ʼನಮ್ಮ ಸರ್ಕಾರ ಬಂದ್ರೆ ಕೆಲವೊಂದು ಮೀಸಲಾತಿಯನ್ನ ತೆಗೆದು ಹಾಕುತ್ತೇವೆʼ
ಬಿಜೆಪಿಯವರು ಮೀಸಲಾತಿ ಕೊಟ್ಟಿದ್ದೇವೆ ಅಂತಿದ್ದಾರೆ, ಶೇ.50ಕ್ಕಿಂತಲೂ ಮೀಸಲಾತಿ ಹೆಚ್ಚಿಸಲು ಅವಕಾಶ ಇಲ್ಲ. ನಮ್ಮ ಸರ್ಕಾರ ಬಂದರೆ ಕೆಲವೊಂದು ಮೀಸಲಾತಿಯನ್ನ ತೆಗೆದು ಹಾಕುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಬೆಂಗಳೂರು : ಆಡಳಿತ ಬಿಜೆಪಿ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು OBC ಇಂದ EWS ಗೆ ಮರುವಿಂಗಡಣೆ ಮಾಡಿದ್ದು ಇದನ್ನ ಯಾವ ರೀತಿ ಮತ್ತೆ ಪರಿಷ್ಕರಣೆ ಮಾಡಬೇಕು ಎಂಬುದರ ಬಗ್ಗೆ ಇನ್ನು ಕಾಂಗ್ರೆಸ್‌ಗೆ ಸ್ಪಷ್ಟತೆ ಸಿಗುತ್ತಿಲ್ಲ. ಮುಸ್ಲಿಂ ಸಮುದಾಯದ ಮೀಸಲಾತಿ ತೆಗೆದು ಹಾಕಿರುವ ಬಗ್ಗೆಯೂ ಚರ್ಚಿಸಿದ್ದೇವೆ, ನಮ್ಮ ಸರ್ಕಾರ ಬಂದಮೇಲೆ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ಈಗ ಬಿಜೆಪಿಯವರು ಮೀಸಲಾತಿ ಕೊಟ್ಟಿದ್ದೇವೆ ಅಂತಿದ್ದಾರೆ, ಶೇ.50ಕ್ಕಿಂತಲೂ ಮೀಸಲಾತಿ ಹೆಚ್ಚಿಸಲು ಅವಕಾಶ ಇಲ್ಲ. ನಮ್ಮ ಸರ್ಕಾರ ಬಂದರೆ ಕೆಲವೊಂದು ಮೀಸಲಾತಿಯನ್ನ ತೆಗೆದು ಹಾಕುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೇ ಸಂದರ್ಭದಲ್ಲಿ ಯಾವ ಮೀಸಲಾತಿ ತೆಗೆದುಹಾಕುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡದೆ, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಮಾತಾನ್ನಾಡುತ್ತೇವೆ ಎಂದರು. ಇನ್ನು ಉಳಿದಂತೆ ಡಾ ಜಿ ಪರಮೇಶ್ವರ್, ಕಳೆದ ನಾಲ್ಕು ತಿಂಗಳಿನಿಂದ ಪ್ರಣಾಳಿಕೆಯ ತಯಾರಿ ನಡೆಯುತ್ತಿದೆ.
ಪಕ್ಷ ನನಗೆ ಪ್ರಣಾಳಿಕೆಯ ಜವಾಬ್ದಾರಿ ನೀಡಿದೆ, ಜನಸಮುದಾಯದ ಅಭಿಪ್ರಾಯವನ್ನ ಅರಿಯುವ ಪ್ರಯತ್ನ ಮಾಡಿದ್ದೇವೆ. ಹುಬ್ಬಳ್ಳಿ, ಧಾರವಾಡ, ಮೈಸೂರು ಸೇರಿದಂತೆ ಹಲವೆಡೆ ಜನರ ಅಭಿಪ್ರಾಯ ಆಲಿಸಿದ್ದೇವೆ.
