ಕರ್ನಾಟಕ ರಾಜ್ಯ ವಿದ್ಯುತ್​ಚ್ಛಕ್ತಿ ನಿಯಂತ್ರಣ ಆಯೋಗ ಲೋಕಸಭೆ ಚುನಾವಣೆ ಸಮಯದಲ್ಲಿ  ವಿದ್ಯುತ್​ ಬಳಕೆದಾರರಿಗೆ  ಪ್ರತಿ ಯುನಿಟ್​ ಗೆ ದರ ಇಳಿಕೆಯಾಗಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ : Stressbuster Snacks: ದಿನನಿತ್ಯ ಒತ್ತಡ ಹೆಚ್ಚಾಗುತ್ತಾ ಇದೆಯೇ? ಮನಸ್ಸಿಗೆ ವಿಶ್ರಾಂತಿ ಪಡೆಯಲು ಈ ಆಹಾರಗಳನ್ನು ಸೇವಿಸಿ!ದಿನನಿತ್ಯ ಒತ್ತಡ ಹೆಚ್ಚಾಗುತ್ತಾ ಇದೆಯೇ? ಮನಸ್ಸಿಗೆ ವಿಶ್ರಾಂತಿ ಪಡೆಯಲು ಈ ಆಹಾರಗಳನ್ನು ಸೇವಿಸಿ!


100 ಯುನಿಟ್​ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯುನಿಟ್​ಗೆ 1.10 ರೂ. ಕಡಿಮೆ ಮಾಡಲಾಗಿದ್ದು, ಕೆಇಆರ್ ಸಿ ವಿದ್ಯುತ್​ ದರ ಇಳಿಕೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. 


15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆಯಾಗಿದ್ದು, ಗೃಹ ಬಳಕೆಯಲ್ಲಿ 100 ಯುನಿಟ್​​ಗಿಂತ ಹೆಚ್ಚು ವಿದ್ಯುತ್​​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​ಗೆ 1.10 ರೂ. ಕಡಿಮೆ ಮಾಡಲಾಗಿದೆ.  


 ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್​ ದರ ನಿಗದಿ ಮಾಡಿದೆ ಮತ್ತು 2024-25ನೇ ಸಾಲಿಗೆ ಅನ್ವಯವಾಗುವಂತೆ ಈ ಪರಿಷ್ಕೃತ ದರ ಇಂದಿನಿಂದಲೇ(ಏಪ್ರಿಲ್​ 01) ಜಾರಿಗೆ ಬರಲಿದೆ.


ಇದನ್ನು ಓದಿ : IPL 2024: ಒಂದೇ ಪಂದ್ಯದಲ್ಲಿ ಒಂದರ ಮೇಲೊಂದರಂತೆ 5 ದಾಖಲೆ ಬರೆದ Mahendra Singh Dhoni


ರಾಜ್ಯ ಸರ್ಕಾರ 200 ಯುನಿಟ್​ ಒಳಗೆ ಬಳಸುವವರಿಗೆ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್​ ನೀಡುವುದರಿಂದ ಈ ಸೌಲಭ್ಯಕ್ಕೆ ನೋಂದಾಯಿಸಿಕೊಂಡವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ. 100 ಯುನಿಟ್​ಗಿಂತ ಕಡಿಮೆ ವಿದ್ಯುತ್​ ಬಳಕೆ ಮಾಡುವವರು ಈಗಾಗಲೆ ಪ್ರತಿ ಯುನಿಟ್​ಗೆ 4.75 ರೂ. ಪಾವತಿಸುತ್ತಿದ್ದಾರೆ. ಆದರೆ ಇದಕ್ಕೂ  ಮೊದಲು 100ಕ್ಕಿಂತ ಹೆಚ್ಚು ಯುನಿಟ್​ ವಿದ್ಯುತ್​ ಬಳಕೆ ಮಾಡುವವರಿಗೆ ಪ್ರತಿ ಯುನಿಟ್​​ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ 7 ರೂ. ಬದಲಿಗೆ ಪ್ರತಿ ಯುನಿಟ್​ಗೆ 5.90 ರೂ. ಮಾತ್ರ ಶುಲ್ಕ ವಿಧಿಸಲಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.