ಬೆಂಗಳೂರು: ರಾಜ್ಯದ ರೈಲ್ವೇ ಪ್ರಯಾಣಿಕರಿಗೆ ಇದು ಮಹತ್ವದ ಸುದ್ದಿಯಾಗಿದೆ. ನಾಳೆಯಿಂದ ನಿಮಗೆ ಈ ರೈಲ್ವೇ ಸೇವೆ ಸಿಗುವುದಿಲ್ಲ. 8 ರೈಲುಗಳ ಸಂಚಾರ ರದ್ದಾಗಲಿದೆ. ಉತ್ತರ ಕರ್ನಾಟಕ, ತುಮಕೂರು ಭಾಗದ ರೈಲು ಪ್ರಯಾಣಿಕರಿಗೆ ಇದರಿಂದ ಅನಾನುಕೂಲತೆ ಉಂಟಾಗಲಿದೆ. 


COMMERCIAL BREAK
SCROLL TO CONTINUE READING

ನಾಳೆಯಿಂದ ಅಂದರೆ ಜೂನ್‌ 27 ರಿಂದ ಜುಲೈ 4 ರವರೆಗೆ ಎಂಟು ರೈಲುಗಳ ಸಂಚಾರ ರದ್ದು ಮಾಡಿ ಆದೇಶಿಸಲಾಗಿದೆ. ನಿಟ್ಟೂರು - ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣ ನಡುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರೈಲುಗಳನ್ನು ರದ್ದುಗೊಳಿಸಲಾಗಿದೆ. ಲೇವಲ್ ಕ್ರಾಸಿಂಗ್‌ನಲ್ಲಿ ಗರ್ಡರ್ ಅಳವಡಿಕೆ ಸಂಬಂಧಿತ ಕಾಮಗಾರಿ ನಡೆಯುತ್ತಿದೆ. ರೈಲು ಸಂಚಾರ ರದ್ದಾಗುವ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. 


ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಗುರಿ ಎಂದ ಜೈಶ್-ಎ-ಮೊಹಮ್ಮದ್ ಉಗ್ರರು, ಆಡಿಯೋ ಸೋರಿಕೆ ಬೆನ್ನಲ್ಲೇ ಬಿಗಿ ಭದ್ರತೆ


ಯಾವ ರೈಲುಗಳ ಸಂಚಾರ ರದ್ದು? 


ತುಮಕೂರು-ಚಾಮರಾಜನಗರ (07346)


ಚಾಮ ರಾಜನಗರ-ಮೈಸೂರು (07328)


ಚಾಮರಾಜ ನಗರ-ಯಶವಂತಪುರ (16239)


ಯಶವಂತಪುರ- ಚಾಮರಾಜನಗರ (16240)


 ತುಮಕೂರು-ಕೆಎಸ್ ಆರ್‌ಬೆಂಗಳೂರು(06576) 


ಕೆಎಸ್‌ಆರ್‌ಬೆಂಗಳೂರು- ತುಮಕೂರು (06575)


 ಯಶವಂತಪುರ-ಶಿವಮೊಗ್ಗ (16579),


ಶಿವಮೊಗ್ಗ-ಯಶವಂತಪುರ (16580)  


ಭಾಗಶಃ ರದ್ದಾಗಲಿರುವ ರೈಲುಗಳು : 


ತುಮಕೂರು-ಕೆಎಸ್‌ಆರ್‌ಬೆಂಗಳೂರು (06571) 


ತಾಳಗುಪ್ಪ-ಕೆಎಸ್‌ಆರ್‌ಬೆಂಗ ಳೂರು ರೈಲು (06572)


ತಾಳಗುಪ್ಪ ಕೆಎಸ್‌ಆರ್ ಬೆಂಗಳೂರು (20652)


ಕೆಎಸ್‌ಆರ್‌ಬೆಂಗಳೂರು- ಧಾರವಾಡ (ಇಂಟರ್‌ಸಿಟಿ) (12725/6)


ಈ ರೈಲುಗಳ ಮಾರ್ಗ ಬದಲಾವಣೆ : 


ವಾಸ್ಕೊಡ ಗಾಮ-ಯಶವಂತಪುರ ರೈಲು (17310), ಮೈಸೂರು- ವಾರಾಣಸಿ (22687 ಮತ್ತು ಯಶವಂತಪುರ-ಜೈಪುರ (82653)ವಿಶ್ವಮಾನವ ಮೈಸೂರು-ಬೆಳಗಾವಿ (17326)  ರೈಲುಗಳು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ.


ಮೈಸೂರು-ಉದಯಪುರ ರೈಲು (19668) ಎಸ್‌ಆರ್‌ಬೆಂಗಳೂರು ರೈಲು ಯಶವಂತಪುರ, ನೆಲಮಂಗಲ, ಹಾಸನ, ಆರಸಿಕೆರೆ, ದಾವಣಗೆರೆಗೆ ತೆರಳಲಿದೆ. 


ಇದನ್ನೂ ಓದಿ: Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ... ಪರಿಷ್ಕೃತ ಬೆಲೆ ಇಲ್ಲಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.