ಹಾವೇರಿ ಅಖಾಡದಲ್ಲಿ ಈಶ್ವರಪ್ಪ ಲೋಕಸಭೆ ತಾಲೀಮು.. ಬಿಜೆಪಿ ಹಿರಿಯರಿಗೆ ಶುರುವಾಯ್ತು ಟಿಕೆಟ್ ಟೆನ್ಶನ್
Haveri Lok Sabha Constituency : ಹಾವೇರಿ ಲೋಕಸಭೆ ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರ ಕಣ್ಣುಬಿದ್ದಿದೆ. ಈ ಹಿನ್ನಲೆ ಹಾವೇರಿ ಲೋಕ ಕ್ಷೇತ್ರದಲ್ಲಿ ಕೆಲ ನಾಯಕರ ತಾಲೀಮು ಶುರುವಾಗಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುಟುಂಬ ಸಮೇತ ಏಲಕ್ಕಿ ನಾಡಿಗೆ ಆಗಮಿಸಿ `ಲೋಕಸಭೆ ಸಮರದ ಮುನ್ಸೂಚನೆ ನೀಡಿದರು. ಈ ಕುರಿತು ಒಂದು ವರದಿ ಇಲ್ಲಿದೆ..
Lok Sabha Elections : 2024ರ ಲೋಕಸಭೆ ಚುನಾವಣೆ ಸಮೀಪಿಸುತಿದಂತೆ, 'ಕಾಂಗ್ರೆಸ್ - ದಳ - ಕೇಸರಿ' ನಾಯಕರ ನಡುವೆ ಲೋಕಸಭೆ ತಂತ್ರ ಶುರುವಾಗಿದೆ. ಮುಂಬರುವ ಲೋಕಸಭೆ ಚುನಾವಣೆ ಟಿಕೆಟ್ ಪಡೆಯುವ ಉತ್ಸಾಹದಲ್ಲಿ ಕೆಲ ನಾಯಕರು ಇದ್ದಾರೆ. ಈ ಹಿನ್ನಲೆ ಹಾವೇರಿ ಲೋಕಸಭೆ ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರು ಕಣ್ಣಿಟ್ಟಿದ್ದಾರೆ.
ಹೌದು, ಸತತ 3 ಬಾರಿ ವಿಜಯದ ಪತಾಕಿ ಹಾರಿಸಿದ ಶಿವಕುಮಾರ್ ಉದಾಸಿ ಸ್ಪರ್ಧೆಯಿಂದೆ ಹಿಂದೆ ಸರಿಯುತ್ತೆನೆ ಅಂತಾ ಹೇಳ್ತಾ ಬಂದಿದ್ದಾರೆ. ಈ ಕಾರಣ ಹಾವೇರಿ ಲೋಕಸಭೆ ಕ್ಷೇತ್ರದ ಮೇಲೆ ಬಿಜೆಪಿಯ ಘಟಾನುಘಟಿ ನಾಯಕ ದೃಷ್ಟಿ ಬಿದಿದೆ. ಒಂದೆಡೆಗೆ ವಿಧಾನಸಭೆ ಪರಾಜಿತರಾ ಮಾಜಿ ಸಚಿವ ಬಿಸಿ ಪಾಟೀಲ ಹಾವೇರಿ ಲೋಕ ಟಿಕೆಟ್ ಪೈಟ್ ಮಾಡ್ತಿದ್ರೆ. ಇನ್ನೊಂದೆಡೆ ಮಗನ ರಾಜಕೀಯ ಭವಿಷ್ಯ ನಿರ್ಮಿಸಲು ಮಾಜಿ ಸಚಿವ ಈಶ್ವರಪ್ಪ ಸಿದ್ದತೆ ನಡೆಸಿದ್ದಾರೆ.
ಹೌದು, ಈಶ್ವರಪ್ಪರವರಿಗೆ ವಿಧಾನಸಭೆ ಟಿಕೆಟ್ ಮಿಸ್ ಆದ ಬಳಿಕ ಪಕ್ಷದಲ್ಲಿನ ನಾಯಕ ನಿರ್ಧಾರಕ್ಕೆ ಸುಮ್ಮನಾಗಿದರು. ಈ ವೇಳೆ ಸ್ವತಃ ಪ್ರಧಾನಿ ಮೋದಿ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಪಕ್ಷ ನಿರ್ಧಾರ ಸ್ವೀಕರಿಸಿದ ಹಿನ್ನಲೆ ಅಭಿನಂದನೆ ಸಲ್ಲಿಸಿದ್ದರು. ಅಂದು 'ನಮೋ' ಲೋಕ ಕ್ಷೇತ್ರದ ಸ್ಪರ್ಧೆಗೆ ಏನಾದ್ರು ಈಶ್ವರಪ್ಪ ಅವರಿಗೆ ಭರವಸೆ ನೀಡಿದ್ರಾ ಅನ್ನೋ ಮಾತು ಕೇಳಿ ಬಂದಿತ್ತು.
ಈ ಬೆನ್ನಲ್ಲೇ ಹಾವೇರಿ ಎಂಪಿ ಕ್ಷೇತ್ರದಲ್ಲಿ ಈಶ್ವರಪ್ಪ ಅವರು ಚಟುವಟಿಕೆ ಚುರುಕೂಗೊಂಡಿದೆ. ಈ ಹಿನ್ನಲೆ ಹಾವೇರಿ ಸಿಂದಗಿ ಮಠದಲ್ಲಿ ಇಂದು ಈಶ್ವರಪ್ಪ ಅವರು ಲೋಕ ಕಲ್ಯಾಣಕ್ಕಾಗಿ ಕುಟುಂಬ ಸಮೇತ ರುದ್ರ ಹೋಮ್ ನಡೆಸಿದರು.
