ಬೆಂಗಳೂರು: ರಾಜ್ಯ ಸಚಿವ ಹೆಚ್.ಡಿ.ರೇವಣ್ಣ ಅವರ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಪ್ರಮುಖ ಕಚೇರಿ ಕೆಶಿಫ್ ಅನ್ನು ಬೆಳಗಾವಿಯಿಂದ ಹಾಸನಕ್ಕೆ ಸ್ಥಳಾಂತರಿಸುವ ಬಗ್ಗೆ ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ರಾಜಕೀಯ ಜಟಾಪಟಿ ಆರಂಭವಾಗಿದ್ದು, ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಬೆಳಗಾವಿಯಿಂದ ಹಾಸನಕ್ಕೆ ಕೆಶಿಫ್ ಕಚೇರಿ ಸ್ಥಳಾಂತರ ಮಾಡುವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೇವಲ ಕೆಶಿಫ್ ಕಚೇರಿಯಷ್ಟೇ ಅಲ್ಲ, ವಿಧಾನಸೌಧ ಕೂಡ ಹಾಸನಕ್ಕೆ ಶಿಫ್ಟ್ ಆದರೂ ಅದರಲ್ಲಿ ಅಚ್ಚರಿ ಪಡುವಂತಹದ್ದು ಏನಿಲ್ಲ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ. ಅಲ್ಲದೆ, ಕೆಶಿಪ್ ಕಚೇರಿ ಸ್ಥಳಾಂತರದ ಮೂಲಕ ಕುಮಾರಸ್ವಾಮಿ ಸರ್ಕಾರ ಮತ್ತೆ ತನ್ನ ತಾರತಮ್ಯ ನೀತಿ ಮುಂದುವರೆಸಿದೆ. ಸರ್ಕಾರ ಹಾಸನ, ಮಂಡ್ಯ, ರಾಮನಗರ ಕೇಂದ್ರಿತವಾಗುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ.