ದೆ ಘಟನೆ ನಡೆದಿದೆ.   


COMMERCIAL BREAK
SCROLL TO CONTINUE READING

ಮೀನು ನುಂಗಿದ ಕಂದಮ್ಮ : 
ಇಲ್ಲಿಯ ಯೋಗೀಶ್‌ ಮತ್ತು ರೋಜಾ ದಂಪತಿಯ ಪುಟ್ಟ ಕಂದಮ್ಮ ಇಡೀ ಮೀನನ್ನು ನುಂಗಿ ಅಪಾಯಕ್ಕೆ ಸಿಲುಕಿರುವ ಘಟನೆ ನಡೆದಿದೆ. ಮೀನು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಜೀವಾಪಾಯದಿಂದ ಪಾರು ಮಾಡಿದ್ದಾರೆ. 


ಇದನ್ನೂ ಓದಿ : ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿ‌ಬಿಎಂಪಿ ಗುಡ್ ನ್ಯೂಸ್


ಗಂಭೀರವಾಗಿತ್ತು ಮಗುವಿನ ಸ್ಥಿತಿ: 
11 ತಿಂಗಳ ಮಗುವೊಂದು ಮನೆಯೊಳಗೆ ಆಟವಾಡುತ್ತಿದ್ದ ವೇಳೆ ಇಡೀ ಮೀನನ್ನು ನುಂಗಿ ಬಿಟ್ಟಿದೆ. 11 ತಿಂಗಳ ಕಂದಮ್ಮ ಪ್ರತೀಕ್ ಇಡೀ ಮೀನು ನುಂಗಿರುವ ಕಾರಣ ಅದು ಗಂಟಲ್ಲಿ ಸಿಕ್ಕಿ ಹಾಕಿ ಕೊಂಡಿತ್ತು. ಇದರಿಂದ ಮಗುವಿಗೆ ಉಸಿರಾಟ ಸಮಸ್ಯೆ ಕಾಡತೊಡಗಿದೆ.  ಮೀನನ್ನು ಹೊರ ತೆಗೆಯುವ ಪ್ರಯತ್ನವನ್ನು ಪೋಷಕರು ಮಾಡಿದ್ದರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಗುವಿನ ಸ್ಥಿತಿಯು ಗಂಭೀರವಾಗಿತ್ತು. ಬಳಿಕ ಪೋಷಕರು ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದರು. 


ಮೀನನ್ನು ಹೊರ ತೆಗೆದ ವೈದ್ಯರ ತಂಡ :
ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ ತಜ್ಞ ವೈದ್ಯರು ಮಗುವನ್ನು ತೀವ್ರ ನಿಗಾಘಟಕದಲ್ಲಿರಿಸಿ, ಗಂಟಲಲ್ಲಿ ಸಿಕ್ಕಿಕೊಂಡಿದ್ದ 11.3 ಸೆಂ.ಮೀ. ಉದ್ದದ ಮೀನನ್ನು ಹೊರ ತೆಗೆದು ಮಗುವಿನ ಜೀವವನ್ನು ಉಳಿಸಿದ್ದಾರೆ. ಇದೊಂದು ಅಪರೂಪದ ಪ್ರಕರಣವಾಗಿದ್ದು, ಪ್ರಕರಣದಲ್ಲಿ ಮಗುವಿಗೆ ಮಕ್ಕಳ ತಜ್ಞ ವೈದ್ಯ ಡಾ.ಪ್ರದೀಪ್‌ ಚಿಕಿತ್ಸೆ ಅವರು ನೀಡಿದ್ದಾರೆ. 


ಇದನ್ನೂ ಓದಿ :ಸರ್ಕಾರಿ ಕಚೇರಿಯಲ್ಲಿ ಶಾಸಕರ ಲೆಟರ್‌ಪ್ಯಾಡ್‌, ಸೀಲ್-ಸೈನ್


ಬಹಳ ಎಚ್ಚರಿಕೆ ಅಗತ್ಯ :
ಚಿಕ್ಕಮಕ್ಕಳು ಈ ರೀತಿ ಆಹಾರ ಪದಾರ್ಥ, ಇಲ್ಲವೇ ಚಾಕೋಲೇಟ್‌, ಕಾಡಿಗೆ ಡಬ್ಬಿ, ಅಡಕೆ, ಗೋಲಿ, ಗಜಗ, ಶೇಂಗಾ ಬೀಜದಂತಹ ವಸ್ತುಗಳನ್ನು ಗಂಟಲಲ್ಲಿ ಸಿಕ್ಕಿಸಿಕೊಂಡು ಪ್ರಾಣಕ್ಕೆ ಎರವಾದಂತಹ ಘಟನೆಗಳು ಈ ಹಿಂದೆ ಕೂಡಾ ನಡೆದಿವೆ. ಇದು ಮಕ್ಕಳ ಜೀವಕ್ಕೆ ಕುತ್ತು ತಂದು ಬಿಡುತ್ತದೆ. ಹೀಗಾಗಿ ಪೋಷಕರು ಚಿಕ್ಕಮಕ್ಕಳ ಕೈಗೆ ಯಾವುದೇ ಘನ ವಸ್ತುಗಳನ್ನು ಸಿಗದಂತೆ ಇಡಬೇಕು ಎಂದು  ತೀವ್ರ ನಿಗಾ ಘಟಕ ಹಾಗೂ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯರಾದ ಡಾ.ವಿನೋದ್‌ ಸಲಹೆ ನೀಡಿದ್ದಾರೆ.ವೈದ್ಯರ ಸೇವೆಯನ್ನು ಸರ್ಜಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ಹಾಗೂ  ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ.ಪ್ರಶಾಂತ್‌ ಅವರು ಶ್ಲಾಘಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.