ಬೆಂಗಳೂರು: ನಗರದ ಪ್ರತಿಷ್ಟಿತ ಕಾಲೇಜಿನ ಬಳಿ  ಡ್ರಗ್ಸ್ ಮಾರಾಟ (Drug) ಮಾಡುತ್ತಿದ್ದ ವ್ಯಕ್ತಿಯನ್ನು ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಅಧಿಕಾರಿಗಳು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ನೈಜೀರಿಯಾ ಮೂಲದ ವ್ಯಕ್ತಿ:


ರಾಜಾನುಕುಂಟೆ ಬಳಿಯ ಪ್ರತಿಷ್ಟಿತ ಕಾಲೇಜಿನ ಬಳಿ ಡ್ರಗ್ಸ್ (Drugs) ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ವನೂಕ್ ಅಕ್ಬೂಯ್ ಬಂಧಿತ ವಿದೇಶಿ ಪ್ರಜೆಯಾಗಿದ್ದಾನೆ.


ಇದನ್ನೂ ಓದಿ: ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್ ಕಳ್ಳರ ಬಂಧನ


ಡ್ರಗ್ಸ್ ಖರೀದಿಸುವ ನೆಪದಲ್ಲಿ ಹೋಗಿ ಅರೆಸ್ಟ್:


ಮಾದಕ ದ್ರವ್ಯ ನಿಗ್ರಹ ವಿಶೇಷ ದಳದ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಡ್ರಗ್ಸ್ ಖರೀದಿಸುವ ನೆಪದಲ್ಲಿ ಹೋಗಿ ಈತನನ್ನು ಸೆರೆ ಹಿಡಿಯಲಾಗಿದೆ. ಬಂಧಿತನಿಂದ 15 ಎಂಡಿಎಮ್ ಮಾತ್ರೆ, ಕೋಕೆನ್, ಕ್ರಿಸ್ಟಲ್ ಮಿಥ್, ಎಲ್ಎಸ್ಟಿ ಸ್ಟಾಂಪ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. 


ಮೆಡಿಕಲ್ ವೀಸಾ ಮೇಲೆ ಬಂದು ಡ್ರಗ್ಸ್ ಮಾರಾಟ:


ಮೆಡಿಕಲ್ ವೀಸಾ (Medical Visa) ಮೇಲೆ ಬೆಂಗಳೂರಿಗೆ ಬಂದಿದ್ದ ವನೂಕ್ ಅಕ್ಬೂಯ್, ಪ್ರತಿಷ್ಟಿತ ಕಾಲೇಜಿನ ಯುವಕ-ಯುವತಿಯರನ್ನ ಟಾರ್ಗೆಟ್ ಮಾಡುತ್ತಿದ್ದ. ಬಳಿಕ ಅವರನ್ನು ಸೆಳೆದು, ಡ್ರಗ್ ಮಾರಾಟ ಮಾಡ್ತಿದ್ದ.


ಡ್ರಗ್ಸ್ ಜಾಲದ ಪತ್ತೆಗೆ ಮುಂದಾದ  ತಂಡ:


ಬಂಧಿತನ ವನೂಕ್ ಅಕ್ಬೂಯ್ ಮೂಲಕ ಈ ಡ್ರಗ್ಸ್ ಜಾಲದ ಪತ್ತೆಗೆ ಪಿಎಸ್ಐ ಗಜೇಂದ್ರ ನೇತೃತ್ವದ ತಂಡ ಮುಂದಾಗಿದೆ. ಡ್ರಗ್ಸ್ ಕಿಂಗ್ ಪಿನ್ ಅನ್ನು ಹಿಡಿಯಲು ಬಲೆ ಬೀಸಲಾಗಿದೆ. 


ಇದನ್ನೂ ಓದಿ: ವಿದೇಶಿ ಕರೆನ್ಸಿ ಕಳ್ಳ ಸಾಗಾಟ: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬಂಧನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.