ಬೆಂಗಳೂರು : ಬೆಂಗಳೂರು ಕೆನಾಲ್ ಕ್ಲಬ್‌ನ 53 ಹಾಗೂ 54ನೇ ಚಾಂಪಿಯನ್‌ಶಿಪ್‌ ಡಾಗ್‌ ಶೋ ಹಾಗೂ ಸಿಲಿಕಾನ್‌ಸಿಟಿ ಕೆನಾಲ್ ಕ್ಲಬ್‌ನ 125 ಹಾಗೂ 126ನೇ ಚಾಂಪಿಯನ್‌ಶಿಪ್‌ ಡಾಗ್‌ ಶೋ ನವೆಂಬರ್‌ 19 ಹಾಗೂ 20ರಂದು ನಡೆಯಲಿದೆ. ಈ ಡಾಗ್ ಶೋ ದೇವನಹಳ್ಳಿ ಬಳಿ ಇರುವ ಹೀರಾ ಫಾರ್ಮ್ಸ್‌ನಲ್ಲಿ ನಡೆಯಲಿದೆ ಎಂದು ಬೆಂಗಳೂರು ಕೆನಾಲ್‌ ಕ್ಲಬ್ ನ ಕಾರ್ಯದರ್ಶಿ ಸಂತೋಶ್‌ ತಿಳಿಸಿದರು. 


COMMERCIAL BREAK
SCROLL TO CONTINUE READING

ಇಂದು ನಗರದ ಪ್ರೆಸ್‌ ಕ್ಲಬ್‌ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ವಾನಗಳ ತಳಿಯ ಕುರಿತಾಗಿ ಸ್ಪರ್ಧೆ ನಡೆಯುತ್ತಿರುವುದು ಈ ಚಾಂಪಿಯನ್‌ಶಿಪ್‌ನ ವಿಶೇಷ. ಶ್ವಾನಗಳ ತಳಿ ಹಾಗೂ ಅದರ ಪರಿಶುದ್ಧತೆಯ ಆಧಾರದ ಮೇಲೆ ಜಪಾನ್‌, ನೆದರ್‌ಲ್ಯಾಂಡ್ಸ್‌ ಮುಂತಾದ ದೇಶಗಳಿಂದ ಬಂದ ತೀರ್ಪುಗಾರರು ವಿಜೇತ ಶ್ವಾನವನ್ನು ಆಯ್ಕೆಮಾಡಲಿದ್ದಾರೆ ಎಂದು ಹೇಳಿದರು. ಭಾರತೀಯ ತಳಿಯ ಜನಪ್ರಿಯ ಶ್ವಾನ ಮುಧೋಳ ಈ ಚಾಂಪಿಯನ್‌ಶಿಪ್‌ನ ಮುಖ್ಯ ಆಕರ್ಷಣೆ ಆಗಿರಲಿದೆ. ಭಾರತೀಯ ಸೇನೆ ಹಾಗೂ ಪ್ರಧಾನ ಮಂತ್ರಿಯವರ ರಕ್ಷಣಾ ತಂಡದಲ್ಲಿ ಮುಧೋಳ ತಳಿಯ ಶ್ವಾನವನ್ನು ಹೆಚ್ಚು ಬಳಸಲಾಗುತ್ತದೆ. ಈ ತಳಿಯ ಮೂಲತಃ ಅಂದ ಚಂದ, ಮೈಕಟ್ಟು, ರೂಪ ಹೇಗಿರಬೇಕು? ಯಾವ ವಯಸ್ಸಿಗೆ ಅದರ ಬೆಳವಣಿಗೆ ಎಷ್ಟಿರಬೇಕು? ಎನ್ನುವ ಕುರಿತಾಗಿಯೂ ವಿಶ್ಲೇಷಿಸಲಾಗುವುದು. ಜೊತೆಗೆ ನಮ್ಮ ದೇಶದ ತಳಿಗಳನ್ನು ಗುರುತಿಸಿ, ಅವುಗಳನ್ನು ಸಾಕಾಣಿಕೆ ಮಾಡಲು ಪ್ರೇರೇಪಿಸುವುದೂ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ ಎಂದರು. 


ಇದನ್ನೂ ಓದಿ : ಮಗು ಬಿಟ್ಟು ವಿವಾಹಿತನ ಜೊತೆ ಶಿಕ್ಷಕಿ ಎಸ್ಕೇಪ್! ಲವ್ ಜಿಹಾದ್ ಅನುಮಾನ


 ಕ್ಲಬ್‌ನ ಖಜಾಂಚಿ ಅಮೃತ್‌ ಹಿರಣ್ಯ ಮಾತನಾಡಿ, ಡಾಗ್‌ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಿದ ಶ್ವಾನಗಳ ತಳಿ ಹಾಗೂ ಯಾವ ಶ್ವಾನ ತನ್ನ ಮೂಲ ತಳಿಯೊಂದಿಗೆ ಹೆಚ್ಚು ಹೊಂದುತ್ತದೊ ಅದಕ್ಕೆ ಬಹುಮಾನ ನೀಡಲಾಗುವುದು. ಇದರಿಂದ ನೈತಿಕ ಸಂತಾನೋತ್ಪತ್ತಿ ಹಾಗೂ ದೇಶೀಯ ತಳಿಗಳಾದ ಮುಧೋಳ್‌, ರಾಜಪಾಳ್ಯಂ, ಕಣ್ಣಿ, ಕೊಂಬಾಯ್‌ ಮುಂತಾದ ತಳಿಯ ಶ್ವಾನ ಸಾಕಾಣಿಕೆಯನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಅಲ್ಲದೇ ನವೆಂಬರ್‌ 20ರಂದು ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಜೊತೆಗೆ ಮಕ್ಕಳಲ್ಲಿ ಶ್ವಾನಗಳೆಡೆಗೆ ಪ್ರೀತಿ ಬೆಳೆಸುವ ದೃಷ್ಟಿಯಿಂದ ಅವುಗಳಿಗೆ ಬಾಚುವುದು, ಅವುಗಳ ಕಿವಿ-ಉಗುರಗಳನ್ನು ಶುದ್ಧಗೊಳಿಸುವುದು, ಅವುಗಳ ಬಗ್ಗೆ ಅರಿಯುವುದು ಮುಂತಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ ಎಂದರು. 


ವಿಶೇಷವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಲವಾರು ತಳಿಯ ಶ್ವಾನಗಳ ಜೊತೆಗೆ ದೇಶೀಯ ತಳಿಯಾದ ಮುಧೋಳ ತಳಿಯ ಶ್ವಾನವನ್ನು ಕಂಡು ಸಂಭ್ರಮಿಸುವ ಅವಕಾಶ ಶ್ವಾನಪ್ರಿಯರಿಗೆ ದೊರಕಲಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಧೋಳದಿಂದ ಆಗಮಿಸಿದ್ದ ಮುಧೋಳ ತಳಿಗಳ ಬ್ರೀಡರ್‌ಗಳು ತಾವು ಸಾಕಿರುವ ಶ್ವಾನಗಳ ಜೊತೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.


ಇದನ್ನೂ ಓದಿ : ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.