ಮನೆ ತೆರವು ಗೊಳಿಸಲು ನೋಟೀಸ್ :ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿ
ಈ ದಂಪತಿ ಕಳೆದ 6 ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ವಾಸವಿತ್ತು. ಕೂಲಿ ಕೆಲಸ ಮಾಡುತ್ತಾ, ದನಗಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದರು.
ಮಂಗಳೂರು : ಸುಮಾರು 6 ವರ್ಷಗಳಿಂದ ವಾಸವಿದ್ದ ಮನೆಯನ್ನು ಕೆಡವುವುದಾಗಿ ಇಲಾಖೆ ಅಧಿಕಾರಿಗಳು ನೋಟೀಸ್ ನೀಡಿರುವ ಹಿನ್ನೆಲೆಯಲ್ಲಿ ವೃದ್ದ ದಂಪತಿ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕಡಬ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದಾರೆ. ಏಕಾಏಕಿ ಇವರು ವಾಸವಿರುವ ಮನೆ ಕೆಡವುದಾಗಿ ಮನೆ ಬಾಗಿಲಲ್ಲಿ ನೋಟೀಸ್ ಹಾಕಿರುವ ಕಾರಣ ಮನನೊಂದು ದಂಪತಿ ಈ ನಿರ್ಧಾರಕ್ಕೆ ಬಂದಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕು, ಉಪ್ಪಿನಂಗಡಿ ಹೋಬಳಿ, ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಾಧಮ್ಮ ಮತ್ತು ಮುತ್ತುಸ್ವಾಮಿ ಎಂಬವವರು ಡಯಾ ಮರಣ ಕೋರಿ ರಾಷ್ಟ್ರಪತಿಗೆ ಅರ್ಜಿಸಲ್ಲಿಸಿದ್ದಾರೆ. ಈ ದಂಪತಿ ಕಳೆದ 6 ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿ ವಾಸವಿತ್ತು. ಕೂಲಿ ಕೆಲಸ ಮಾಡುತ್ತಾ, ದನಗಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದರು.
ಇದನ್ನೂ ಓದಿ : ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳಿನ ಕಂತೆಯ ರಾಜಕೀಯ ಬಜೆಟ್ : ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಸರ್ಕಾರಿ ಜಾಗದ ಸರ್ವೇ ನಂಬರ್ 123/1 ರಲ್ಲಿ ಮನೆ ಮಾಡಿ ಈ ದಂಪತಿ ವಾಸವಿದ್ದರು. ಈ ಜಾಗದಲ್ಲಿ ಇವರಿ ವಾಸಿಸುತ್ತಿರುವ ಪುರಾವೆಯಾಗಿ ಇವರ ಬಳಿ ಮನೆ ನಂಬರ್, ರೇಷನ್,ಆಧಾರ್,ಚುನಾವಣಾ ಆಯೋಗದ ಕಾರ್ಡುಗಳು ಸೇರಿದಂತೆ ಎಲ್ಲಾ ದಾಖಲೆಗಳು ಇವೆ. ಆದರೆ ಇದೀಗ ಏಕಾಏಕಿ ಇಲಾಖೆಯ ಅಧಿಕಾರಿಗಳು ಬಂದು ಮನೆ ಬಾಗಿಲಲ್ಲಿ ನೋಟೀಸ್ ಹಾಕಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಎರಡು ದಿನದಲ್ಲಿ ಜಾಗವನ್ನು ಬಿಟ್ಟು ತೆರಳಬೇಕು ಎಂಬುದಾಗಿ ತಾಕೀತು ಮಾಡಲಾಗಿದೆಯಂತೆ. ವೃದ್ಧ ದಂಪತಿ ಮಗಳು ರೇಣುಕಾ ಹೆಸರಿನಲ್ಲಿ ನೋಟೀಸ್ ನೀಡಲಾಗಿದೆ. ನ್ಯಾಯಾಲಯದಿಂದಲೂ ಮಗಳು ರೇಣುಕಾ ಅವರಿಗೆ ನೋಟೀಸ್ ಜರಿ ಮಾಡಲಾಗಿದೆ. ಜಾಗದಲ್ಲಿ ವಾಸವಿರುವುದು ರಾಧಮ್ಮ ಮತ್ತು ಮುತ್ತುಸ್ವಾಮಿ. ಆದರೆ ನೋಟೀಸ್ ಬಂದಿರುವುದು ಪುತ್ರಿ ರೇಣುಕಾ ಹೆಸರಿನಲ್ಲಿ. ಈಗಾಗಲೇ ಈ ದಂಪತಿ ಮನೆಗೆ ಕಲ್ಪಿಸಲಾಗಿರುವ ಕುಡಿಯುವ ನೀರು, ಸೇರಿದಂತೆ ಪಂಚಾಯತ್ ಎಲ್ಲಾ ಸೌಕರ್ಯಗಳನ್ನು ಕಡಿತ ಮಾಡಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದಿರುವ ದಂಪತಿ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಅರ್ಥಶಾಸ್ತ್ರ, ಅಭಿವೃದ್ಧಿ, ದೂರದೃಷ್ಟಿ ಇಲ್ಲದ ಅಡ್ಡಕಸುಬಿ ಬಜೆಟ್: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್
ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಎಂಬವರ ದೂರಿನ ಹಿನ್ನೆಲೆಯಲ್ಲಿ ಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿದೆ. ದಂಪತಿಯ ಅಳಲನ್ನು ಸ್ವೀಕರಿಸಿರುವ ತಹಶಿಲ್ದಾರ್ ಪ್ರಭಾಕರ ಖಜೂರೆ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.