ಕೆಪಿಎಂಇ ಮಸೂದೆ ವಿರೋಧಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ಸೋಮವಾರದಿಂದ ನಡೆಸುತ್ತಿರುವ ಮುಷ್ಕರದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧೇಯಕ ಇನ್ನೂ ಮಂಡನೆಯೇ ಆಗಿಲ್ಲ ಹೀಗಿರುವಾಗ ಮುಷ್ಕರ ಮಾಡುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಖಾಸಗಿ ಆಸ್ಪತ್ರೆಯ ವೈದ್ಯರು ಕೆಪಿಎಂಇ ಮಸೂದೆ ವಿರೋಧಿಸಿ ಮುಷ್ಕರ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧೇಯಕ ಸದನದಲ್ಲಿ ಇನ್ನೂ ಮಂಡನೆಯೇ ಆಗಿಲ್ಲ. ಜೊತೆಗೆ ಸರ್ಕಾರ ಆ ವಿಚಾರದಲ್ಲಿ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ವಿಧೇಯಕ ಮಂಡನೆಗೆ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ನಿಮ್ಮೊಂದಿಗೂ ಸಮಾಲೋಚನೆ ಮಾಡುತ್ತೇನೆ ಎಂದು ವೈದ್ಯ ಸಂಘಟನೆಯ ಪದಾಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದರು.


ಇದೇ ಸಂದರ್ಭದಲ್ಲಿ, ವೈದ್ಯರು ಮುಷ್ಕರ ಮಾಡಲು ಸದನದಲ್ಲಿ ವಿಧೇಯಕ ಅಂಗೀಕಾರ ಆಗಿದೆಯೇ ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ವಿಧೇಯಕ  ಮಂಡನೆಗೂ ಮುನ್ನ  ವೈದ್ಯರನ್ನು ಕರೆದು ಮಾತನಾಡುವೆ ಎಂದು ಮತ್ತೊಮ್ಮೆ ಹೇಳುತ್ತೇನೆ. ಆದ್ದರಿಂದ ಖಾಸಗಿ ವೈದ್ಯರು ಮುಷ್ಕರ ಮಾಡುವುದು ಸರಿಯಿಲ್ಲ ಎಂದು ತಿಳಿಸಿದರು.