Arjun death audio viral : ಅರ್ಜುನ ಆನೆ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಇದೀಗ ಅರ್ಜುನನ್ನು ನೋಡಿಕೊಳ್ಳುತ್ತಿದ್ದ ಮಾವುತ ವಿನು ಅವರ ಬಾಮೈದ ರಾಜು ಮಾನವ ಹಕ್ಕುಗಳ ಹೋರಾಟಗಾರನ ಜೊತೆ ಮಾತನಾಡಿರುವ ಅಡಿಯೋ ಒಂದು ವೈರಲ್‌ ಆಗಿದ್ದು, ಅಚ್ಚರಿ ವಿಷಯಗಳನ್ನು ಬಯಲಾಗಿವೆ.


COMMERCIAL BREAK
SCROLL TO CONTINUE READING

ಹೌದು.. ಅರ್ಜುನ ಆನೆಯ ಸಾವಿನ ವಿಚಾರದ ಬಗ್ಗೆ ಮಾವುತ ವಿನು ಬಾಮೈದ ರಾಜು ಮಾತನಾಡಿರುವ ಆಡಿಯೋ ಒಂದು ವೈರಲ್ ಆಗಿದೆ. ಅರ್ಜುನನ ಸಾವಿನ ಬಗ್ಗೆ ಎಳೆಎಳೆಯಾಗಿ ರಾಜು ಸತ್ಯ ಸಂಗತಿಯನ್ನು ಬಿಚ್ಚಿಟ್ಟಿದ್ದಾನೆ. ಅರ್ಜುನನಿಗೆ ಆಹಾರ ನೀಡುತ್ತಿದ್ದ ರಾಜು, ವಿನು ಜೊತೆ ಅರ್ಜನನನ್ನು ನೋಡಿಕೊಳ್ಳುತ್ತಿದ್ದ.


ಇದನ್ನೂ ಓದಿ: ಖಾಸಗಿ ಫೋಟೋಸ್‌ ಕ್ಲಿಕ್‌, ಮಹಿಳೆ ಆತ್ಮಹತ್ಯೆ : ಪುಷ್ಪಾ ಚಿತ್ರ ನಟ ಜಗದೀಶ್‌ ಬಂಧನ..!


ಅರ್ಜುನ ಸಾವಿನ ಸುದ್ದಿ ತಿಳಿಯುತ್ತಲೆ ಮಾನವ ಹಕ್ಕುಗಳ ಹೋರಾಟಗಾರ ವಿನೋದ್ ಜೊತೆ ರಾಜು ಮಾತನಾಡಿರುವ ಆಡಿಯೋ ಸಧ್ಯ ವೈರಲ್ ಆಗಿದೆ. ಅರ್ಜುನನ ಪಾರ್ಥಿವ ಶರೀರದ ಮುಂದೆ ರಾಜು ರೋದಿಸಿದ್ದ. ಸಧ್ಯ ಇವರಿಬ್ಬರ ಮಾತುಕತೆಯಲ್ಲಿ ಆನೆಯ ಸಾವಿಗೆ ನಿಖರ ಕಾರಣ ತಿಳಿದು ಬಂದಿದೆ. ಮಾತು ಕತೆ ಈ ಕೆಳಗಿನಂತಿದೆ. 