ಇದನ್ನೂ ಓದಿ: ʼರೆಡ್ಡಿ ಪಕ್ಷʼಕ್ಕೆ ಬಿಜೆಪಿ ಅತೃಪ್ತ ನಾಯಕರ ಸಾಥ್..? : ʼಬಿಜೆಪಿʼ ಗೆಲ್ಲೋದು ಡೌಟ್
ಲಕ್ಷಾಂತರ ಜನರನ್ನ ಭೇಟಿ ಮಾಡಿ ಚರ್ಚಿಸಿದ್ದೇವೆ, ನೌಕರ ವರ್ಗದ ಪ್ರತಿನಿಧಿಗಳ ಜೊತೆಯೂ ಸಮಾಲೋಚನೆ ನಡೆಸಿದ್ದೇವೆ. ಎಫ್‌ಕೆಸಿಸಿಐ ಪ್ರತಿನಿಧಿಗಳ ಜೊತೆಯೂ ಒಂದು ದಿನ ಸುದೀರ್ಘವಾಗಿ ಚರ್ಚಿಸಿದ್ದೇವೆ. ಆಟೋರಿಕ್ಷಾ ಚಾಲಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಹಲ ವರ್ಗಗಳ ಅಭಿಪ್ರಾಯ ಸಂಗ್ರಹ ಆಗಿವೆ. ಒಳ್ಳೆಯ ಆಡಳಿತ ಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ನಾಲ್ಲು ವರ್ಷದಿಂದ ಒಳ್ಳೆಯ ಆಡಳಿತ ಸಿಕ್ಕಿಲ್ಲ, ಜನರ ನಿರೀಕ್ಷೆ ಇರೋದು ಒಳ್ಳೆಯ ಆಡಳಿತ ಎಂದರು.
ಕರಾವಳಿ ಭಾಗದಲ್ಲಿ ಸಾಮರಸ್ಯ ಇಲ್ಲ ಎಂಬ ಅಭಿಪ್ರಾಯವನ್ನ ಅಲ್ಲಿಯ ಜನರು ವ್ಯಕ್ತಪಡಿಸಿದ್ದಾರೆ. ನಮ್ಮ ಸರ್ಕಾರ ಬಂದರೆ ಏನು ಮಾಡಬಹುದು ಎಂಬುದನ್ನ ಚರ್ಚಿಸಿದ್ದೇವೆ. ಕೆಲವೊಂದು ಕ್ಷೇತ್ರಗಳನ್ನ ಆದ್ಯತೆಯ ಮೇಲೆ ಆಯ್ಕೆ ಮಾಡಿಕೊಂಡಿದ್ದೇವೆ, ಕೃಷ್ಟಿ ಕ್ಷೇತ್ರಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ರೈತರ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ.ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ,ಹಾಗಾಗಿ ಏನು ಮಾಡಬೇಕು ಎಂಬುದನ್ನ ಗಂಭೀರವಾಗಿ ಚರ್ಚಿಸಲಾಗಿದೆ ಎಂದರು.
ಇದನ್ನೂ ಓದಿ: ಸವದಿ, ಶೆಟ್ಟರ್, ಈಶ್ವರಪ್ಪ..! ಘಟಾನುಘಟಿ ನಾಯಕರ ಸಿಟ್ಟಿಗೆ ಬಲಿಯಾಗುತ್ತಾ ʼಬಿಜೆಪಿʼ..?
ಕಾಂಗ್ರೆಸ್ ಮುಖ್ಯಮಂತ್ರಿ ರೇಸ್ : ಮುಖ್ಯಮಂತ್ರಿ ಚರ್ಚೆ ಈಗ ಅಪ್ರಸ್ತುತ, ಚುನಾವಣೆ ಬಳಿಕ ಇದರ ಬಗ್ಗೆ ಸಹಜವಾಗಿ ಚರ್ಚೆ ಬರತ್ತೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಅಭ್ಯರ್ಥಿ ಎಂಬ ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದು ಅವರ ವಯಕ್ತಿಕ ಹೇಳಿಕೆ ಅಷ್ಟೇಪಾರ್ಟಿ ನಿಲುವು ಅಲ್ಲ ಎಂದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.