ಬೆಂಗಳೂರು: ಮತ್ತೊಮ್ಮೆ ಬಿಡಿಎ (BDA) ಕರ್ಮಕಾಂಡ  ಬಯಲಾಗಿದೆ. ಕೇವಲ ಮೂರೇ ದಿನದಲ್ಲಿ 8 ಎಫ್ಐಆರ್ ಗಳು ದಾಖಲಾಗಿವೆ. 


COMMERCIAL BREAK
SCROLL TO CONTINUE READING

ಇಲ್ಲಿನ ಶೇಷಾದ್ರಿಪುರಂ ಠಾಣೆಯಲ್ಲಿ ನಕಲಿ ಫಲಾನುಭವಿಗಳು, ಡೆಪ್ಯುಟಿ ಸೆಕ್ರೆಟರಿ, ಸೂಪರ್ ವೈಸರ್, ಕೇಸ್ ವರ್ಕರ್ ಗಳ ಮೇಲೆ ಸಾಲು ಸಾಲು ಎಫ್ಐಆರ್ (FIR) ದಾಖಲಾಗಿವೆ. 


ಇದನ್ನೂ ಓದಿ:  University of Bangalore: ಬೆಂಗಳೂರು ವಿಶ್ವವಿದ್ಯಾಲಯದಿಂದ ಮಹಾ ಯಡವಟ್ಟು , ಮಾರ್ಕ್ ಕಂಡು ತಬ್ಬಿಬ್ಬಾದ ವಿದ್ಯಾರ್ಥಿಗಳು


ಡಿಎಸ್-3 ಅನಿಲ್ ಕುಮಾರ್, ಡಿಎಸ್-4 ಮಂಗಳ ಎಸ್.ಎಂ ಎಂಬುವವರ ವಿರುದ್ಧವೇ ಅತಿ ಹೆಚ್ಚು ಎಫ್ಐಆರ್ ದಾಖಲಾಗಿವೆ. ನಕಲಿ ಫಲಾನುಭವಿಗಳಾದ ಅಪ್ಪಯ್ಯಣ್ಣ, ಶ್ರೀನಿವಾಸ ರೆಡ್ಡಿ, ಕಮರುನ್ನೀಸಾ,ರುಕ್ಮಿಣಿ, ರಾಜೇಂದ್ರ , ಗುಲಾಬ್ ಜಾನ್, ಶಶಿಕುಮಾರ್ ಎಂಬುವರ ಮೇಲೆಯೂ ದೂರು ದಾಖಲಾಗಿವೆ.  


ಬಿಡಿಎ ಕೇಸ್ ವರ್ಕರ್ ವೆಂಕಟರಮಣಪ್ಪ, ಸಂಜಯ್ ಕುಮಾರ್, ಕಮಲಮ್ಮ, ಸೂಪರ್ ವೈಸರ್ ಕಮಲಮ್ಮ, ಮಹದೇವಮ್ಮ, ಮರಿಯಪ್ಪ ವಿರುದ್ಧ ಬಿಡಿಎ ವಿಜಿಲೆನ್ಸ್ ಅಧಿಕಾರಿಗಳಿಂದ ಸಾಲು ಸಾಲು ಎಫ್ಐಆರ್ ದಾಖಲಾಗಿವೆ. 


ಎಚ್ ಬಿ ಆರ್ ಲೇಔಟ್, ಕೆಂಗೇರಿ ಸೇರಿದಂತೆ ನಾನಾ ಭಾಗದ ಬಿಡಿಎ ಜಾಗಕ್ಕೆ ಬೋಗಸ್ ದಾಖಲೆ (Fake Documents) ಸೃಷ್ಟಿಸಿರುವ ಆರೋಪ ಕೇಳಿಬಂದಿದೆ. ಗುತ್ತಿಗೆ ಹಾಗೂ ಮಾರಾಟ ಒಪ್ಪಂದವನ್ನ ನಕಲಿ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. 


ನಂತರ ಅದೇ ನಕಲಿ ದಾಖಲೆ ಇಟ್ಟುಕೊಂಡು ಶುದ್ಧ ಕ್ರಯಪತ್ರವನ್ನು ತಯಾರಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದೀಗ ಪ್ರಕರಣ ದಾಖಲಿಸಿಕೊಂಡ ಶೇಷಾದ್ರಿಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. 


ಇದನ್ನೂ ಓದಿ:  ಪ್ರೀತಿಯ ಜೋಡಿಗೆ ಪೋಷಕರೇ ವಿಲನ್: ಬದುಕುವ ಅವಕಾಶಕ್ಕೆ ಅಂಗಲಾಚುತ್ತಿರುವ ನವಜೋಡಿ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.