ರಾಜು : ಹಾಸನಕ್ಕೆ ಫೋನ್ ಮಾಡಿದ್ದೆ, ನಮ್ಮ ಆನೆಗೆ ಬೋಳಿಮಕ್ಕಳು ಮಾಡಿರುವ ಕೆಲಸ ಅದು, ಈ ಬೋಳಿಮಕ್ಕಳು ಮಾಡಿರುವ ಕೆಲಸ ಅಂತೆ
ಹೋರಾಟಗಾರ : ಯಾರು
ರಾಜು: ಇವನು ಡಾಕ್ಟರ್, ಬೋಳಿಮಕ್ಳು ಸ್ಟಾಫ್‌ಗಳು ಸೇರಿ ಮಾಡಿರುವ ಕೆಲಸ ಇದು
ಹೋರಾಟಗಾರ : ಅವರೇ ಸೇರಿಕೊಂಡು ಮಾಡಿರುವ ಕೆಲಸ ಅದು
ರಾಜು : ಡಾಟ್ ಮಾಡಕೆ ಹೋಗವ್ರಲ್ಲಾ ಇವರು, ಅಷ್ಟರೊಳಗೆ ಅದು ಜಗಳಕ್ಕೆ ಬಂದು ಬಿದ್ದಿದೆ, ನಮ್ಮ ಆನೆ ಅದನ್ನು ಒಡೆದು ಓಡಿಸಿದೆ, ಇವರು ಡಾಟ್ ಮಾಡಲು ಹೋಗಿ ಅದೇ ಅರವಳಿಕೆ ಮದ್ದು ಕೊಡ್ತಾರಲ್ಲಾ, ಅದನ್ನು ಪ್ರಶಾಂತ ಆನೆಗೆ ಹೊಡ್ದಿದ್ದಾರೆ, ಪಾಪ ಅದು ಬಿದ್ದೋಗಿದೆ, ನಮ್ಮ ಆನೆ ಹೊಡೆದು ಓಡಿಸಿತು, ನಮ್ಮ ಆನೆ ವಾಪಾಸ್ ತರಬಹುದಿತ್ತು, ನಮ್ಮ ಆನೆ ಉಳಿಸಿಕೊಳ್ಳಬಹುದು ಅಂತ ತರಬಹುದಿತ್ತು, ಏನಾಯ್ತು ಪಾಪ ಇದು ಬೇರೆ ಬಿತ್ತಲ್ಲ, ಹೋಗಂಗಿಲ್ಲ ಅಂತ ನಿಲ್ಲಿಸಿಕೊಂಡಿದ್ದಾರೆ, ಮತ್ತೆ ಜಗಳಕ್ಕೆ ಬಂದು ಬಿದ್ದಾಗ, ಇವರು ಏನ್ ಮಾಡವ್ರೆ, ಕಾಡಾನೆಗೆ ಮಾಮೂಲಿ ಗನ್ ಇದಿಯಲಾ ಗುಂಡು ಹಾಕಿ ಹೊಡಿತಿವಲ್ಲಾ, ಆಗ ಕಾಡಾನೆಗೆ ಕೊಡೆಯಲು ಹೋಗಿ ನಮ್ಮ‌ ಆನೆಗೆ ಹೊಡ್ದಿದ್ದಾರೆ, ನಮ್ಮ ಆನೆ ಕುಟ್ಕಂಡು, ಕುಟ್ಕಂಡು ಹೋಗಿ ಜಗಳ ಮಾಡ್ತಿತ್ತಂತೆ ಕಣಣ್ಣಾ, ಫಸ್ಟ್ ಹೊಡೆದು ಓಡಿಸಿದೆ
ಹೋರಾಟಗಾರ : ಹೊಟ್ಟೆ ಹತ್ತಿರ ಏಟು ಆಗಿರುವುದು
ರಾಜು : ಅದು ಮಸಿ ಮಸಿ ತರ ಕಾಣುತ್ತೆ ಅದು ಏನು ಅಂತ ಗೊತ್ತಿಲ್ಲ ನನಗೆ, ಹೊಡೆದಿರುವುದೆಲ್ಲಾ ಆನೆನೆ, ಅದು ಬಿದ್ದ ಮೇಲೆ‌ ಹೊಡೆದಿರುವುದು, ನಿಂತುಕೊಂಡಿದ್ದಾಗಲೇ ನಮ್ಮ ಆನೆಗೆ ಹೊಡೆದು ಬಿಟ್ಟಿದ್ದಾರೆ ಅಣ್ಣಾ, ನಿಂತಕಂಡು ಜಗಳ ಮಾಡಲು ಆಗಿಲ್ಲ ಅದರ ಕೈಯಲ್ಲಿ
