ಬೆಂಗಳೂರು : ಕಾವೇರಿ ನದಿಯಲ್ಲಿ ಕರೋನಾದಿಂದ ಮೃತಪಟ್ಟ ವ್ಯಕ್ತಿಗಳ ಅಸ್ಥಿ ವಿಸರ್ಜನೆ ವಿರುದ್ದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಕಾರಣ ಕರೋನಾದಿಂದ ತೀರಿಕೊಂಡ ವ್ಯಕ್ತಿಯ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸಿದರೆ,  ಕರೋನಾ ಮಹಾಮಾರಿ (Coronavirus) ಹರಡುತ್ತದೆ ಎಂಬುದು. ಮತ್ತೊಂದು ಕಡೆ ಗಂಗಾನದಿಯಲ್ಲಿ ನೂರಾರು ಶವಗಳು ತೇಲುತ್ತಿರುವುದು ಪತ್ತೆಯಾಗಿದೆ. ಇವು ಕರೋನಾ ಪೀಡಿತರ (COVID Patient) ಶವ ಆಗಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿ ಶವಗಳು ನೀರಿನಲ್ಲಿ ತೇಲುತ್ತಿದ್ದರೆ ಅದರಿಂದ ಕರೋನಾ (COVID-19) ಹರಡಬಹುದು ಎಂಬ ಆತಂಕ ಒಂದು ಕಡೆ ದಟ್ಟವಾಗಿ ಹರಡುತ್ತಿದೆ. ಇದಕ್ಕೆ ತಜ್ಞರು ಏನು ಹೇಳುತ್ತಾರೆ..?


COMMERCIAL BREAK
SCROLL TO CONTINUE READING

ಕರೋನಾ ನೀರಿನಲ್ಲಿ ಹರಡುತ್ತಾ..? WHO ಏನು ಹೇಳುತ್ತದೆ.
ಕರೋನಾ (Coronavirus) ಒಂದು ಸಾಂಕ್ರಾಮಿಕ ರೋಗ.  ಅದು ಗಾಳಿಯಿಂದ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ದೃಢಪಡಿಸಿದೆ. ಆದರೆ, ಅದು ನಿಂತ ನೀರು (Water) ಅಥವಾ ಹರಿಯುವ ನೀರಿನಿಂದ ಹರಡುತ್ತದೆ  ಎನ್ನುವುದಕ್ಕೆ ಯಾವುದೇ ಪ್ರಮಾಣ  ಇಲ್ಲ ಎಂದು ಹೇಳಿದೆ ವಿಶ್ವ ಆರೋಗ್ಯ ಸಂಸ್ಥೆ. 


ಇದನ್ನೂ ಓದಿ : Corona ಸಾಂಕ್ರಾಮಿಕದ ಮಧ್ಯೆ ಗುಜರಾತ್‌ನಲ್ಲಿ ಚಂಡಮಾರುತದ ಅಪಾಯ, ಭಾರಿ ವಿನಾಶದ ಬೆದರಿಕೆ


ಐಐಟಿಯ ತಜ್ಞರು ಏನು ಹೇಳುತ್ತಾರೆ...?
ಇಂಡಿಯನ್ ಇನ್ಸಿಟ್ಯೂಟ್ ಆಫ್ ಕಾನ್ಪುರದ ತಜ್ಞರಾಗಿರುವ ಸತೀಶ್ ತಾರೆ ಪ್ರಕಾರ, ಕರೋನಾ ವೈರಸ್ (COVID-19) ನೀರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡುವುದಿಲ್ಲ.  ಒಂದು ವೇಳೆ ಹರಿಯುವ ನೀರಿಗೆ ಕರೋನಾ ಪೀಡಿತ ವ್ಯಕ್ತಿಯ ಶವ ಬಿದ್ದರೂ ಕೂಡಾ ಅದರಿಂದ ವೈರಸ್ (Virus) ಹರಡುವುದಿಲ್ಲ. ಯಾಕೆಂದರೆ ಹರಿಯುವ ನೀರಿನಲ್ಲಿ ವೈರಸ್ ದುರ್ಬಲಗೊಳ್ಳುತ್ತದೆ. ಒಂದು ವೇಳೆ ಸೋಂಕಿದರೂ ಅದರ ಪರಿಣಾಮ ಅಷ್ಟೊಂದು ಇರುವುದಿಲ್ಲ  ಎನ್ನುತ್ತಾರೆ ಸತೀಶ್ ತಾರೆ.


ಗಂಗೆ, ಕಾವೇರಿಯ ನೀರು ಕುಡಿಯಲು ಬಳಸುವುದಿಲ್ಲವೇ..?
ಗಂಗೆ, ಕಾವೇರಿಯಂಥಹ (Cauvery) ನದಿ ನೀರು ದೆಹಲಿ, ಬೆಂಗಳೂರಿನಂತಹ (Bengaluru) ಮಹಾನಗರಗಳ ಜನರು ಕುಡಿಯಲು ಬಳಸುತ್ತಾರೆ. ಅಂಥಹ ನೀರಿಗೆ ಕರೋನಾ ಪೀಡಿತ ವ್ಯಕ್ತಿಯ ಶವ ಬಿದ್ದರೂ ಆ ನೀರನ್ನು ಕುಡಿದರೆ ಕರೋನಾ ಅಂಟುವುದಿಲ್ಲ. ಯಾಕೆಂದರೆ, ಮಹಾನಗರಗಳಿಗೆ ಗಂಗೆ, ಕಾವೇರಿಯಂಥಹ ನದಿಯ ನೀರು ಕುಡಿಯುವ ಉದ್ದೇಶಕ್ಕೆ ಪೂರೈಸುವ ಮೊದಲು ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತದೆ. ಆ ಸಂಸ್ಕರಣೆ ವೇಳೆ ಎಂಥಾ ವೈರಸ್ ಇದ್ದರೂ ಉಳಿಯುವುದಿಲ್ಲ ಎಂದು ಹೇಳುತ್ತಾರೆ ತಜ್ಞರು. 


ಇದನ್ನೂ ಓದಿ : ಮೇ 31 ರ ವರೆಗೆ ಮಹಾರಾಷ್ಟ್ರದಲ್ಲಿ ಲಾಕ್ ಡೌನ್ ವಿಸ್ತರಣೆ ಸಾಧ್ಯತೆ


ನದಿ ತಟದ ಜನರಿಗೆ ಸಮಸ್ಯೆ ಉಂಟಾಗುತ್ತದೆಯೇ..?
ಕರೋನಾ ಪೀಡಿತ ವ್ಯಕ್ತಿಯ ಶವ ನೀರಲ್ಲಿದ್ದಾಗ ಅಂಥಹ ನೀರನ್ನು ಸ್ಥಳೀಯರು ಸಂಸ್ಕರಿಸದೇ ನೇರವಾಗಿ ಬಳಸಿದಾಗ ಕರೋನಾ ಹರಡಬಹುದಾದ ಸಣ್ಣ ಸಾಧ್ಯತೆ ಇದೆ.  ಅಂಥ ಸನ್ನಿವೇಶದಲ್ಲಿ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತ್ತಾರೆ ತಜ್ಞರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.