ಚಾಮರಾಜನಗರ: ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕನ್ನಡ ಮಾಯವಾಗಿದೆ ಎಂದು ಸಫಾರಿಗರೊಬ್ಬರು ದೂರಿದ ಹಿನ್ನೆಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅರಣ್ಯ ಇಲಾಖೆಗೆ ಪತ್ರ ಬರೆದು ಕನ್ನಡ ಬಳಸುವಂತೆ ಸೂಚಿಸಿದೆ.


COMMERCIAL BREAK
SCROLL TO CONTINUE READING

ಬಂಡೀಪುರ ಸಫಾರಿ ವಾಹನ ನಿಲುಗಡೆ, ಹಲವು ಫಲಕಗಳಲ್ಲಿ ಕನ್ನಡವನ್ನು ಬಳಸುತ್ತಿಲ್ಲ, ಕನ್ನಡ ಬಳಸಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಇ-ಮೇಲ್ ಕಳುಹಿಸಿ ಹಾಗೂ ಎಕ್ಸ್ ನಲ್ಲಿ ಟ್ಯಾಗ್ ಮಾಡಿದ್ದರು.


ಇದನ್ನೂ ಓದಿ- ಡಿವಿಎಸ್‌ ಅವರನ್ನು ಕರೆದು ಅವಮಾನಿಸಿದ್ರಾ ದೆಹಲಿ ಹೈಕಮಾಂಡ್ ನಾಯಕರು?


ಅರವಿಂದಶರ್ಮಾ ಅವರ ದೂರಿಗೆ ಸ್ಪಂದಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈಗ  ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಕನ್ನಡ ಬಳಸುವಂತೆ ತಿಳಿಸಿದೆ.


ಇದನ್ನೂ ಓದಿ- ಹುಲಿ ಉಗುರಿನ ಪ್ರಕರಣ: ರಾಜ್ಯ ಸರ್ಕಾರದ ಮಧ್ಯಪ್ರವೇಶಕ್ಕೆ ಮಾಜಿ ಮಂತ್ರಿ ಆಗ್ರಹ


1963 ರಾಜಭಾಷಾ ಅಧಿನಿಯಮದನ್ವಯ ರಾಜ್ಯದಲ್ ಎಲ್ಲಾ ಇಲಾಖೆಗಳು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು. ಅಂತೆಯೇ, ಕರ್ನಾಟಕದ ಎಲ್ಲಾ ಇಲಾಖೆಗಳು ಆಡಳಿತವಾಗಿ, ವ್ಯವಹಾರಿಕವಾಗಿ ಕನ್ನಡ ಬಳಸಬೇಕು. 


ಈ ಕುರಿತಂತೆ ಅನೇಕ ಸರ್ಕಾರಿ ಆದೇಶಗಳು ಹಾಗೂ ಸುತ್ತೋಲೆಗಳಿದ್ದರೂ ಆಂಗ್ಲ ಭಾಷೆಯನ್ನು ಬಳಸಿರುವುದು ಮತ್ತು ಕನ್ನಡದಲ್ಲಿ ವಯ್ವಹಾರಿಸಲು ಎಲ್ಲಾ ಸೌಲಭ್ಯಗಳಿದ್ದರೂ ಸಹ ಕನ್ನಡೇತರ ಧೋರಣೆಯನ್ನು ಪ್ರದರ್ಶಿಸಿರುವುದು ವಿಷಾದನೀಯ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಆಡಳಿತದಲ್ಲಿ ಸಂಪೂರ್ಣ ಕನ್ನಡ ಭಾಷಾ ಬಳಕೆಗೆ ಪ್ರಾಧಾನ್ಯತೆ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಮ್ಮನ್ನು ಕೋರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.