ಹೋರಾಟಗಾರ : ಎಂಥ ಕೆಲಸ ಮಾಡಿದ್ದಾರೆ ಇವರು, ಶೂಟ್ ಮಾಡಿದ್ದು ಯಾರು
ರಾಜು : ಶೂಟ್ ಮಾಡಿದ್ದು ಅಲ್ಲಿರುವ ಸ್ಟಾಫ್
ಹೋರಾಟಗಾರ : ಯಾವ ಆನೆಗೆ ಹೊಡೆದವ್ರೆ, ನಮ್ಮ ಅರ್ಜುನನಿಗೆ
ರಾಜು : ನಮ್ಮ ಆನೆಗೆ ಹೊಡೆದವ್ರೆ, ಅಲ್ಲಿರೋ ವಾಚರ್, ಗಾರ್ಡೋ ಗೊತ್ತಿಲ್ಲ, ನಮ್ಮ ಆನೆಗೆ ಹೊಡ್ದವ್ನೆ
ಹೋರಾಟಗಾರ : ಅವನಿಗೆ ಗೊತ್ತಾಗಿಲ್ವ ಏನಾದರೂ ಪ್ರಾಬ್ಲಂ ಆಗುತ್ತೆ ಅಂತ
ರಾಜು : ಗಾಬರಿಲಿ ಹೊಡೆದಿದ್ದಾನೆ ಬಿದ್ದೋಗಿದೆ ಪಾಪ, ಇವನು ಡಾಕ್ಟ್ರು ಕಾಡಾನೆಗೆ ಡಾಟ್ ಮಾಡಲು ಹೋಗಿ ಸಾಕಾನೆಗೆ ಡಾಟ್ ಮಾಡವ್ನೆ
ಹೋರಾಟಗಾರ : ಯಾರು ಅವನು ಡಾಕ್ಟರ್
ರಾಜು : ರಮೇಶ್ ಅಂತ, ಮೊನ್ನೆನು ನಾನು ಫೋನ್ ಮಾಡಿ, ಸರ್ ಅಪ್ಪನಿಗೆ ಹುಷಾರಿಲ್ಲ ನಾನು ಬರಲು ಆಗಲ್ಲ, ಅನಿಲ್‌ ತಮ್ಮನು ಮರದಿಂದ ಬಿದ್ದು ಈ ತರ ಆಗಿಬಿಟ್ಟಿದೆ, ಅನಿಲ್ ಬಂದುಬಿಟ್ಟರೆ, ವಿನು ಅಣ್ಣಾ ಒಬ್ಬನೆ ಆಗ್ತನೆ ಆನೆ ಕಳುಹಿಸಿಕೊಡಿ ಫುಲ್ ಮದ ಇದೆ ಅಂತ ಕೇಳಿಕೊಳ್ಳುತ್ತೀನಿ ಕೇಳ್ಕತಿನಿ, ಹೇ ಹಂಗೆಲ್ಲ ಕಳುಸೋಕೆ ಆಗಲ್ಲ ಅಂತ ಹಂಗೆ ಹಿಂಗೆ ಅಂತ ಇದು ಮಾಡ್ತಿದ್ದ, ರಮೇಶ್ ಡಾಕ್ಟರ್, ಅವನು ಮಂಡ್ಯದವನು
ಹೋರಾಟಗಾರ : ಅಷ್ಟು ಕೇಳ್ಕಂಡ್ರುವೆ
ರಾಜು : ಹಿಂಗ್ ಆಗೈತೆ ಅಂತ ಅಷ್ಟು ಕೇಳ್ಕಂಡ್ರುವೆ, ಅವನು ಕಳುಸಹಿಸಲಿಲ್ಲ ಆನೆನಾ
ಹೋರಾಟಗಾರ : ಬೇಕು, ಬೇಕು ಅಂತ ಮಾಡಿರುವ ಕೆಲಸನಾ ಇದು
