ಹಾವೇರಿ: ರಾಜ್ಯ ಕಾಂಗ್ರೆಸ್ ‌ಸರ್ಕಾರದಲ್ಲಿ ತುಂತುರು ಹನಿ ನೀರಾವರಿ ಪೈಪುಗಳು ಹಾಗೂ ರೈತರ ಪಂಪ್‌ಸೆಟ್’ಗೆ ಟಿಸಿ ಅಳವಡಿಸಲು ಸಚಿವರು ಹಾಗೂ ಅಧಿಕಾರಿಗಳ ಕಮಿಷನ್ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಭಾರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಲ್ಲಂಗಡಿ ಹಣ್ಣು ತಿಂದ ಬಳಿಕ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ…


ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಕನಕಾಪುರ, ಕುರುಬಗೊಂಡ, ಕಬ್ನೂರ, ಕುಳೇನೂರು, ಸಂಗೂರು, ದೇವಿಹೊಸೂರು, ಆಲದಕಟ್ಟಿ  ಗ್ರಾಮಗಳಲ್ಲಿ ‌ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲದ ಬೆಲೆಯೂ ಹೆಚ್ಚಳವಾಗಿದೆ. ನಮ್ಮ ಅವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಅಕ್ರಮ ಸಕ್ರಮಗೊಳಿಸಲು  ಟಿಸಿ ನೀಡಲು 25000 ರೂ. ನಿಗದಿ ಪಡಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎರಡೂವರೆ ಲಕ್ಷ‌ ರೂ. ಪಡೆಯುತ್ತಿದ್ದಾರೆ.  ಅದೇ ರೀತಿ ಸ್ಪ್ರಿಂಕ್ ಲೈನ್ ಪೈಪುಗಳಿಗೆ ನಮ್ಮ ಅವಧಿಯಲ್ಲಿ ಸಬ್ಸಿಡಿಯಲ್ಲಿ 1800 ರೂ ಗಳಿಗೆ ನೀಡಲಾಗುತ್ತಿತ್ರು. ಈಗ ಅದೇ ಪೈಪುಗಳಿಗೆ 4500 ರೂ. ಪಡೆಯುತ್ತಿದ್ದಾರೆ. ಇದು ಹೆಚ್ಚಾಗಲು ಸಚಿವರು ಮತ್ತು ಅಧಿಕಾರಿಗಳ ಕಮಿಷನ್ ಹೆಚ್ಚಳವಾಗಿರುವುದೇ ಕಾರಣ ಎಂದು ಆರೋಪ ಮಾಡಿದ್ದಾರೆ.


ಅದೇ ರೀತಿ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳವಾಗಿದೆ. ಮದ್ಯದ ದರವೂ ಹೆಚ್ಚಳವಾಗಿದೆ. ಈ ಸರ್ಕಾರದ ಅವಧಿಯಲ್ಲಿ ಎಲ್ಲವೂ ದುಬಾರಿಯಾಗಿದೆ ಎಂದು ಹೇಳಿದರು.


400 ಸ್ಥಾನ ಗ್ಯಾರಂಟಿ


ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 400 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ಗ್ಯಾರೆಂಟಿ. ಕಾಂಗ್ರೆಸ್ ನವರು ಮಹಿಳೆಯರಿಗೆ ಒಂದು ಲಕ್ಷ ಕೊಡುವುದಾಗಿ ಹೇಳುತ್ತಿದ್ದಾರೆ. ಅವರು ಬಹುಮತಕ್ಕೆ ಬೇಕಾದಷ್ಡು ಸ್ಥಾನದಲ್ಲಿ ಸ್ಪರ್ಧೆ ಮಾಡಿಲ್ಲ. ಅವರು ರಾಜ್ಯದ ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಹತ್ತು ವರ್ಷದಲ್ಲಿ ದುರ್ಬಲ ದೇಶವನ್ನು ಬಲಿಷ್ಠ ದೇಶವನ್ನಾಗಿ ಮಾಡಿದ್ದಾರೆ. ಅವರ ಬಗ್ಗೆ ದೇಶಾದ್ಯಂತ ಅಲೆ ಇದೆ. ಅವರು ಅಪ್ಪಟ ದೇಶ ಭಕ್ತ. ಅವರ ತಾಯಿ ತೀರಿದರೂ ಅಂತ್ಯ ಸಂಸ್ಕಾರ ಮಾಡಿ ದೇಶದ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮನಮೋಹನ ಸಿಂಗ್ ಕಾಲದಲ್ಲಿ ಭಯೋತ್ಪಾದಕರ ದಾಳಿ ಹೆಚ್ಚಿತ್ತು. ಮೋದಿಯವರು ಬಂದ ಮೇಲೆ ಅವರ ತಾಣಗಳಿಗೆ ಹೊಕ್ಕು ಹೊಡೆದು ಬಂದರು. ಭಯೋತ್ಪಾಕದರಿಗೂ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಿದರು.


ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡುವ ನಾಯಕ. ದೇಶದ ನೂರು ಕೋಟಿ ಮನೆಗಳಿಗೆ ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲರ ಮನೆಗಳಿಗೂ ನೀರು ಕೊಡುತ್ತಿದ್ದಾರೆ. ರಾಜ್ಯದಲ್ಲಿ ಮೂರು ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಜಲ ಜಿವನ್ ಮಿಷನ್ ಅಡಿ ಮನೆಗಳಿಗೆ ನಳದ ನೀರು ಒದಗಿಸಲಾಗಿದೆ.


ಇದನ್ನೂ ಓದಿ: RCB ಮಾಲೀಕ ಯಾರು ಗೊತ್ತಾ? ಇವರ ನಿವ್ವಳ ಮೌಲ್ಯ ಎಷ್ಟೆಂದು ತಿಳಿದರೆ ಶಾಕ್ ಆಗೋದು ಗ್ಯಾರಂಟಿ


ಲಾಲ್ ಬಹಾದ್ದೂರು ಶಾಸ್ತ್ರಿ ನಂತರ ಅಪ್ಪಟ ದೇಶ ಪ್ರೇಮಿ ನರೇಂದ್ರ ಮೋದಿವರು. ಅವರು ಕೊವಿಡ್ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಕೊಡಿಸಿ ಜೀವ ಉಳಿಸಿದ್ದಾರೆ. ಎಲ್ಲರಿಗೂ ಐದು ಕೆಜಿ‌ ಉಚಿತ ಅಕ್ಕಿ ನೀಡುತ್ತಿದ್ದಾರೆ. ಮನೆಗಳಿಗೆ ನಳದ ಮೂಲಕ ನೀರು ಕೊಡುತ್ತಿದ್ದಾರೆ. ನಾವು ಅವರ ಋಣ ತೀರಿಸಬೇಕಾಗಿದೆ. ಬಿಜೆಪಿಗೆ ಮತ ಹಾಕುವ ಮೂಲಕ ಮೋದಿಯವರ ಋಣ ತೀರಿಸೋಣ ಎಂದು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.