ಬೆಂಗಳೂರು: ಕೆಎಸ್ ಆರ್ ಟಿಸಿ ಬಸ್ ಚಾಲಕರ ಮಗನೊಬ್ಬ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸಾಕ್ಷಾತ್ ಎಂಬ ಯುವಕ 05 ಬಾರಿ ಹ್ಯಾಂಡ್‍ಬಾಲ್ ಹಾಗೂ 03 ಬಾರಿ ನೆಟ್‍ಬಾಲ್ ನ್ಯಾಷನಲ್ ಲೆವಲ್ ನಲ್ಲಿ ಭಾಗವಹಿಸಿದ್ದಾರೆ. 


COMMERCIAL BREAK
SCROLL TO CONTINUE READING

ಮುಂಬರುವ ಏಷಿಯನ್ ನೆಟ್‍ಬಾಲ್ ಚಾಂಪಿಯನ್ ಶಿಪ್‍ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಹೀಗಾಗಿ ಇವರ ಸಾಧನೆ ಮೆಚ್ಚಿ ಕೆಸ್ ಆರ್ ಟಿಸಿ ನಿಗಮದ ಕೇಂದ್ರ ಕಚೇರಿಯಲ್ಲಿ ಗೌರವಿಸಲಾಯ್ತು. ಅನ್ಬುಕುಮಾರ್ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರಿಂದ  ಸಾಕ್ಷಾತ್ ರವರಿಗೆ ಶಾಲು ಹೊದಿಸಿ, ಅಭಿನಂದನಾ ಪತ್ರ ಮತ್ತು ನೆನಪಿನ‌ ಕಾಣಿಕೆ ನೀಡಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕರು ನಿಗಮದ ಸಿಬ್ಬಂದಿಗಳ ಮಕ್ಕಳ ‌ಈ ರೀತಿಯ ಮಹತ್ತರವಾದ ಸಾಧನೆಯು ನಿಜಕ್ಕೂ ಸಂತಸ  ಮತ್ತು ಹೆಮ್ಮೆಯ ವಿಷಯ. ಕ್ರೀಡಾ ಕ್ಷೇತ್ರದಲ್ಲಿ ಇಂದಿನ ಮಕ್ಕಳು ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕಾಗಿದೆ‌. ಕ್ರೀಡೆಯು ಶಿಸ್ತು, ಸಂಯಮ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಕಲಿಸುತ್ತದೆ. ನಮ್ಮ ಚಾಲಕರ ಮಗನಾದ ಸಾಕ್ಷತ್ ರವರ ನಿರಂತರ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ  ಸಾಧನೆಯು ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತಾಗಲಿ,  ಅವರ ಆಸೆಯಂತೆ ಮುಂದಿನ ಒಲಂಪಿಕ್ ನಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ, ಪದಕ  ಪಡೆಯುವಂತಾಗಲಿ,  ಎಂದು ಆಶಿಸಿದರು.


ಇದನ್ನೂ ಓದಿ : ಫೆ.7 ಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ 108  ನಮ್ಮ ಕ್ಲಿನಿಕ್' ಗಳಿಗೆ ಚಾಲನೆ


ಸಾಕ್ಷಾತ್ ರವರು (ಪ್ರಸ್ತುತ ಕರ್ನಾಟಕ ರಾಜ್ಯದ ನೆಟ್‍ಬಾಲ್ ತಂಡದ ನಾಯಕ) ತಂದೆ  ಶಂಕರ್.ಹೆಚ್.ಟಿ. ಚಾಲಕರು, ಬಿಲ್ಲೆ ಸಂಖ್ಯೆ : 1552, ಕ.ರಾ.ರ.ಸಾ.ನಿಗಮ, ಚಿಕ್ಕಮಗಳೂರು ಘಟಕ, ತಾಯಿ: ಸೀಮಾ ಡಿ.ಬಿ ರವರ ಮಗ. ಸದರಿಯವರಿಗೆ ಗೌರವಾನ್ವಿತ ರಾಜ್ಯಪಾಲರು ಹಾಗೂ ಮಾನ್ಯ ಮುಖ್ಯಮಂತ್ರಿಗಳು  ಏಕಲವ್ಯನ ಕಂಚಿನ ಪ್ರತಿಮೆ ಹಾಗೂ ಎರಡು ಲಕ್ಷ ರೂ.ಗಳ ನಗದನ್ನು ಪ್ರದಾನ ಮಾಡಿರುತ್ತಾರೆ.


ಈ ಸಂದರ್ಭದಲ್ಲಿ ಶ್ರೀ. ಪ್ರಶಾಂತ್ ಕುಮಾರ್‌ ಮಿಶ್ರ ಭಾಆಸೇ, ನಿರ್ದೇಶಕರು (ಸಿಬ್ಬಂದಿ & ಜಾಗೃತ),ಇಲಾಖಾ ಮುಖ್ಯಸ್ಥರುಗಳು, ಚಿಕ್ಕಮಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ, ಕಾರ್ಮಿಕ ಕಲ್ಯಾಣಾಧಿಕಾರಿ, ಘಟಕ ವ್ಯವಸ್ಥಾಪಕರು ಉಪಸ್ಥಿತರಿದ್ದರು.


ಇದನ್ನೂ ಓದಿ : ಪೇಶ್ವೆ ಡಿಎನ್ ಎ ವ್ಯಕ್ತಿ ಬಗ್ಗೆ ಹೇಳಿದ್ದೇನೆಯೆ ಹೊರತು ಬ್ರಾಹ್ಮಣರನ್ನು ನಿಂದಿಸಿಲ್ಲ: ಹೆಚ್.ಡಿ.ಕುಮಾರಸ್ವಾಮಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.