ರಾಜು : ಇವರು ಏನು ಮಾಡವ್ರೆ ಅಂತ ಗೊತ್ತಿಲ್ಲ, ಆ ವಿನುಗೆ ಇನ್ನೂ ಆನೆ ಸತ್ತೋಗಿದೆ ಅಂತ ವಿಷಯನೇ ಗೊತ್ತಿಲ್ಲ, ಕಣ್ಣೀರಿಟ್ಟ ಮಾವುತ
ಹೋರಾಟಗಾರ : ಎಂಥ ಕೆಲಸ ಮಾಡಿದ್ರು, ಏನ್ ಮಾಡದು ಇವರಿಗೆ
ರಾಜು : ಅಣ್ಣಾ ನೀನ್ ಏನ್ ಮಾಡ್ತಿಯಾ, ಬಿಡ್ತಿಯೋ ಗೊತ್ತಿಲ್ಲ ನನಗೆ, ನನ್ನ ಕೆಲಸ ಹೋದ್ರು ಪರ್ವಾಗಿಲ್ಲ, ಅವನು ಯಾವ ಕಾರಣಕ್ಕೂ ಆನೆ ಡಾಕ್ಟರ್ ಆಗಿ ಇರಬಾರದು ಅವನು, ಅವನು ನರಕ ಅನುಭಿಸಬೇಕು ಆ ತರ ಮಾಡಿಕೊಡಣ್ಣ ನಿನ್ ಕಾಲಿಗೆ ಬೀಳ್ತಿನಿ
ಹೋರಾಟಗಾರ : ಏ ಥೂ ಥೂ ಆ ಹಂಗಲ್ಲ ಕಣೋ ನೀವು ಹೇಗೆ ಅರ್ಜುನನ ಯಾವ ತರ ನೋಡ್ಕೋತಿದ್ರು, ಎಷ್ಟು ವರ್ಷದಿಂದ ನೋಡ್ಕೊತಿದ್ರು ಆನೆ ಬಗ್ಗೆ ನಿಮಗೆ ಗೊತ್ತು
ರಾಜು: ಅಲ್ಲಾ ಅಣ್ಣ ಅದು, ಬೇರೆ ಆನೆಗೆ ಸೊಪ್ಪನ್ನು ಅದರ ಕೈಲಿ ಹೊರಿಸಿಕೊಂಡು ಬರ್ತಾರೆ, ನಾನು ನಮ್ಮನ ರಿಟೈರ್ಡ್ ದುಡ್ಡು, ಸಾಲ ಮಾಡ್ಕಂಡು ಒಂದು ಸೊಪ್ಪು ಹೊರಿಸಲಿಲ್ಲ‌ ಕಣ್ಣಣ್ಣ, ತಗೊಂಡೋಗಿ ಆನೆನಾ ಸಾಯಿಸಿಬಿಟ್ಟರು ನಮ್ಮ ಆನೆನಾ
ಹೋರಾಟಗಾರ : ಇಲ್ಲಾ ಬಿಡಪ್ಪ, ಅನುಭವಿಸುತ್ತಾರೆ, ಅನುಭವಿಸುವವರೆಗೂ ಬಿಡಲ್ಲ ನಾನು, ನಾನು ಮಾಡ್ತಿನಿ ನೋಡು, ನೀನು ಸ್ಟೇಟ್‌ಮೆಂಡ್ ಕೊಡಕೆ ಆಗಲ್ವಾ
ರಾಜು : ನಾನು ಕೊಟ್ಟರೆ ನೀವು ಇರಲಿಲ್ಲವಲ್ಲಾ ಅಂಥ ಕೇಳ್ತಾರೆ ಅಣ್ಣಾ, ನೀವು ಕೊಟ್ಟರೆ ಹೆಂಗ್ ಕೊಡಬೇಕು ಅಂದ್ರೆ ಸ್ಥಳಿಕರು ಕೊಟ್ಟರು ಅನ್ನಬೇಕು
ಹೋರಾಟಗಾರ : ಏನು ತೊಂದರೆ ಆಗಲ್ಲ, ಒಟ್ನಲ್ಲಿ ಇವರು ಬೇಕುಬೇಕು ಅಂತಲೆ ಮಾಡಿರೋದು ಇವರು