ಇದನ್ನೂ ಓದಿ-Hubballi News: ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ
ಹೌದು, ಲೋಕ ಸಮರಕ್ಕೆ ಈಶ್ವರಪ್ಪ ಅವರು ಪುತ್ರ ಕಾಂತೇಶರನ್ನ ಖಡಕ್ಕಿಳಿಸುವ ಪ್ಲ್ಯಾನ್ ಮಾಡಿದ್ದಾರೆ. ಈ ಹಿನ್ನಲೆ ಹಾವೇರಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆ ಈಗ ಪ್ರಾರಂಭವಾಗಿದೆ. ಹೌದು, ಸ್ಥಳೀಯ ನಾಯಕ ಜೊತೆ ಹಾಗೂ ಕ್ಷೇತ್ರದ ವಿವಿಧ ಮಠಾಧೀಶರನ್ನ ಈಶ್ವರಪ್ಪ & ಮಗ ಕಾಂತೇಶ ಅವರು ಬೇಟಿ ಮಾಡಿ ಆರ್ಶಿವಾದ ಪಡೆಯುತ್ತಿದ್ದಾರೆ.
ಈ ಬೆನ್ನಲ್ಲೇ ಇಂದು 200 ಕ್ಕೂ ಹೆಚ್ಚು ಶಾಸ್ತ್ರೀಗಳಿಂದ ನಗರದ ಸಿಂದಗಿ ಮಠದಲ್ಲಿ ರುದ್ರ ಹೋಮ ಶತರುದ್ರಾಭಿಷೇಕ ಮಾಡಲಾಯಿತ್ತು. ಈ ವೇಳೆ 'ಲೋಕ' ರಾಜಕೀಯ ಚುನಾವಣೆ ಕುರಿತು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ಪೋಟಕ ಹೇಳಿಕೆ ನೀಡಿದರು. ಹೌದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಕೆಲ ಹಿರಿಯರಿಗೆ ಟಿಕೆಟ್ ಮಿಸ್ಸಾಗಿತ್ತು.
ಇದೆ ಮಾದರಿಯಲ್ಲಿ ಲೋಕ ಸಭೆ ಚುನಾವಣೆಯಲ್ಲೂ ಟಿಕೆಟ್ ಮಿಸ್ ಆಗುತೆ ಅನ್ನೋ ಮಾತು ಮಾತು ಈಶ್ವರಪ್ಪ ಪರೋಕ್ಷವಾಗಿ ಹೇಳಿದ್ದಾರೆ. ಹಾವೇರಿಯ ಲೋಕಸಭಾ ಚುನಾವಣೆ ಇರಬಹುದು. ಯಾವುದೇ ಚುನಾವಣೆಗೆ ಟಿಕೆಟ್ ಮುಂದುವರಿಸುವ ಅವಶ್ಯಕತೆ ಇಲ್ಲ. ಹಾಲಿ ಸಂಸದರುಗಳಿಗೆ ಟಿಕೆಟ್ ಮುಂದುವರಿಸುವುದು ಬೇಡ ಎಂದು ಕೆಎಸ್ ಈಶ್ವರಪ್ಪ ಪರೋಪಕ್ಷವಾಗಿ ಹೇಳಿದರು. ಹತ್ತುಕ್ಕೂ ಹೆಚ್ಚು ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಮಿಸ್ಸಾಗಲಿದೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ಚರ್ಚೆ ಬೆನ್ನಲ್ಲೇ ಟಿಕೆಟ್ ಮುಂದುವರಿಸುವ ಅವಶ್ಯಕತೆ ಇಲ್ಲ ಎಂದ ಈಶ್ವರಪ್ಪ ಅವರ ಹೇಳಿಕೆ. ರಾಜ್ಯ ಬಿಜೆಪಿಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ....
ಒಟ್ಟಿನಲ್ಲಿ ಹಾವೇರಿ ಎಂಪಿ ಕ್ಷೇತ್ರದಲ್ಲಿ ಟಿಕೆಕ್ ಪೈಟ್ ಜೋರಾಗಿದ್ದು, ಬಿಜೆಪಿ ನಾಯಕರ ರಾಜಕೀಯ ಚಟುನಟಿಕೆ ಜೋರಾಗಿದೆ. ಇನ್ನು ಕೇಸರಿ ಘಟಾನುಘಟಿ ಕಲಿಗಳ ಟಿಕೆಟ್ ಕಾಳಗದಲ್ಲಿ 2024ರ ಹಾವೇರಿ ಲೋಕ ಕ್ಷೇತ್ರದ ಕೇಸರಿ ಕಲಿ ಯಾರಾಗ್ತಾರೆ ಅನ್ನೋದು ಕಾದು ನೋಡಬೇಕಿದೆ...
ಇದನ್ನೂ ಓದಿ-ರಾಜ್ಯದಲ್ಲಿ ನೈರುತ್ಯ ಮುಂಗಾರು ಮತ್ತೆ ದುರ್ಬಲ, ಆತಂಕದಲ್ಲಿ ರೈತ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