ಗೂಡ್ಸ್ ವಾಹನದ ಮೇಲೆ ಆನೆ ದಾಳಿ: ತರಕಾರಿ ಗುಳುಂ, ವಾಹನವೂ ಜಖಂ
ತರಕಾರಿ ತುಂಬಿದ್ದ ವಾಹನ ನೋಡುತ್ತಿದ್ದಂತೆಯೇ ಆನೆ ಏಕಾಏಕಿ ವಾಹನದಲ್ಲಿದ್ದ ತರಕಾರಿಯನ್ನು ಗುಳುಂ ಮಾಡಿದೆ.
ಚಾಮರಾಜನಗರ: ತಮಿಳುನಾಡಿನಿಂದ ಕರ್ನಾಟಕಕ್ಕೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನದ ಮೇಲೆ ತನ್ನ ಮರಿಗಳೊಂದಿಗೆ ಆನೆ ದಾಳಿ ನಡೆಸಿದೆ. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಾದ ಚಾಮರಾಜನಗರ ಗಡಿಭಾಗ ಅಸನೂರು ಸಮೀಪ ಘಟನೆ ನಡೆದಿದೆ.
ಕಬ್ಬಿನ ಲಾರಿಗಾಗಿ ಕಾದು ನಿಂತಿದ್ದ ಆನೆಗೆ ತರಕಾರಿ ತುಂಬಿಕೊಂಡು ಬರುತ್ತಿದ್ದ ಗೂಡ್ಸ್ ವಾಹನ ಎದುರಾಗಿದೆ. ತರಕಾರಿ ತುಂಬಿದ್ದ ವಾಹನ ನೋಡುತ್ತಿದ್ದಂತೆಯೇ ಆನೆ ಏಕಾಏಕಿ ಆನೆಗಳು ವಾಹನದ ಮೇಲೆರಗಿದೆ. ಕ್ಷಣ ಮಾತ್ರದಲ್ಲಿ ವಾಹನದಲ್ಲಿದ್ದ ತರಕಾರಿಯನ್ನು ಗುಳುಂ ಮಾಡಿದೆ. ಇನ್ನು, ಆನೆಯ ದಾದಾಗಿರಿಗೆ ವಾಹನದ ಗಾಜು ಒಡೆದು ಹೋಗಿದ್ದು, ಮುಂಭಾಗ ಜಖಂ ಆಗಿದೆ.
ಇದನ್ನೂ ಓದಿ : ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ಹಿನ್ನೆಲೆ, ಎಲ್ಲೆಲ್ಲೂ ಖಾಕಿ ಕಣ್ಗಾವಲು , ಈ ರಸ್ತೆಗಳಲ್ಲಿ ಸಚಾರ ನಿಷೇಧ
ಇನ್ನು, ಆನೆ ರಂಪಾಟದ ವಿಡಿಯೋವನ್ನು ಬೇರೆ ವಾಹನ ಚಾಲಕರು ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಕಬ್ಬಿನ ಲಾರಿಗಳಿಗೆ ಮಾತ್ರ ಕಣ್ಣಿಡುತ್ತಿದ್ದ ಈ ಆನೆ ಈಗ ಗೂಡ್ಸ್ ವಾಹನದ ಮೇಲೂ ಎರಗಿರುವುದು ಚಾಲಕರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ : ನಂದಿಬೆಟ್ಟಕ್ಕೆ ಟ್ರಿಪ್: ಜಾಲಿ ರೈಡ್ ನೆಪದಲ್ಲಿ ಪ್ರಾಣವನ್ನೇ ಬಲಿ ಕೊಟ್ಟ ಯುವಕ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.