ರಾಜು : ಹೂ ಅಣ್ಣಾ, ನಮ್ಮ ಆನೆಗೆ ಮದ ಇದೆ ಬೇಡ ಅಂದರೂ ಕರೆಸಿಕೊಂಡರು
ಹೋರಾಟಗಾರ : ನೀನು ಹೇಳಿದ್ರೂ ಕರೆಸಿಕೊಂಡವ್ರೆ ಅಂದ್ರೆ ಏನುಕ್ಕೆ
ರಾಜು : ಸಾಯಿಲಿ ಅನ್ಬಿಟ್ಟು ಸುಮ್ನೆ ಆದೆ ನಾನು, ಅದೇನೋ ಹೊಗವ್ರೆ ಹೆಣ್ಣಾನೆಗಳಿಗೆ ಕಾಲರ್ ಹಾಕ್ತಾರೆ ಅಂತ ಸುಮ್ನಾಬಿಟ್ಟೆ, ಇವರು ತಿರುಗಾ, ನಾನು ವಿನು ಅಣ್ಣನಿಗೂ ಫೋನ್ ಮಾಡಿ ಹೇಳಿದ್ದೀನಿ, ಅಲ್ಲಿ ಇರೋದು ಬೇಡ ಬಂದುಬಿಡು ಅಂತ, ಹೇ ಇಲ್ಲಿ ಡಾಕ್ಟರ್ ಕಳುಹಿಸಬೇಕಲ್ಲ ಅಂದ, ನಾನು ಡಾಕ್ಟರ್‌ಗು ಫೋನ್ ಮಾಡಿದ್ದೀನಿ ನಾನು, ಸರ್ ಕಳುಹಿಸಿಕೊಡಿ ಅಂತ ಅವರು ಇಲ್ಲಪ್ಪ, ಬರಕೆ ಆಗಲ್ಲ, ಕಳ್ಸಕೆ ಆಗಲ್ಲ ಹಂಗೆ ಹಿಂದೆ ಅಂದ್ರು
ಹೋರಾಟಗಾರ : ಈಗ ನಾಳೆ ಮುಗಿಸಬೇಕೋ, ನಾಡಿದ್ದೋ ಬಿಡಲ್ಲ ಇದನ್ನು ನಾನು
ರಾಜು : ಇದುನ್ನೆಲ್ಲಾ ನ್ಯೂಸಿಗೆ ಕೊಟ್ಟು, ಅರ್ಜುನ ಸಾವಿಗೆ ಕ್ರಿಟಿಕಲ್ ಆಗಿದೆ ಕಾಡಾನೆ, ಆದರೆ ಸಮಸ್ಯೆ ಬೇರೆ ತರಾ ಇದೆ, ಡಿಪಾರ್ಟ್ಮೆಂಟ್ ಸಮಸ್ಯೆ ಬೇರೆ ತರಾ ಇದೆ, ಆದರೆ ಡಾಕ್ಟರದು ಮೈನ್ ಅಂದ್ಬಿಟ್ಟು, ಅರವಳಿಕೆ ಮದ್ದು ಕಾಡಾನೆಗೆ ಹೊಡಿಯಲು ಹೋಗಿ ಪ್ರಶಾಂತನಿಗೆ ಹೊಡೆದವ್ರೆ, ಮೈಯನ್ ಫಸ್ಟ್ ಅದೆನೇ, ಅದನ್ನು ಕಾಪಾಡಲು ಹೋಗಿ ಅರ್ಜುನ ನಿಂತುಕೊಳ್ತುತ್ತೆ ಅಲ್ಲಿ, ನಿಂತುಕೊಂಡು ಆದ್ಮೇಲೆ ಮತ್ತೆ ಆನೆ ಬಂದ ಮೇಲೆ ಫಸ್ಟ್ ಹೆಂಗ್ ಗೊತ್ತಾ ಇರು ಮೊದಲಿಂದ ಹೇಳ್ತಿನಿ, ಇವರು ಕಾಡಿಗೆ ಹೋಗವ್ರೆ ಅಣ್ಣಾ, ಕಾಡಿಗೆ ಹೋದಮೇಲೆ, ಸಡನ್ ಆಗಿ ಆ ಕಾಡಾನೆ ಬಂದು ಜಗಳಕ್ಕೆ ಬಿದ್ದಿದೆ. ಜಗಳ ಬಿದ್ದ ಮೇಲೆ ನಮ್ಮ ಆನೆ ಆ ಆನೆಯನ್ನು ಒಡೆದು