ಬೆಂಗಳೂರು: ಇದು ಬಿಎಂಟಿಸಿ ಲಂಚಾವತಾರದ ಕರ್ಮಕಾಂಡದ ಕಥೆ! ಕಂಡೆಕ್ಟರ್, ಡ್ರೈವರ್‌ಗಳ ರಕ್ತ ಹೀರುತ್ತಿದ್ದ, ತಮ್ಮ ಆಪ್ತರ ಅಕೌಂಟ್ ಮೂಲಕ ಲಂಚ ಪಡೆಯುತ್ತಿದ್ದ ಎಂಟು ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಿರುವ ಭದ್ರತಾ ಮತ್ತು ಜಾಗೃತದಳದ ಮುಖ್ಯಸ್ಥರು ಆ ಎಲ್ಲಾ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಬಿಎಂಟಿಸಿಯ 94 ನೌಕರರಿಂದ ಲಂಚ ಪಡೆದು ಡ್ಯೂಟಿ ನೀಡಿರುವ ಆರೋಪದಡಿಯಲ್ಲಿ  ಮತ್ತಷ್ಟು ಭ್ರಷ್ಟ ಅಧಿಕಾರಿಗಳು ಸಸ್ಪೆಂಡ್ ಆಗುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಬಿಎಂಟಿಸಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬ ಆರೋಪ ಬಹಳ ದಿನಗಳಿಂದ ಕೇಳಿಬರುತ್ತಿತ್ತು. ಬಿಎಂಟಿಸಿಯಲ್ಲಿ ಡ್ಯೂಟಿ ಬೇಕು ಅಂದ್ರೆ ಕಂಡಕ್ಟರ್, ಡ್ರೈವರ್‌ಗಳು ವಾರಕ್ಕೆ ಐನೂರು ರೂಪಾಯಿ, ತಿಂಗಳಿಗೆ ಎರಡು ಸಾವಿರ ರೂಪಾಯಿ ಲಂಚ ಕೊಡಲೇ ಬೇಕಿತ್ತು. ತಮ್ಮ ಆಪ್ತರ ಅಕೌಂಟ್ ಮೂಲಕ ಗೂಗಲ್ ಪೇ, ಪೋನ್ ಪೇ ಮೂಲಕ ಅಧಿಕಾರಿಗಳು ಲಂಚ ಪಡೆಯುತ್ತಿದ್ದರು. ಲಂಚಕೊಡಲಿಲ್ಲ ಎಂದ್ರೆ ಡ್ಯೂಟಿ ನೀಡದೆ ನೌಕರರಿಗೆ ಕಿರುಕುಳ ನೀಡಲಾಗುತ್ತಿತ್ತು. ಇದೇ ಕಾರಣಕ್ಕೆ ಕಳೆದ ಕೆಲ ತಿಂಗಳ ಹಿಂದೆ ಕಂಡಕ್ಟರ್ ಕಂ ಚಾಲಕ ಆತ್ಮಹತ್ಯೆಗೆ ಶರಣಾಗಿದ್ದರು. ಮೌಢ್ಯಕ್ಕೆ ಸಡ್ಡು ಹೊಡೆದ ಎರಡನೇ ಸಿಎಂ ಬಸವರಾಜ ಬೊಮ್ಮಾಯಿ!!


ವಾಸ್ತವವಾಗಿ, ಲಂಚದ ಕಾರಣದಿಂದ ಕೆಲ ದಿನಗಳ ಹಿಂದೆ ಆರ್. ಆರ್. ನಗರ ಡಿಪೋದ ಕಂಡಕ್ಟರ್ ಕಂ ಚಾಲಕ ಹೊಳೆಬಸಪ್ಪ ಆತ್ಮಹತ್ಯೆಗೆ ಶರಣಾಗಿದ್ದರು.  ಡಿಪೋ ಮ್ಯಾನೇಜರ್ ಮಲ್ಲಿಕಾರ್ಜುನಯ್ಯ ಡ್ಯೂಟಿ ನೀಡಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಹೊಳೆಬಸಪ್ಪ ಅವರ ಜೇಬಲ್ಲಿದ್ದ ಡೆತ್ ನೋಟ್ ನಲ್ಲಿ ಲಂಚದ ಬಗ್ಗೆ ಬರೆದುಕೊಂಡಿದ್ದರು. ಇದರ ಆಧಾರದ ಮೇಲೆ ಬಿಎಂಟಿಸಿಯ ಎಂಡಿ ಜಿ. ಸತ್ಯವತಿ ತನಿಖೆಗೆ ಆದೇಶ ಮಾಡಿದ್ದರು. ಇದರನ್ವಯ ನಿರಂತರವಾಗಿ ತನಿಖೆ ನಡೆಸಿದ್ದ ಭದ್ರತಾ ಮತ್ತು ಜಾಗೃತದಳದ ಮುಖ್ಯಸ್ಥೆ ರಾಧಿಕಾ ಭ್ರಷ್ಟ ಅಧಿಕಾರಿಗಳ ಎಡೆಮುರಿ ಕಟ್ಟಿದ್ದಾರೆ. 


