ಬೆಂಗಳೂರು: ಇಂದು ದೇಶದೆಲ್ಲೆಡೆ ವಿರೋಧ ಪಕ್ಷದವರ ಮೇಲೆ ಇಡಿ ಆದಾಯ ತೆರಿಗೆಯ ದಾಳಿ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಎಚ್ ಎಂ.ರೇವಣ್ಣ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಈ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿದ ಅವರು "ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆನಂದ್ ಸಿಂಗ್ ಅವರು ಮಾಡಿರುವ ಕಾರ್ಯಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ ತಮ್ಮ ಆರೋಪಗಳ ಪಟ್ಟಿಯನ್ನು ಅವರು ವಿವರಿಸಿದರು.


ಬಿಜೆಪಿ ಅಧಿಕಾರಕ್ಕೆ ಬರಲು ಕೋಟ್ಯಂತರ ರೂಪಾಯಿ ಹಣ ಪಡೆದು ಪಕ್ಷಾಂತರ ಮಾಡಿ ಇಂದು ಸಚಿವರಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಮತ್ತೆ ತಮಗೆ ಜನ ದೇಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಹೊಸ ಪ್ರಯೋಗ ಮಾಡುತ್ತಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಹೊಸಪೇಟೆ ನಗರಸಭೆ, ಕಮಲಾಪುರ ಪಟ್ಟಣ, ಹೊಸಪೇಟೆ ತಾಲೂಕು ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿಯ ಒಟ್ಟು 40 ಸದಸ್ಯರುಗಳಿಗೆ ದೀಪಾವಳಿ ಉಡುಗೊರೆ ಹೆಸರಿನಲ್ಲಿ 2,65,99,000 ನಗದು, ಪುರುಷರಿಗೆ ರೇಷ್ಮೆ ಪಂಚೆ, ಮಹಿಳೆಯರಿಗೆ ರೇಷ್ಮೆ ಸೀರೆ, ಬೆಳ್ಳಿ ನಾಣ್ಯ, ಒಂದು ಕೆಜಿ ಹಾಗೂ ಅರ್ಧ ಕೆಜಿ ಬೆಳ್ಳಿ ನೀಡಲಾಗಿದೆ. 


ಇದನ್ನೂ ಓದಿ : Mallikarjun Kharge : ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ


ಹೊಸಪೇಟೆ ನಗರಸಭೆ ಸದಸ್ಯರಿಗೆ ತಲಾ 1 ಕೆಜಿ ಬೆಳ್ಳಿ, 1.44 ಲಕ್ಷ ನಗದು, ರೇಷ್ಮೆ ಪಂಚೆ ಹಾಗೂ ರೇಷ್ಮೆ ಸೀರೆ ನೀಡಲಾಗಿದ್ದು ಇದಕ್ಕಾಗಿ 79.60 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.


ಕಮಲಾಪುರ ಪಟ್ಟಣ ಪಂಚಾಯಿತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 1 ಲಕ್ಷ ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 35.65 ಲಕ್ಷ ವೆಚ್ಚ ಮಾಡಲಾಗಿದೆ. 


ಹೊಸಪೇಟೆ ತಾಲೂಕಿನ ಗ್ರಾಮ ಪಂಚಾಯತಿ ಸದಸ್ಯರಿಗೆ ತಲಾ 1/2 ಕೆಜಿ ಬೆಳ್ಳಿ, 22,000 ನಗದು, ರೇಷ್ಮೆ ಸೀರೆ, ಪಂಚೆ, ಟವಲ್ ನೀಡಲಾಗಿದೆ. ಇದಕ್ಕಾಗಿ 1.40 ಕೋಟಿ ಖರ್ಚು ಮಾಡಲಾಗಿದೆ. ಒಟ್ಟಾರೆ ಈ ಮೂರು ಪಂಚಾಯತಿಗಳ ಸದಸ್ಯರಿಗೆ 2.65 ಕೋಟಿ ವೆಚ್ಚ ಮಾಡಲಾಗಿದೆ.ಇಷ್ಟೆಲ್ಲಾ ಕೊಡುಗೆ ನೀಡುವ ಕಾರ್ಯ ನೋಡಿದರೆ ಈ ರಾಷ್ಟ್ರದಲ್ಲಿ ಕೇವಲವಿತು ವಿರೋಧ ಪಕ್ಷದವರ ಮೇಲೆ ಮಾತ್ರ ಇಡಿ ಆದಾಯ ತೆರಿಗೆ ದಾಳಿ ನಡೆಯುತ್ತದೆ ಎಂದು ಖಚಿತವಾಗುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.