ಓಡಿಸಿತು, ಈಗ ನಮ್ಮ ಆನೆ ಸಾಯಿಸ್ತಿಲ್ಲಾ ಅದುನ್ನ, ಹೊಡೆದು ಓಡಿಸಿದ ಮೇಲೆ ಈ ವಯ್ಯ ಡಾಟ್ ಮಾಡಕೆ‌ ಹೋಗಿ ಏನ್ ಮಾಡೈತೆ ಈ ಪ್ರಶಾಂತ ಅನ್ನೋ ಆನೆಗೆ ಡಾಟ್ ಮಾಡಿಬಿಟ್ಟಿದ್ದಾನೆ, ಸಾಕಿರುವ ಆನೆಗೇನೆ ಹೊಡೆದಿರುವುದು, ಪಾಪ ಅದು ಹೋಗಿ ಬಿದ್ದೋಯ್ತು, ನಮ್ಮ ಆನೆ ಅದನ್ನು ಹೊಡೆದು ಓಡಿಸಿದ ಮೇಲೆ ಬಿದ್ದೋಯ್ತು, ಇನ್ನೂ ನಮ್ಮ ಆನೆ ಕರೆದುಕೊಂಡು ಬರಂಗಿಲ್ಲ, ಬಿಡಂಗಿಲ್ಲ, ಕರೆದುಕೊಂಡು ಬಂದಿದ್ದರೆ ನಮ್ಮ ಆನೆ ಬದುಕಿಕೊಳ್ಳುವುದು ಇವತ್ತು, ಕರೆದುಕೊಂಡು ಬರಲಿಲ್ಲ ಅಂದರೆ ಬಿದ್ದಿರುವ ಆನೆಯನ್ನು ಸಾಯಿಸಿ ಬಿಡುವುದು, ಅದಕ್ಕೆ ಇವರು ಏನು ಮಾಡಿದ್ರು ಅದುನ್ನ ಅಲ್ಲಿಯೇ ನಿಲ್ಲಿಸಿಕೊಂಡರು ಆನೆನಾ, ಯಾವುದನ್ನ ಅರ್ಜುನನನ್ನ, ತಿರುಗಾ ಅದು ಓಡಿ ಬರುವುದು ನೋಡಿ, ತಿರುಗ ಇದು ಹೋಗೈತೆ ಅಲ್ಲಿಗೆ ಅರ್ಜುನ, ಆಗ ಏನ್ ಮಾಡವ್ರೆ ಇವ್ರು ಕಾಡಾನೆಗೆ ಹೊಡೆಯಲು ಹೋಗಿ ನಮ್ಮ ಆನೆ ಕಾಲಿಗೆ ಹೊಡ್ದವ್ರೆ
ಹೋರಾಟಗಾರ : ಏನಪ್ಪಾ ಗೊತ್ತಗಲ್ವಾ ಅವರಿಗೆ, ನಮ್ಮ ಆನೆ ಅಂತ ಅವರಿಗೆ 
ರಾಜು : ಪ್ರಶಾಂತ ಆನೆಗೆ ಹೊಡೆದಿರುವುದು ಅರವಳಿಕೆ ಮದ್ದು, ನಮ್ಮ ಆನೆಗೆ ಹೊಡೆದಿರುವುದು ಮಾಮೂಲಿ ಗುಂಡು, ಅದು ಕಾಲಿಗೆ ಬಿದ್ದಿದೆ, ಕುಟ್ಕಂಡು, ಕುಟ್ಕಂಡು ಆನೆ ನಡೆಯಕೆ ಆಗಿಲ್ಲ, ಹೊಡೆದಾಡಲು ಆಗಿಲ್ಲ, ಸರಿ ಆಯ್ತು ಮಿಸ್ಸಾಗಿ ನಮ್ಮ ಆನೆಗೆ ಗುಂಡು ಹೊಡೆದ್ರು, ಸಾಕಿರುವ ಆನೆಗೆ ಅರವಳಿಕೆ ಹೆಂಗೆ ಹೊಡೆದರು ಇವರು, ಈಗ ಅದನ್ಜು ಕಾಪಾಡಕೆ ತಾನೇ ನಮ್ಮ ಆನೆ ನಿಂತ್ಕಡಿರುವುದು ಅಲ್ಲಿ, ಈಗ ನಮ್ಮ ಆನೆ ಬಂದಿದ್ದರೆ ಪ್ರಶಾಂತ ಸಾವು, ಅದರ ಮೇಲೆ ಇದ್ದ ಇಬ್ಬರು ಸಾವು, ಎಲ್ಲಾ ಆಯ್ತಿತ್ತಾ, ಪಾಪ ನಮ್ಮ ಆನೆ ಎಲ್ಲರ ಪ್ರಾಣ ಉಳಿಸಿ ಅದು ಸತ್ತುಹೋಯಿತು
