ಬೆಂಗಳೂರು: ದಿವಂಗತ ಡಾ. ರಾಜ್‌ಕುಮಾರ್ ಮತ್ತು ಅವರ ಪುತ್ರ, ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನದಂತಹ ನಿಸ್ವಾರ್ಥ ಕಾರ್ಯವು ಸಹಸ್ರಾರು ಕನ್ನಡಿಗರು ಮತ್ತು ಭಾರತೀಯರಿಗೆ ಸ್ಫೂರ್ತಿ ನೀಡಿದ್ದು, ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.


COMMERCIAL BREAK
SCROLL TO CONTINUE READING

ಅವರದ್ದು ಖಂಡಿತ ನಮ್ಮೆಲ್ಲರನ್ನು ಅಗಲಿ ಹೋಗುವ ವಯಸ್ಸಲ್ಲಾ. ರಕ್ಷಿತಾ, ವೇದಾ ಹಾಗೂ ವಿಜಯ್ ಈ ಜಗತ್ತಿಗೆ ಬಹಳ ಬೇಗ ವಿದಾಯ ಹೇಳಿಬಿಟ್ಟರು. ಅವರ ಸಾವಿನಲ್ಲೂ ತಮ್ಮ ಅಂಗಾಂಗಗಳನ್ನು ದಾನ ಮಾಡಿ ಬೇರೊಬ್ಬರ ಜೀವ ಉಳಿಸುವ ಮೂಲಕ ಇತರರಿಗೆ ಸಂತಸ ಹಾಗೂ ಜೀವನ ಮೌಲ್ಯಗಳನ್ನ ಉಡುಗೊರೆಯಾಗಿ ನೀಡಿದರು. ಇದು ಪ್ರೀತಿ ಮತ್ತು ತ್ಯಾಗದ ಒಂದು ಉದಾಹರಣೆ.


ಇದನ್ನೂ ಓದಿ- ಚುನಾವಣೆ ಮೂಡ್​ಗೆ ಜಾರಿದ ರಾಜಕೀಯ ಪಕ್ಷಗಳು ; 3 ಪಾರ್ಟಿಯಿಂದ ಯಾತ್ರೆ ಪಟ್ಟಿ ಸಿದ್ದ


ಈ ಅಂಗಾಂಗ ದಾನಿಗಳ ಕೆಚ್ಚೆದೆಯ ಹೃದಯವುಳ್ಳ ಕುಟುಂಬದ ಸದಸ್ಯರೊಂದಿಗೆ ಜೊತೆಯಾಗಿ ನಡೆಯುವ ಅವಕಾಶ ಇಂದು ನನ್ನದಾಗಿತ್ತು. ಅವರು ಜೀವನದಲ್ಲಿ ತ್ಯಾಗ, ಸಹಾನುಭೂತಿ ಮತ್ತು ಮಾನವೀಯತೆಯನ್ನು ನಿಜವಾದ ಅರ್ಥದಲ್ಲಿ ನಿರೂಪಿಸಿ ತೋರಿಸಿದ್ದಾರೆ.



ಮಾನವೀಯತೆ, ಸಾಮಾಜಿಕ ಕಳಕಳಿ ಮತ್ತು ಸಹಾನುಭೂತಿಯ ಜೀವನೋತ್ಸಾಹವನ್ನು ನಾವು ಉತ್ತೇಜಿಸಬೇಕು ಮತ್ತು ಪಾಲಿಸಬೇಕು. ಇಂದಿನ ದ್ವೇಷಪೂರಿತ ಮತ್ತು ದುರಾಸೆಯ ಸಮಾಜದಲ್ಲಿ ಇವು ನಾವೆಂದಿಗೂ ಮರೆಯಲಾಗದ, ಕೈಬಿಡಲಾಗದ ಜೀವನದ ಅತ್ಯಮೂಲ್ಯ ಭಾಗಗಳಾಗಿವೆ.


ಇದನ್ನೂ ಓದಿ- ಚುನಾವಣೆ ಮೂಡ್​ಗೆ ಜಾರಿದ ರಾಜಕೀಯ ಪಕ್ಷಗಳು ; 3 ಪಾರ್ಟಿಯಿಂದ ಯಾತ್ರೆ ಪಟ್ಟಿ ಸಿದ್ದ


ದಿವಂಗತ ಡಾ. ರಾಜ್‌ಕುಮಾರ್ ಮತ್ತು ಅವರ ಪುತ್ರ, ದಿವಂಗತ ಡಾ. ಪುನೀತ್ ರಾಜ್‌ಕುಮಾರ್ ಅವರ ನೇತ್ರದಾನದಂತಹ ನಿಸ್ವಾರ್ಥ ಕಾರ್ಯವು ಸಹಸ್ರಾರು ಕನ್ನಡಿಗರು ಮತ್ತು ಭಾರತೀಯರಿಗೆ ಸ್ಫೂರ್ತಿ ನೀಡಿದ್ದು, ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿವೆ.


ಕರ್ನಾಟಕದ ಈ ಸುಂದರ ನಾಡಿನಿಂದ 33 ಭಾರತ ಯಾತ್ರಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಪಣ ತೊಟ್ಟಿದ್ದಾರೆ ಎಂದು ನಿಮಗೆ ತಿಳಿಸಲು ನನಗೆ ಅಪಾರ ಹೆಮ್ಮೆಯಿದೆ ಎಂದು ರಾಹುಲ್ ಗಾಂಧಿ ಶ್ಲಾಘಿಸಿದರು.