ಇದನ್ನೂ ಓದಿ- ಇನ್ಮುಂದೆ ಎಲ್ಲವೂ ಉಚಿತ: ಬಡವರ ಆರೋಗ್ಯ ಸಂಜೀವಿನಿ ‘ನಮ್ಮ ಕ್ಲಿನಿಕ್’ ಲೋಕಾರ್ಪಣೆಗೆ ಡೇಟ್ ಫಿಕ್ಸ್


ಸಸ್ಪೆಂಡ್ ಆದ ಬಿಎಂಟಿಸಿ ಅಧಿಕಾರಿಗಳು:
1- ರಮೇಶ್. ಕೆ ಡಿಪೋ- 8 ಕಾನ್ಸ್‌ಟೇಬಲ್ (ಪೋನ್ ಪೇ ಮೂಲಕ ಲಂಚ ಪಡೆದಿರುವ ಹಣ- 51.630 ಸಾವಿರ ರೂಪಾಯಿ) 


2- ಮಹಮ್ಮದ್ ರಫಿ. ಸಿಬ್ಬಂದಿ ಮೇಲ್ವಿಚಾರಕ ಡಿಪೋ- 8 ( ಗೂಗಲ್ ಪೇ - 20.600 ಸಾವಿರ ರೂಪಾಯಿ) 


3- ಕೆ.ಎಸ್ ಚಂದನ್. ಕಿರಿಯ ಸಹಾಯಕ. ಡಿಪೋ- 8 ( ಗೂಗಲ್ ಪೇ -7.28.045 ಲಕ್ಷ ರೂಪಾಯಿ)  


4- ಇಬ್ರಾಹಿಂ ಜಿಬೀವುಲ್ಲಾ. ಕಾನ್ಸ್‌ಟೇಬಲ್ ಡಿಪೋ- 8 ( ಪೋನ್ ಪೇ- 46.631 ಸಾವಿರ ರೂಪಾಯಿ) 


5- ಗೋವರ್ಧನ್ ಹೆಚ್.ಎಂ ಚಾಲಕ ಡಿಪೋ- 8 ( ಗೂಗಲ್ ಪೇ, ಪೋನ್ ಪೇ ಮೂಲಕ- 3.15 .182 ಲಕ್ಷ ರೂಪಾಯಿ) 


6- ಕೆ. ಶರವಣ. ಅಂಕಿಅಂಶ ಸಹಾಯಕ ಡಿಪೋ-8 ( ಪೋನ್ ಪೇ, ಗೂಗಲ್ ಪೇ- 64.500 ಸಾವಿರ ರೂಪಾಯಿ)


7- ಶ್ರವಣ್ ಕುಮಾರ್ ಸಾತಪತಿ.  ವಿಭಾಗೀಯ ಭದ್ರತಾ ಅಧೀಕ್ಷಕ( ಬಿಎಂಟಿಸಿಯ ಭದ್ರತಾ ಇಲಾಖೆ) ಹಣ ವಸೂಲಿಯಂತ ಭ್ರಷ್ಟಾಚಾರದಲ್ಲಿ ತೊಡಗಿರುವ ಆರೋಪ


8- ಪಂಕಜಾ.ಕೆ.ಆರ್ ಮಾರ್ಕೆಟ್. ಸಹಾಯಕ ಸಂಚಾ ಅಧೀಕ್ಷಕಿ. ಕ್ಯಾಷ್ ಮೂಲಕ ಮೂರು ಸಾವಿರ ಲಂಚ ಪಡೆದಿದ್ದ ವೇಳೆ ಸಿಕ್ಕಿಬಿದ್ದ ಮಹಿಳಾ ಅಧಿಕಾರಿ


ವರ್ಗಾವಣೆ ಆದ ಅಧಿಕಾರಿಗಳು:
ಫೋನ್ ಪೇ ಗೂಗಲ್ ಪೇ ಲಂಚ ಪ್ರಕರಣದ ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್, ಜಗದೀಶ್ ಇಬ್ಬರನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.  
ಚಂದ್ರಶೇಖರ್. ಕಲಬುರಗಿಯ ಕಲ್ಯಾಣ ಕರ್ನಾಟಕ ಸಾರಿಗೆಗೆ ಶಿಫ್ಟ್ ಆಗಿದ್ದರೆ, ಜಗದೀಶ್ ಅವರನ್ನು ರಾಮನಗರ ಕೆಎಸ್ಆರ್ಟಿಸಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.