ಗದಗ: ಇಲ್ಲಿನ ತೋಂಟದಾರ್ಯ ಮಠದ 20ನೇ ಪೀಠಾಧ್ಯಕ್ಷರಾಗಿ ಡಾ.ಸಿದ್ದರಾಮ ಸ್ವಾಮೀಜಿ ಅವರು ಸೋಮವಾರ ಪೀಠ ಅಲಂಕರಿಸಿದರು.


COMMERCIAL BREAK
SCROLL TO CONTINUE READING

ಗದಗದ ತೋಂಟದಾರ್ಯ ಮಠದ 19ನೇ ಪೀಠಾಧಿಪತಿ ಸಿದ್ದಲಿಂಗ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಡಾ. ಸಿದ್ಧರಾಮ ಸ್ವಾಮೀಜಿಯನ್ನು 20ನೇ ಪೀಠಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಇಂದು ಅವರ ಪದಗ್ರಹಣ ಸಮಾರಂಭವು ವಾದ್ಯ ಮೇಳಗಳ ವೈಭವದೊಂದಿಗೆ ನೆರವೇರಿತು. 


ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಂಗೀಂದ್ರ ನೇತೃತ್ವದಲ್ಲಿ ನಡೆದ ಪೀಠಾರೋಹಣ ಸಮಾರಂಭದಲ್ಲಿ ಗದಗಿನ ತೋಂಟದಾರ್ಯ ಮಠದ ಪೀಠಾಧ್ಯಕ್ಷರಾಗಿ ಡಾ.ಸಿದ್ದರಾಮ ಸ್ವಾಮೀಜಿ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಡಾ. ಸಿದ್ದರಾಮ ಸ್ವಾಮೀಜಿ ಅವರಿಗೆ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ಎಂದು ಮರುನಾಮಕರಣ ಮಾಡಲಾಯಿತು. 


ಶಾಸಕ ಹೆಚ್.ಕೆ. ಪಾಟೀಲ್​, ವಿಧಾನ ಪರಿಷತ್​ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಶಾಸಕ ಡಿ.ಆರ್. ಪಾಟೀಲ್​, ನಿಜಗುಣಾನಂದ ಸ್ವಾಮೀಜಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ, ಧಾರವಾಡದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಪೀಠಾರೋಹಣ ಸಮಾರಂಭ ನೆರವೇರಿತು.