ಹೋರಾಟಗಾರ : ಅರ್ಜುನ ಅಂದರೆ ಒಂದು ತರ ಸಾರಥಿ ಕಣಯ್ಯ, ಆ ಅರ್ಜುನನನ್ನೇ ಸಾಯಿಸಿದ್ದಾರೆ ಎಂದರೆ ಇವರು ಬದುಕಿರುತ್ತಾರೇನಪ್ಪ ಇವರು, ಜನಗಳು, ಪಬ್ಲಿಕ್‌ಗೆ ಗೊತ್ತಾಗಿಬಿಟ್ಟರೆ ಮಾತ್ರ, ಪಬ್ಲಿಕ್ ಗೊತ್ತಾಗಿ ನ್ಯೂಸ್ ಆಗ್ಬಿಟ್ಟರೆ ಪತ್ರಕರ್ತರೇ ಸಾಕಯ ಇವರನ್ನೆಲ್ಲಾ ಹೆಂಗ್ ರುಬ್ಬಬೇಕು ಅಂತ
ರಾಜು : ಈಗ ಏನ್ ಮಾಡೋದು ನನಗೂ ತಲೆ ಓಡುತ್ತಿಲ್ಲ ಕಣಣ್ಣಾ, ಈ ಕಡೆ ವಿನು ಅಣ್ಣನು ಹುಟ್ ಲೋಫರ್ ಕಣ್ಣಣ್ಣಾ ಅವನುವೇ, ಕಾಲು ಕಟ್ಟಿದ್ದೀನಿ ನೀನು ಹೋಗ್ಬೇಡ ಅಂತ, ಮದ ಇರುವು ತಗಂಡು ಹೋಗ್ಬೇಡ, ಈಗ ಏನ್ಮಾಡ್ತಾರೆ ಗೊತ್ತಾ ಅವರು ವಿನು ಮೇಲೆ ಎಲ್ಲಾ ಟರ್ನ್ ಮಾಡ್ತಾರೆ ಇವಾಗ, ಮದ ಇದ್ದಾಗ ನೀನು ಯಾಕೆ ತಗೊಂಡು ಬಂದೆ, ನೀನ್ಯಾಕೆ ಬಂದೆ ಅಂತ ಎಲ್ಲಾ ಅವರ ಮೇಲೆ‌ ಹಾಕ್ತಾರೆ
ಹೋರಾಟಗಾರ : ಓಕೆ ಕಳುಹಿಸಿದ್ರು ಏನಕ್ಕೆ ಕಳುಹಿಸಿದ್ರು, ಯಾರು ತಗೊಂಡು ಬಾ ಅಂತ ಹೇಳಿದ್ದು
ರಾಜು : ಡಾಕ್ಟರ್ ತಗೊಂಡು ಬಾ ಅಂತ ಹೇಳರೋದು
ಹೋರಾಟಗಾರ : ಅವನ ಡ್ಯೂಟಿ ಮಾಡಬೇಕು ತಾನೇ, ಇದಕ್ಕೆ ಯಾರು ಕಾರಣ
ರಾಜು : ಡಾಕ್ಟರ್ರೇ ಕಾರಣ ಕಣಣ್ಣಾ
ಹೋರಾಟಗಾರ : ಇದಕ್ಕೆ ಕಾರಣ ಡಾಕ್ಟರ್
ರಾಜು: *ಅವತ್ತು ಕಣ್ಣೀರು ಹಾಕಂಡು ಕೇಳ್ಕಂಡೆ ಕಣಣ್ಣಾ ಅವನು ಕಳುಹಿಸಿ ಕೊಡಲಿಲ್ಲ, ಡಾಕ್ಟರ್‌ಗೆ ಫೋನ್ ಮಾಡಿದ್ದೇ ಅವತ್ತು
