ಹುಬ್ಬಳ್ಳಿ: ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರ 100 ರುಪಾಯಿ ನೀಡಿದರೆ ಫಲಾನುಭವಿಗಳ ಕೈ ಸೇರುವಷ್ಟರಲ್ಲಿ ಅದು 1 ರೂಪಾಯಿ ಆಗುತ್ತಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.


COMMERCIAL BREAK
SCROLL TO CONTINUE READING

ಶಿಗ್ಗಾವಿ-ಸವಣೂರು ವಿಧಾನಸಭಾ ಕ್ಷೇತ್ರದ ಕುನ್ನೂರು, ಮಡ್ಲಿ, ದುಂಡಸಿ ಮತ್ತು ಹೊಸೂರು ಗ್ರಾಮಗಳಲ್ಲಿ ಇಂದು ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದರು.


ಇದನ್ನೂ ಓದಿ-Whats App ಶೀಘ್ರದಲ್ಲೇ ಪಾಪ ಮಾಡುವವರಿಗೆ ಶಿಕ್ಷೆ ನೀಡಲಿದೆ!


ಹಿಂದಿನ ಆಡಳಿತದಲ್ಲಿ ಇದ್ದ ಪ್ರಧಾನಿಯೇ ಹೀಗೆ ಸೋರಿಕೆ ಮತ್ತು ಭ್ರಷ್ಟಾಚಾರದ ಬಗ್ಗೆ ಬೇಸರಿಸಿ ಹೇಳಿದ್ದರು. ಆದರೆ ಈಗ ನರೇಂದ್ರ ಮೋದಿ ಅವರು ನಯಾ ಪೈಸೆಯನ್ನೂ ನೇರ ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು.


ಪ್ರಧಾನಿ ಮೋದಿಯವರು ಜನ್ ಧನ್ ಖಾತೆ ಮಾಡಿಸಿ ಸರ್ಕಾರದ ಹಣ ನೇರ ಜನರ ಖಾತೆಗಳನ್ನು ತಲುಪುವಂತೆ ಮಾಡಿದ್ದಾರೆ ಎಂದ ಸಚಿವರು, ಹಾಗಾಗಿ ಈ ದೇಶಕ್ಕೆ ಪ್ರಧಾನಿ ಮೋದಿಯವರೇ ಸೂಕ್ತ ನಾಯಕ ಮತ್ತು ದೇಶದ ಒಳಿತಿಗೆ ಬಿಜೆಪಿ ಪಕ್ಷದ ಅಧಿಕಾರವೇ ಬೆಸ್ಟ್ ಎಂದು ಜೋಶಿ ಪ್ರತಿಪಾದಿಸಿದರು.


ಇದನ್ನೂ ಓದಿ-ಭಾರತದಿಂದ ಗಂಟುಮೂಟೆ ಕಟ್ಟುವ ಬೆದರಿಕೆ ಹಾಕಿದ WhatsApp, ಅಷ್ಟಾಗ್ಯೂ ಕೋರ್ಟ್ ನಲ್ಲಿ ನಡೆದಿದ್ದೇನು?


2014ರಲ್ಲಿ ಜನತೆ ನೀಡಿದ ಅಮೂಲ್ಯ ಮತಗಳಿಂದಾಗಿ ಭಾರತ ಒಂದೇ ದಶಕದಲ್ಲಿ ವಿಶ್ವ ಗುರುವಾಯಿತು. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ಷಮತೆ, ದಕ್ಷತೆ ಮತ್ತು ದೂರದೃಷ್ಟಿಯ ನಾಯಕತ್ವ ಭಾರತದಲ್ಲಿ ಅಭೂತಪೂರ್ವ ಬದಲಾವಣೆಗಳನ್ನು ತಂದಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ, ಪ್ರಮುಖರಾದ ಶ್ರೀಕಾಂತ ಡುಂಡಿಗೌಡ್ರು, ಶಿವಾನಂದ ಮ್ಯಾಗೇರಿ, ಶಶಿಧರ ಯಲಿಗಾರ, ರುದ್ರೇಗೌಡ ಶಂಕರ್ ಗೌಡ ಪಾಟೀಲ್, ಹನುಮರೆಡ್ಡಿ ನೆಡಿಯೂರಮನೆ, ಸುರೇಶಗೌಡ ಪಾಟೀಲ್, ಸಂತೋಷ್ ಹುಣಶಿಹಾಳ, ಸುನಿಲ್ ಅರೆಗೊಪ್ಪ, ಗಂಗಣ್ಣ ಲಂಗೂಟಿ, ಬಾಹುಬಲಿ ಪಸಾರ್, ಶಿವಣ್ಣ ಡೌಗಿ, ನಾಗರಾಜ ಸೂರಗುಂಡು, ಅರುಣ್ ಇಂದೂರು, ಮಲ್ಲೇಶಪ್ಪ ಹರಿಜನ್, ಎಸ್.ಆರ್.ಹದರಗುಂಚಿ, ಎನ್.ಎಸ್.ಬರ್ದುರು, ಶೇಕಪ್ಪ ಸೂರಗುಂದ, ಮಹದೇವಪ್ಪ ದೇವತಿ, ಅರ್ಜಪ್ಪ ಲಂಬಾಣಿ ಹಾಗು ಪಕ್ಷದ ಪ್ರಮುಖರು ಮುಖಂಡರು,  ಕಾರ್ಯಕರ್ತರು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.