ನಂಜನಗೂಡು: ನಂಜನಗೂಡು ತಾಲೂಕಿನ ಉಪ್ಪಿನಹಳ್ಳಿ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ದುರ್ಗಾಂಬಾ ದೇವಿಯ ಚಿನ್ನದ ಮಂಗಳಸೂತ್ರವನ್ನು ಕದ್ದು ಎಸ್ಕೇಪ್ ಆಗಿದ್ದ ಖದೀಮರು ಕೆಲ ದಿನಗಳ ನಂತರ ತಪ್ಪು ಕಾಣಿಕೆ ಸಮೇತ ವಾಪಸ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ದೇವಿಯ ತಾಳಿ ಕದ್ದಿದ್ದ ಕಳ್ಳರಿಗೆ ಶಾಪದ ಹೆದರಿಕೆಯಾಗಿದೆ. ಹೀಗಾಗಿ 101 ರೂ. ತಪ್ಪು ಕಾಣಿಕೆ ಸಮೇತ ತಾವು ಕಳ್ಳತನ ಮಾಡಿದ್ದ ಮಂಗಳಸೂತ್ರವನ್ನು ದುರ್ಗಾಂಬಾ ದೇವಿಯ ದೇವಸ್ಥಾನದಲ್ಲಿ ವಾಪಸ್ ಇಟ್ಟು ಹೋಗಿದ್ದಾರೆ. ಇದು ದೇವಿಯ ಮಹಿಮೆ ಅಂತಾ ಗ್ರಾಮದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.   


ಇದನ್ನೂ ಓದಿ: PSI ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಹೂ’ಕುಂಡ’ಲಿ ರಹಸ್ಯ!


ಆಗಿದ್ದೇನು..?


ಕಳೆದ ವಾರ ದೇವಸ್ಥಾನದಲ್ಲಿ ಇಟ್ಟಿದ್ದ ಹುಂಡಿ ಲಟಾಯಿಸಲು ಬಂದಿದ್ದ ಖದೀಮರು ದೇವಿಯ ತಾಳಿಯನ್ನೂ ಎತ್ತಿಕೊಂಡು ಹೋಗಿದ್ದರು. ಈ ಬಗ್ಗೆ ಗ್ರಾಮದ ಮುಖಂಡರು ಪೊಲೀಸರಿಗೆ ದೂರು ನೀಡಿ ನಂತರ 4 ದಿನ ದೇವಸ್ಥಾನದ ಬಾಗಿಲು ಮುಚ್ಚಿದ್ದಾರೆ. ಭಾನುವಾರ ಎಂದಿನಂತೆ ಬಾಗಿಲು ತೆರೆಯಲು ಬಂದ ಅರ್ಚಕರಿಗೆ ಅಚ್ಚರಿ ಕಾದಿತ್ತು. ಕಳ್ಳರು ತಾವು ಕದ್ದಿದ್ದ ತಾಳಿಯನ್ನು 100 ರೂ. ನೋಟಿನಲ್ಲಿ ಕಟ್ಟಿ ದೇವಸ್ಥಾನದ ಮುಂದೆ ಇಟ್ಟು ಹೋಗಿದ್ದಾರೆ.


ದೇವಿಯ ಮಹಿಮೆಯಿಂದ ಇಂತಹ ಬೆಳವಣಿಗೆಗಳು ಆಗಾಗ ಆಗುತ್ತಿರುತ್ತವೆ ಎಂದು ದೇವಾಲಯದ ಅರ್ಚಕರು ಹೇಳಿದ್ದಾರೆ. ಇದು ದೇವಿಯ ಪವಾಡವೆಂದು ಗ್ರಾಮಸ್ಥರು ಹೇಳಿದ್ದಾರೆ. ಸದ್ಯ ನಂಜನಗೂಡು ಗ್ರಾಮಾಂತರ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.


ಇದನ್ನೂ ಓದಿ: Chaitra Kundapura : ಮುಸ್ಲಿಂ ಹಬ್ಬಗಳ ಬಾಯ್ಕಟ್‌ ಅಭಿಯಾನಕ್ಕೆ ಚೈತ್ರಾ ಕುಂದಾಪುರ ಕರೆ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.