ಬೈಯಪ್ಪನಹಳ್ಳಿ `ಮೆಟ್ರೋ` ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆಯಿಂದಾಗಿ ಪ್ರಯಾಣಿಕರಿಗೆ ತೊಂದರೆ
Baiyappanahalli Metro Station : ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಾರಣದಿಂದ ಜನರು ಪರದಾಡುತ್ತಿದ್ದಾರೆ.
ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಗುತ್ತಿಗೆದಾರರು ಹಾಗೂ ಮೆಟ್ರೋ ಅಧಿಕಾರಿಗಳ ಮಧ್ಯೆದ ತಿಕ್ಕಾಟಕ್ಕೆ ಜನರು ತೊಂದರೆ ಅನುಭವಿಸುವಂತಾಗಿದೆ.
ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಇದ್ದ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಎರಡು ವಾರದಿಂದ ಬೀಗ ಹಾಕಿದ್ದಾರೆ ಮತ್ತು ಇಲ್ಲಿ ಬೈಕ್, ಕಾರುಗಳನ್ನು ನಿಲ್ಲಿಸಿ ಮೆಟ್ರೋದಲ್ಲಿ ಓಡಾಡಬೇಕಾದ ಸ್ಥಿತಿ ಇದೆ. ಇದರಿಂದ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.
ಇದನ್ನು ಓದಿ : The Rulers : ಸಂವಿಧಾನದ ಮಹತ್ವ ಸಾರುತ್ತದೆ ಈ ಸಿನಿಮಾ , "ದಿ ರೂಲರ್ಸ್" ಚಿತ್ರದ ಟ್ರೈಲರ್ ಬಿಡುಗಡೆ
ಪಾರ್ಕಿಂಗ್ ವ್ಯವಸ್ಥೆಗೆ ಎರಡು ವಾರದಿಂದ ಬೀಗ ಹಾಕಲಾಗಿರುವ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಮತ್ತು ಬೈಕ್, ಕಾರುಗಳನ್ನು ನಿಲ್ಲಿಸಿ ಮೆಟ್ರೋದಲ್ಲಿ ಓಡಾಡಬೇಕಾದ ಸ್ಥಿತಿ ಇದೆ.
ಬಿ ಕೆ.ಆರ್‌ಪುರ ಮತ್ತು ಬೈಯಪ್ಪನಹಳ್ಳಿ ಮಧ್ಯೆದ 2 ಕಿಲೋ ಮೀಟರ್ ಮಾರ್ಗವು ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ವೈಟ್‌ಫಿಲ್ಡ್‌ಗೆ ಓಡಾಡುವ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗಿದೆ. ಬಹುತೇಕ ಐಟಿ ನೌಕರರು, ಸಾರ್ವಜನಿಕರು ತಮ್ಮ ವಾಹನ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ನಿಲ್ಲಿಸಿ ಚಿಂತೆ ಇಲ್ಲದೇ ತಮ್ಮ ಕೆಲಸಗಳಿಗೆ ತೆರಳುತ್ತಿದ್ದರು.
ಇದನ್ನು ಓದಿ : ‘ವೆಂಕ್ಯಾ’ನಿಗೆ ಸಿಕ್ತು ಸಿದ್ಧಾರೂಢರ ಆಶೀರ್ವಾದ.. ಸೆಟ್ಟೇರಿತು ಪವನ್ ಒಡೆಯರ್ ನಿರ್ಮಾಣದ ಮತ್ತೊಂದು ಸಿನಿಮಾ
ಒಟ್ಟು 280ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು, ಹತ್ತಾರು ಕಾರು ಮತ್ತು ಸೈಕಲ್‌ಗಳನ್ನು ನಿಲ್ಲಿಸಿ, ಪ್ರಯಾಣಿಕರು ತೆರಳುತ್ತಿದ್ದಾರೆ. ಇದರಿಂದ ಪಾರ್ಕಿಂಗ್ ಗೇಟ್‌ಗೆ ಬೀಗ ಬದ್ದಿದೆ. 'ಯು' ಆಕಾರದ ಪಾರ್ಕಿಂಗ್ ಜಾಗದಲ್ಲಿ ಒಂದು ಕಡೆಯಿಂದ ಬಂದು ಮತ್ತೊಂದು ಕಡೆಗೆ ಸುಲಭವಾಗಿ ತೆರಳಬಹುದಿತ್ತು. ಆದರೆ ಒಂದು ದ್ವಾರದ ಕಡೆಗಿನ ಜಾಗವನ್ನು ಬಿಎಂಆರ್‌ಸಿಎಲ್ ಬಳಕೆ ಮಾಡಿಕೊಂಡಿದೆ. ಪಾರ್ಕಿಂಗ್ ಬಂದ್ ಆಗಿ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.