ಹೋರಾಟಗಾರ : ರಮೇಶ್ ಡಾಕ್ಟರ್ ಅವನು ಮಂಡ್ಯದವನಾ
ರಾಜು: ಹೂ ಮಂಡ್ಯದವನು 
ಹೋರಾಟಗಾರ : ಮಂಡ್ಯದವರಾ ಅವರು, ಇಲ್ಲಿಗೆ ಮೈಸೂರಿಗೆ ಬರ್ತಾ ಇರ್ತಾರಾ ಅವರು, ಆನೆ ನೋಡ್ತಾ ಇರ್ತಾರಾ
ರಾಜು : ಹುಣಸೂರು ಡಿವಿಜನ್ನೆ ಅವನದ್ದು, ನಮ್ಮ ಹುಣಸೂರು ಡಿವಿಜನ್‌ನಲ್ಲೆ ಕೆಲಸ ಮಾಡೋದು
ಹೋರಾಟಗಾರ : ಇದಕ್ಕೆ ಮುಖ್ಯ ಪಾತ್ರ ಯಾರ‌್ಯಾರು ಇದ್ದಾರಾಪ್ಪ ಅವರು
ರಾಜು : ಇದಕ್ಕೆ ಮುಖ್ಯ ಪಾತ್ರ ಅವನೇ ರಮೇಶನೇ
ಹೋರಾಟಗಾರ : ಈಗ ಅರ್ಜುನ ಸಾಯಕೆ ಇವನೇ ಕಾರಣನಾ
ರಾಜು  : ಅವನೇ, ಇವನೇ ಕಾರಣ, ಮತ್ತೆ ಇದನ್ನು ಕ್ಲಿಯರ್ ಕಟ್ ಆಗಿ ಹೇಳಬೇಕು ನೀನು, ಹೇಳಿಕೊಟ್ಬಲ್ಲಾ ಅದುನ್ನ
ಹೋರಾಟಗಾರ : ಹೇಳ್ತಿನಿ ಬಿಡಪ್ಪಾ ನಾನು
ರಾಜು : ನಿನಗೆ ಹೆಂಗ್ ವಿಷಯ ಸಿಕ್ತು ಅಂದರೆ ಸ್ಥಳೀಯರು ಕೊಟ್ಟರು ಅಂತ ಹೇಳಬೇಕು ನೀನು
ಹೋರಾಟಗಾರ : ನಿನಗೆ ಯಾಕೆ ಅದು, ನಾನು ಪ್ರಾಣಿಪ್ರಿಯ
ರಾಜು : ಆಮೇಲೆ ಇನ್ನೊಂದು ಅಣ್ಣಾ, ಮತ್ತಿಗೋಡಿನಲ್ಲಿ ಸರಿಯಪ್ಪ ಅಂತ ಅವ್ನೆ, ಮೊದಲೆ ನಿಂಗೆ ಮುಂಚೆನೇ ಒಂದು ಸಾರಿ ಹೇಳಿದ್ದೆ ನಿನಗೆ
ಹೋರಾಟಗಾರ : ಹೌದು ಕಣಪ್ಪ ಹೇಳಿದ್ದೆ ಶರೀಫ್ ಅಂತ ಅವ್ನೆ
ರಾಜು : ಮೊದಲು ಅವನಿಗೆ ಏನಾದರೂ ಮಾಡಣ್ಣ, ಅವನು ಸರಿಯಲ್ಲ ಬೋಳಿಮಗ, ಈಗ ಆನೆ ತೀರಿ ಹೊಯ್ತಲ್ಲ ಅಲ್ಲಿಗೆ ಹೋಗಬೇಕು ನಾನೀಗ, ಟ್ರಾನ್ಸ್‌ಫರ್ ಇನ್ನೂ ಆಗಿಲ್ಲ, ಬರೀ ಡೆಪ್ಟೇಶನ್ ತಾನೇ
ಹೋರಾಟಗಾರ : ಟ್ರಾನ್ಸ್‌ಫರ್ ಇನ್ನೂ ಆಗಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.